ಇಂಡಿ ಇಂಡಿಯ ಶ್ರೀ ಶಾಂತೇಶ್ವರ ಶಾಲೆಯಲ್ಲಿ ೧೯೮೯- ೯೦ ರಲ್ಲಿ ಎಸ್ಸೆಸ್ಸೆಲ್ಸಿ ಕಲಿತ ವಿದ್ಯಾರ್ಥಿಗಳು ದಿವಂಗತ ಸುರೇಶ ಕೋಳೆಕರ ಇವರ ಹೆಸರಿನಲ್ಲಿ ಇಟ್ಟ ರೂ ಹತ್ತು ಸಾವಿರ ರೂ ಬಹುಮಾನ ಪಟ್ಟಣದ ಸರಕಾರಿ ಶಾಲೆಯ ವಿದ್ಯಾರ್ಥಿ ಅಜಯಕುಮಾರ ಮೊಕಲಾಜಿ ವಿದ್ಯಾರ್ಥಿಗೆ ನೀಡಲಾಗಿದೆ.
೭೯ ನೆಯ ಸ್ವಾತಂತ್ಯ್ರೋತ್ಸವ ನಿಮಿತ್ಯ ನಡೆದ ಸಮಾರಾಂಭದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ವಿದ್ಯಾರ್ಥಿಗೆ ಚೆಕ್ಕು ವಿತರಿಸಿದರು.
ತಾಲೂಕಿಗೆ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಗುರುಗಳಾದ ಸುರೇಶ ಕೋಳೆಕರ ಸ್ಮರಣಾರ್ಥ ಇಡಲಾಗಿತ್ತು.
ವಿದ್ಯಾರ್ಥಿ ಬಳಗದ ನ್ಯಾಯವಾದಿ ರಮೇಶ ಕುಲಕರ್ಣಿ, ಶಿಕ್ಷಕ ದಶರಂಥ ಕೋರಿ,ರವಿ ವಂದಾಲ, ಪ್ರದೀಪ ಮುರಗುಂಡಿ, ರಶೀದ ತೋಳನೂರ ಮತ್ತಿತರರು ಪಾಲ್ಗೊಂಡಿದ್ದರು.