ದೇವದಾಸಿಯರ ಸಮೀಕ್ಷೆ ಸಮರ್ಪಕವಾಗಿ ನಡೆಯಲಿ : ಯು ಬಸವರಾಜ್

Ravi Talawar
ದೇವದಾಸಿಯರ ಸಮೀಕ್ಷೆ ಸಮರ್ಪಕವಾಗಿ ನಡೆಯಲಿ : ಯು ಬಸವರಾಜ್
WhatsApp Group Join Now
Telegram Group Join Now
ಬಳ್ಳಾರಿ.ಅ.09.. ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ದೇವದಾಸಿಯರ ಸಮೀಕ್ಷೆ ಅಸಮರ್ಪಕವಾಗಿದ್ದು ಅದನ್ನು ಸಮರ್ಪಕವಾಗಿ ನಡೆಸಿ ಸಮೀಕ್ಷೆಯಿಂದ ಹಲವು ತಾಂತ್ರಿಕ ತೊಂದರೆಗಳಿAದ ಹೊರಗುಳಿವಯುವವರನ್ನು ಸಹ ಸಮೀಕ್ಷೆಗೆ ಒಳಪಡಿಸಬೇಕೆಂದು ದೇವದಾಸಿ ಮಹಿಳೆಯರ ವಿಮೋಚನ ಸಂಘದ ರಾಜ್ಯ ಗೌರವಾಧ್ಯಕ್ಷ ಯು ಬಸವರಾಜ್ ಅಗ್ರಹಿಸಿದರು.
ಅವರು ಇಂದು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಸಮೀಕ್ಷೆಯನ್ನು ಮನೆ ಮನೆಗೆ ಹೋಗಿ ನಡೆಸಬೇಕು ಅದುಬಿಟ್ಟು ಕಛೇರಿಯಲ್ಲೇ ಒಂದು ಕಂಪ್ಯೂಟರ್ ಇಟ್ಟುಕೊಂಡು ಅಷ್ಟು ಜನರ ಸಮೀಕ್ಷೆ ನಡೆಸುವುದು ಸಾಧ್ಯವಾಗುವುದಿಲ್ಲ. ಮತ್ತು ಡಿಜಿಟಲ್ ಸಮೀಕ್ಷೆಗೆ ಸರ್ವರ್ ಮತ್ತು ಇಂಟರ್‌ನೆಟ್ ತೊಂದರೆಯಿದೆ ಮನೆ ಮನೆಗೆ ಹೋದಲ್ಲಿ ಸಮೀಕ್ಷೆ ಸಂಪೂರ್ಣವಾಗಿ ನಡೆಸಬಹುದು, ಅಥವಾ ಸಮೀಕ್ಷೆಯ ಬಗ್ಗೆ ಒಂದು ಕ್ಯಾಲೆಂಡರ್ ಸಿದ್ಧಪಡಿಸಿಕೊಂಡು ಒಂದು ಗ್ರಾಮ ಪಂಚಾಯಿತಿ ಒಂದು ದಿನದಂತೆ ಸಮೀಕ್ಷೆಗೆ ಕರೆದಲ್ಲಿ ಜನಜಂಗುಳಿಯನ್ನು ತಡೆಯಬಹುದು, ದೇವದಾಸಿ ಕುಟುಂಬದ ಮೂರು ತಲೆಮಾರುಗಳ ವಿವರಗಳನ್ನು ದಾಖಲಿಸಲು ಸಾಧ್ಯವಾಗಲಿದೆ ಎಂದರು.
ಮತ್ತು ಅತ್ಯಂತ ಮುಖ್ಯವಾಗಿ ದೇವದಾಸಿಪದ್ದತಿಗೆ ನೂಕುವ ದೇವದಾಸಿಯ ಜೊತೆ ಸಂಸಾರ ಮಾಡಿದ ಮತ್ತು ಮಕ್ಕಳ ಜನನಕ್ಕೆ ಕಾರಣವಾಗುವವರ ಮೇಲೆ ಆ ಕುಟುಂಬದ ಹೊಣೆಗಾರಿಕೆಯನ್ನು ಹೋರಿಸಬೇಕು ಇದರಿಂದ ಈ ಅನಿಷ್ಠ ಪದ್ಧತಿಯನ್ನು ತಡೆಗಟ್ಟಬಹುದು. ಬ್ರೀಟೀಷರ ಕಾಲದಲ್ಲೇ ಈ ಪದ್ದತಿಯನ್ನು ರದ್ದುಪಡಿಸಿದ್ದರೂ ಈವರೆಗೂ ಇದನ್ನು ಸಂಪೂರ್ಣವಾಗಿ ತೊಡೆದು ಹಾಕಲುಸಾಧ್ಯವಾಗಿಲ್ಲ, ಸ್ವಾತಂತ್ರö್ಯ ಬಂದು 75 ವರ್ಷ ಕಳೆದರೂ ಅವರಿಗೆ ಸಮರ್ಪಕ ರೀತಿಯಲ್ಲಿ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ ಮತ್ತು ಅವರಿಗೆ ಕೇವಲ ಮೂರು ಸಾವಿರ ರೂಪಾಯಿ ಪಿಂಚಣಿ ನೀಡುತ್ತಿದೆ ಅದು ಏತಕ್ಕೂ ಸಾಲುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹಲವು ಬೇಡಿಕೆಗಳ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಲಕ್ಷಿö್ಮ ಹೆಬ್ಬಾಳಕರ್, ಪ್ರಿಯಾಂಕ್ ಖರ್ಗೆ, ಮಹಾದೇವಪ್ಪ ಅವರಿಗೆ ಸಲ್ಲಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ವಿಮೋಚನ ಸಂಘದ ಹುಲಿಗೆಮ್ಮ, ಈರಮ್ಮ, ಎ.ಸ್ವಾಮಿ, ವೀರೆಶ್, ರಮೇಶ್ ಸೇರಿದಂತೆ ಹಲವರಿದ್ದರು.
WhatsApp Group Join Now
Telegram Group Join Now
Share This Article