ಬಿಸಿಯೂಟ ಸೇವಿಸಿ ಒಟ್ಟು 48 ವಿದ್ಯಾರ್ಥಿಗಳು ಅಸ್ವಸ್ಥ

Ravi Talawar
ಬಿಸಿಯೂಟ ಸೇವಿಸಿ ಒಟ್ಟು 48 ವಿದ್ಯಾರ್ಥಿಗಳು ಅಸ್ವಸ್ಥ
WhatsApp Group Join Now
Telegram Group Join Now

ಯಾದಗಿರಿ, ಜೂನ್.15: ಬಿಸಿಯೂಟ ಸೇವಿಸಿ ಒಟ್ಟು 48 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಿನ್ನೆ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ನಡೆದಿದೆ. ಯಾದಗಿರಿ  ಜಿಲ್ಲೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ನಾಲ್ಕು ಶಾಲೆಯ ಮಕ್ಕಳಲ್ಲಿ ವಾಂತಿ ಭೇದಿ ಕಂಡು ಬಂದಿದ್ದು ಒಟ್ಟು 48 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಜಿಲ್ಲಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.

ಈ ನಾಲ್ಕು ಶಾಲೆಗಳಿಗೂ ಖಾಸಗಿ ಶಿವಶಕ್ತಿ ಏಜೆನ್ಸಿಯಿಂದ ಆಹಾರ ಪದಾರ್ಥ ಸರಬರಾಜು ಆಗುತ್ತೆ. ನಿನ್ನೆ ಮಧ್ಯಾಹ್ನ ಬಿಸಿಯೂಟ ಸೇವಿಸಿದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದೆ. ಹೆಚ್ಚು ವಾಂತಿ ಭೇದಿಯಿಂದ ಬಳಲುತ್ತಿದ್ದ ಮೂರು ಮಕ್ಕಳಿಗೆ ಶಹಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ವಿದ್ಯಾರ್ಥಿಗಳಿಗೆ ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಸ್ಪತ್ರೆಗೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಜಿಲ್ಲಾ ಪಂಚಾಯತಿ ಸಿಇಒ ಹಾಗೂ ಜಿಲ್ಲಾಧಿಕಾರಿ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಣೆ ನಡೆಸಿದ್ದಾರೆ.

ಈ ವರ್ಷದ ಶೈಕ್ಷಣಿಕ ವರ್ಷ ಆರಂಭವಾಗಿದ್ದು ಕಳೆದ ಮೇ 31 ರಿಂದ ಶಾಲೆಗಳು ಆರಂಭವಾಗಿವೆ. ಹೀಗಾಗಿ ಮಕ್ಕಳು ಹೆಗಲಿಗೆ ಬ್ಯಾಗ್ ಹಾಕಿಕೊಂಡು ಶಾಲೆಗೆ ಬರ್ತಾಯಿದ್ದಾರೆ. ಇನ್ನು ದೂರದ ಊರಿನ ಮಕ್ಕಳು ಶಾಲೆ ಆರಂಭವಾಗಿದ್ದಕ್ಕೆ ಲಗೇಜ್ ಸಮೇತವಾಗಿ ಪಟ್ಟಣಕ್ಕೆ ಬಂದಿದ್ದಾರೆ. ಶಾಲೆ ಜೊತೆಗೆ ಹಾಸ್ಟೆಲ್ ಗಳು ಓಪನ್ ಆಗುತ್ತೆ ಅಂತ ವಿದ್ಯಾರ್ಥಿಗಳು ಲಗೇಜ್ ಸಮೇತವಾಗಿ ಬಂದಿದ್ದಾರೆ. ಆದ್ರೆ ವಿದ್ಯಾರ್ಥಿಗಳಿಗೆ ಶಾಕ್ ಎದುರಾಗಿದೆ ಯಾಕೆಂದ್ರೆ ಶಾಲೆಯೇನೋ ಆರಂಭವಾಗಿವೆ. ಆದ್ರೆ ಹಾಸ್ಟೆಲ್ ಗಳು ಮಾತ್ರ ಓಪನ್ ಆಗಿಲ್ಲ. ಇದು ಕೇವಲ ಸಮಾಜ ಕಲ್ಯಾಣ ಇಲಾಖೆಯ ವ್ತಾಪ್ತಿಗೆ ಬರುವ ಮೆಟ್ರಿಕ್ ಪೂರ್ವದ ಹಾಸ್ಟೆಲ್ ಗಳು ಮಾತ್ರ ಓಪನ್ ಆಗಿಲ. ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಎಸ್ಸಿ, ಎಸ್ಟಿ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರ 33 ಹಾಸ್ಟೆಲ್ ಗಳಿವೆ. ಆದ್ರೆ ಈ ಹಾಸ್ಟೆಲ್ ಗಳು ಶಾಲೆಗಳು ಪ್ರಾರಂಭವಾದ ದಿನದಿಂದ ಆರಂಭಿಸಬೇಕು ಆದ್ರೆ ಹಾಸ್ಟೆಲ್ ಗಳನ್ನ ಲಾಕ್ ಮಾಡಿಕೊಂಡು ಮಕ್ಕಳು ಬರದೆ ಹಾಗೆ ಮಾಡಿದ್ದಾರೆ. ಇದರಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article