ಬಳ್ಳಾರಿ,ಮೇ.೧3,: ಬಳ್ಳಾರಿ ನಗರದ ಹೃದಯ ಭಾಗದಲ್ಲಿರುವ ಶ್ರೀ ವಾಸವಿ ವಿದ್ಯಾಲಯದ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶವು ಶೇಕಡವಾರು ಅತ್ಯುನ್ನತ ಮಟ್ಟದಲ್ಲಿದೆ.
ಶಾಲೆಯ ವಿದ್ಯಾರ್ಥಿ ಅರುಣ್. ಆರ್. ಎಸ್. ಜಿ ೬೧೨ (೯೮%) ಅಂಕಗಳು ಗಳಿಸುವುದರ ಮೂಲಕ ಬಳ್ಳಾರಿ ಜಿಲ್ಲೆಗೆ ೯ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ.
ಶಾಲೆ ಶೇಕಡ ೨೩% ಡಿಸ್ಟಿಂಕ್ಷನ್ ಹಾಗೂ ಶೇಕಡ ೪೦% ಪ್ರಥಮ ಸ್ಥಾನದ ಶ್ರೇಣಿ ಪಡೆದುಕೊಂಡಿದೆ.
ವಿದ್ಯಾರ್ಥಿಗಳ ಸಾಧನೆ ಶಾಲೆಗೆ ಹೆಮ್ಮೆ ತಂದಿದ್ದು ಬಳ್ಳಾರಿ ಜಿಲ್ಲೆ, ಕುರುಗೋಡು, ಪಶ್ಚಿಮ ವಲಯದಲ್ಲಿ ಶ್ರೀ ವಾಸವಿ ಶಾಲೆಯ ವಿದ್ಯಾರ್ಥಿ ಮೂರನೇ ಸ್ಥಾನ ಪಡೆದು ಕೊಂಡಿದ್ದಾನೆ.
ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಳಕ್ಕೆ ಶ್ರಮಿಸಿದ ಶಾಲಾ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ, ಹಾಗೂ ಸಹಕರಿಸಿದ ಪೋಷಕರಿಗೂ ಶ್ರೀ ವಾಸವಿ ಎಜ್ಯುಕೇಷನ್ ಟ್ರಸ್ಟ್ನ ಅಧ್ಯಕ್ಷರಾದ ಪೋಲಾ ಬಸವರಾಜ, ಕಾರ್ಯದರ್ಶಿಗಳಾದ ಪಿ. ಎನ್. ಸುರೇಶ್, ಮತ್ತು ಸದಸ್ಯರು ಧನ್ಯವಾದಗಳನ್ನು ತಿಳಿಸಿದರು.
ಈ ವರ್ಷದ ಫಲಿತಾಂಶ ಮತ್ತಷ್ಟು ಉತ್ತಮಗೊಳಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಶಾಲಾ ಮುಖ್ಯೋಪಾಧ್ಯಯರಾದ ವೀರೇಶ್‌ರವರು ತಿಳಿಸಿದರು.