ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ: 94 ಮಂದಿ ಸಾವು, ಹಲವರು ನಾಪತ್ತೆ

Ravi Talawar
ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ: 94 ಮಂದಿ ಸಾವು, ಹಲವರು ನಾಪತ್ತೆ
WhatsApp Group Join Now
Telegram Group Join Now

ನವದೆಹಲಿ,ಏಪ್ರಿಲ್​ 08: ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ ಸಂಭವಿಸಿದ್ದು, ಕಾಲರಾ ಭೀತಿಯಿಂದ ತವರಿಗೆ ತಳುತ್ತಿದ್ದ ಕನಿಷ್ಠ 94 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ದಕ್ಷಿಣ ಆಫ್ರಿಕಾದ ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿ ತೀರದ ಬಳಿ ದುರಂತ ಸಂಭವಿಸಿದ್ದು, 130 ಮಂದಿ ಪ್ರಯಾಣಿಸುತ್ತಿದ್ದ ಮೀನುಗಾರಿಕಾ ದೋಣಿ ಮುಳುಗಿ 94 ಮಂದಿ ಜಲ ಸಮಾಧಿಯಾಗಿದ್ದಾರೆ. ಮೊಜಾಂಬಿಕ್ ದ್ವೀಪದಿಂದ ನಂಪುಲಾ ದ್ವೀಪಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದ್ದು, ದೋಣಿಯಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ತುಂಬಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಮೀನುಗಾರಿಕಾ ದೋಣಿಯನ್ನು ಪ್ರಯಾಣಿಕಾ ದೋಣಿಯಾಗಿ ಮಾರ್ಪಡಿಸಲಾಗಿತ್ತು. ಆದರೆ ಈ ದೋಣಿ ಪ್ರಯಾಣಿಕರ ಸಾಗಣೆಗೆ ಯೋಗ್ಯವಾಗಿರಲಿಲ್ಲ ಎಂದು ಹೇಳಲಾಗಿದೆ. ಸತ್ತವರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ. ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಮುದ್ರದ ಪರಿಸ್ಥಿತಿಯು ಈ ಕಾರ್ಯಕ್ಕೆ ತೊಂದರೆಯನ್ನುಂಟು ಮಾಡುತ್ತಿದೆ.

ಇನ್ನು ಮೊಜಾಂಬಿಕ್​ನಲ್ಲಿ ಕಾಲರಾ ಪ್ರಕರಣಗಳು ಕೂಡ ಹೆಚ್ಚಿದ್ದು, ಅಕ್ಟೋಬರ್ 2023 ರಿಂದ ಸುಮಾರು 15,000 ಪ್ರಕರಣಗಳನ್ನು ವರದಿ ಮಾಡಿದೆ, 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದೋಣಿ ದೋಣಿ ಪ್ರಯಾಣಿಕರ ಸಾಗಣೆಗೆ ಯೋಗ್ಯವಾಗಿಲ್ಲ, ಸತ್ತವರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ. ಬದುಕುಳಿದ 5 ಜನರಲ್ಲಿ 2 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ದೋಣಿ ಮೊಜಾಂಬಿಕ್ ದ್ವೀಪದ ಕಡೆಗೆ ಹೋಗುತ್ತಿತ್ತು. ಈ ದ್ವೀಪವನ್ನು ವಾಸ್ಕೋ ಡ ಗಾಮಾ ಕಂಡುಹಿಡಿದಿದ್ದ ಎಂದು ಹೇಳಲಾಗಿದೆ.

ಮೊಜಾಂಬಿಕ್​ನಲ್ಲಿ ಹಲವು ಬಾರಿ ವಿನಾಶಕಾರಿ ಚಂಡಮಾರುತಗಳು ಎದುರಾಗುತ್ತವೆ. ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಮುದ್ರದ ಪರಿಸ್ಥಿತಿಯು ಈ ಕಾರ್ಯಕ್ಕೆ ತೊಂದರೆಯನ್ನುಂಟುಮಾಡುತ್ತಿದೆ. ಮೊಜಾಂಬಿಕ್​ನಲ್ಲಿ ಕಾಲರಾ ಪ್ರಕರಣಗಳು ಕೂಡ ಹೆಚ್ಚಿದೆ. ಅಕ್ಟೋಬರ್ 2023 ರಿಂದ ಸುಮಾರು 15,000 ಪ್ರಕರಣಗಳನ್ನು ವರದಿ ಮಾಡಿದೆ, 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಬದುಕುಳಿದ 5 ಜನರಲ್ಲಿ 2 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ದೋಣಿ ಮೊಜಾಂಬಿಕ್ ದ್ವೀಪದ ಕಡೆಗೆ ಹೋಗುತ್ತಿತ್ತು. ಈ ದ್ವೀಪವನ್ನು ವಾಸ್ಕೋ ಡ ಗಾಮಾ ಕಂಡುಹಿಡಿದಿದ್ದ ಎಂದು ಹೇಳಲಾಗಿದೆ. ಮೊಜಾಂಬಿಕ್​ನಲ್ಲಿ ಹಲವು ಬಾರಿ ವಿನಾಶಕಾರಿ ಚಂಡಮಾರುತಗಳು ಎದುರಾಗುತ್ತವೆ.

WhatsApp Group Join Now
Telegram Group Join Now
Share This Article