ಹನೂರು,ಏಪ್ರಿಲ್ 11: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ಜಾನುವಾರುಗಳಿಗೆ ಮೆವು ಸಿಗದೆ ತೊಂದರೆ ಪಡುವಂತಾಗಿದೆ ಈ ಕೂಡಲೆ ತಾಲ್ಲೂಕು ಆಡಳಿತ ಮಂಡಳಿಯು ಸಕಾಲಕ್ಕೆ ಮೆವುಗಳನ್ನು ಒದಗಿಸಿ ಎಲ್ಲಾ ಜಾನುವಾರುಗಳನ್ನು ಕಾಪಾಡಬೇಕಾಗಿದೆ ಕಾಂಗ್ರೆಸ್ ಮುಖಂಡರಾದ ಉದ್ಯಮಿ ಪೊನ್ನಾಚಿ ರಂಗಸ್ವಾಮಿತಿಳಿಸಿದರು .
ತಹಶಿಲ್ದಾರರವರಿಗೆ ದೂರವಾಣಿ ಮುಖಾಂತರ ಮಾತನಾಡಿದ ಅವರು ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳು ಸೇರಿದಂತೆ ಪೊನ್ನಾಚಿ, ಇನ್ನು ಮುಂತಾದ ಗ್ರಾಮಗಳಲ್ಲಿ ಜಾನುವಾರುಗಳು ಕಾಡನ್ನೆ ಹೆಚ್ಚಾಗಿ ಆಶ್ರಯಿಸಿರುವುದರಿಂದ ಅವುಗಳಿಗೆ ಮಳೆಯಿಲ್ಲದೆ ಮೇವು ಸಿಗದ ಕಾರಣ ಪ್ರಾಣಿಗಳು ತುಂಬಾ ಸೊರಗಿವೆ ಅದ್ದರಿಂದ ಮೇಲ್ಕಂಡ ಪಂಚಾಯತಿಗಳಿಗೆ ತಾಲ್ಲೂಕು ಆಡಳಿತವು ಮೇವು ಒದಗಿಸುವ ಕಾರ್ಯವನ್ನು ಗೋ ಶಾಲೆಗಳ ನಿರ್ಮಾಣ ಮಾಡಬೇಕೆಂದು ತಹಸೀಲ್ದಾರ್ ಗುರುಪ್ರಸಾದ್ ರಿಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ತಹಶಿಲ್ದಾರರಾದ ಗುರು ಪ್ರಸಾದ್ ಮಾತನಾಡಿ ನಾವು ನಮ್ಮ ತಾಲ್ಲೂಕಿನಲ್ಲಿ ಈಗಾಗಲೇ ಗೋಶಾಲೆ ಪ್ರಾರಂಬಿಸಿದ್ದು ಇನ್ನು ಹಲವೆಡೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮೇವುಗಳನ್ನು ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಪುಟ್ಟಸ್ವಾಮಿ ಬೆಟ್ಟ .ರವಿಕುಮಾರ್ . ದಾಸಪ್ಪ , ಮುನಿಬಸವೇಗೌಡ .ಮುನಿಮಾರ ,ಚಲ್ಲಚಾರಿ ಒಳಗೊಂಡಂತೆ ಗ್ರಾಮಸ್ಥರು ಹಾಜರಿದ್ದರು.