ಬಾಲ, ಕಿಶೂರ ಕಾರ್ಮಿಕ ಪದ್ಧತಿ ಕುರಿತು ಬೀದಿ ನಾಟಕ

MK HasiruKranti
ಬಾಲ, ಕಿಶೂರ ಕಾರ್ಮಿಕ ಪದ್ಧತಿ ಕುರಿತು ಬೀದಿ ನಾಟಕ
WhatsApp Group Join Now
Telegram Group Join Now
ಬಳ್ಳಾರಿ, ಮಾ.26: ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಳ್ಳಾರಿ, ಜಿಲ್ಲಾ ಕಾರ್ಮಿಕ ಇಲಾಖೆ ಬಳ್ಳಾರಿ, ಜಿಲ್ಲಾ ಬಾಲಕಾರ್ಮಿಕ ಯೋಜನೆ ಸೊಸೈಟಿ ಬಳ್ಳಾರಿ, ಹಾಗೂ ಅಕ್ಷಯ ಕಲಾ ಟ್ರಸ್ಟ್ ಹೊಸ ಯರಗುಡಿ, ಇವರು ಸಂಯುಕ್ತ ಆಶ್ರಯದಲ್ಲಿ, ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕು, ಗ್ರಾಮಂತರ, ಕುರುಗೋಡು, ಕುರುಗೋಡು ಗ್ರಾಮಾಂತರ, ಸಂಡೂರು, ಸಂಡೂರು ಗ್ರಾಮಂತರ, ಈ ತಾಲೂಕುಗಳಲ್ಲಿ ಆಯ್ಕೆ ಆದಂತಹ 12 ಗ್ರಾಮಗಳಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಗಳ ಕುರಿತು ಬೀದಿ ನಾಟಕ ಜಾಗೃತಿ ಹಾಡುಗಳು ಮೂಲಕ ಜನರಿಗೆ ಜಾಗೃತಿ ಮೂಡಿಸಲಾಯಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಎನ್ ರಾಜೇಶ್ ಹೊಸಮನಿ ಸರ್  ನ್ಯಾಯಾಧೀಶರು ಉದ್ಘಾಟಿಸಿದರು ಇವರ ಜೊತೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಮಹಮದ್ ಜುಬೇರ್ ಮತ್ತು ಕಾರ್ಮಿಕ ಅಧಿಕಾರಿಗಳು ಯೋಜನೆ ನಿರ್ದೇಶಕರಾದ ಮೌನೇಶ್ ಸರ್,  ಮಹಿಳಾ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು,ವಿವಿಧ ಸಂಘ-ಸಂಸ್ಥೆಯವರು, ಮಕ್ಕಳ ಕಲ್ಯಾಣ ಸಮಿತಿಯವರು  ಅಕ್ಷಯ ಟ್ರಸ್ಟ್ ಮತ್ತು ಸಿರುಗುಪ್ಪ ನೇತ್ರಕಲಾ ಸಂಘ ಇನ್ನು ಅನೇಕ ಕಲಾವಿದರು  ಜಿಲ್ಲೆಯ ಐದು ತಾಲೂಕುಗಳಲ್ಲಿ ಬೀದಿ ನಾಟಕ ಜಾಗೃತಿ ಹಾಡುಗಳು ಮೂಲಕ ತಂಡದವರು ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿರುತ್ತಾರೆಂದು ಈ ಮೂಲಕ ಕೇಳಿಕೊಳ್ಳುತ್ತೇವೆ ಈ ಕಾರ್ಯಕ್ರಮದಲ್ಲಿ ಕಲಾವಿದರಗಳಾದ ಹೆಚ್,ಜಿ ಸುಂಕಪ್ಪ, ಎಸ್ ಎಂ ಹುಲುಗಪ್ಪ, ಎಚ್ ರಮೇಶ್, ಡಿ ಹೇಮಂತ್, ಆರ್ ವಿಜಯ್, ನಾಗಮೂರ್ತಿ, ಮಾರಣ್ಣ, ವೀರೇಶ್ ದಳವಾಯಿ, ಹುಸೇನಪ್ಪಾ, ಮಮತಮ್ಮ, ರಾಮಣ್ಣ ಇನ್ನು ಅನೇಕ ಕಲಾವಿದರ ಸೇರಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ ಕೊಟ್ಟಿರುತ್ತಾರೆ
WhatsApp Group Join Now
Telegram Group Join Now
Share This Article