ಬಳ್ಳಾರಿ ಸಾರಿಗೆ ಕಚೇರಿಯಲ್ಲೇ ಚಾಲನಾ ಪರವಾಗಿ ನವೀಕರಣ ಮಾಡಿಕೊಡಿ : ಲಾರಿ ಚಾಲಕರ ಸಂಘದಿಂದ ಮನವಿ

Ravi Talawar
ಬಳ್ಳಾರಿ ಸಾರಿಗೆ ಕಚೇರಿಯಲ್ಲೇ ಚಾಲನಾ ಪರವಾಗಿ ನವೀಕರಣ ಮಾಡಿಕೊಡಿ : ಲಾರಿ ಚಾಲಕರ ಸಂಘದಿಂದ ಮನವಿ
WhatsApp Group Join Now
Telegram Group Join Now
ಬಳ್ಳಾರಿ ಸೆ 2: ಲಾರಿ ಚಾಲಕರ ಚಾಲನ ಪರವಾನಿಗೆಯನ್ನು ನವೀಕರಣಗೊಳಿಸಲು ಬಳ್ಳಾರಿಯಿಂದ ದೂರದ ಕಲಬುರ್ಗಿಗೆ ಹೋಗಿ ನವೀಕರಣ ಮಾಡಿಸಿಕೊಂಡು ಬರಬೇಕಿದೆ. ಇದಕ್ಕಾಗಿ ಎರಡು ಮೂರು ದಿನಗಳ ಸಮಯ ಮತ್ತು ಸಾವಿರಾರು ರೂಪಾಯಿಗಳು ಖರ್ಚಾಗುತ್ತದೆ. ಇದರಿಂದ ಬಡ ಲಾರಿ ಚಾಲಕರಿಗೆ ತೊಂದರೆಯಾಗುತ್ತದೆ. ಕಾರಣ ಈ ಮೊದಲು ಇದ್ದಂತೆ ಬಳ್ಳಾರಿ ಸಾರಿಗೆ ಕಚೇರಿಯಲ್ಲಿಯೇ ಲಾರಿ ಚಾಲಕರ ಪರವಾನಿಗೆಯನ್ನು ನವೀಕರಣ ಮಾಡಿಕೊಡಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಲಾರಿ ಚಾಲಕರ ಸಂಘದ ಬಳ್ಳಾರಿ ಜಿಲ್ಲಾ ಘಟಕ ಅಧ್ಯಕ್ಷ ಸೈಯದ್ ಅಜಂ ಮತ್ತು ಪದಾಧಿಕಾರಿಗಳು ನಗರದ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದರು.
ಸಾರಿಗೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ ಮಾತನಾಡಿದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸೈಯದ್ ಅಜಂ  ಮೊದಲು ಬಳ್ಳಾರಿ ಜಿಲ್ಲೆಯ ಲಾರಿ ಚಾಲಕರು ಧಾರವಾಡ ಸಾರಿಗೆ ಇಲಾಖೆ ಕಚೇರಿಗೆ ಹೋಗಿ ತಮ್ಮ ಪರವಾಗಿಯನ್ನು ನವೀಕರಣ ಮಾಡಿಕೊಂಡು ಬರಬೇಕಾಗಿತ್ತು, ನಂತರ ಬಳ್ಳಾರಿ ಕಚೇರಿಯಲ್ಲಿ ಮಾಡಿಕೊಡಲಾಗುತ್ತಿತ್ತು. ಈಗ ಅದನ್ನು ಕಲಬುರ್ಗಿ ಸಾರಿಗೆ ಇಲಾಖೆಗೆ ವರ್ಗಾಯಿಸಲಾಗಿದೆ. ಬಳ್ಳಾರಿಯಿಂದ ಕಲ್ಬುರ್ಗಿಗೆ ಹೋಗಿ ಬರಲು ಹಣಕಾಸಿನ ಅಭಾವದಿಂದ ಚಾಲನಾ ಪರವಾಗಿಯನ್ನು ನವೀಕರಣ ಮಾಡಿಸಿಕೊಳ್ಳಲಾಗುತ್ತಿಲ್ಲ. ಕಾರಣ ಲಾರಿ ಚಾಲಕರ  ಪರವಾನಿಗೆಯನ್ನು ಬಳ್ಳಾರಿ ಜಿಲ್ಲಾ ಸಾರಿಗೆ ಕಚೇರಿಯಲ್ಲಿ ನವೀಕರಣ ಮಾಡಿಕೊಡಬೇಕೆಂದು  ಸಾರಿಗೆ ಅಧಿಕಾರಿಗಳಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಲಾರಿ ಚಾಲಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಎಂಬಿ ಮಸ್ತಾನ್, ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷರಾದ ಆಂತೋನಿ ನಿರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್, ನಗರ ಅಧ್ಯಕ್ಷ ಎನ್ ಪಾಂಡು ನಾಯಕ್, ಜಿಲ್ಲಾ ಕಾರ್ಯಧ್ಯಕ್ಷ ಸುಧಾಕರ್, ಸಿರುಗುಪ್ಪ ತಾಲೂಕು ಅಧ್ಯಕ್ಷ ಮೆಹಬೂಬ್ ಬಾಷಾ, ಉಪಾಧ್ಯಕ್ಷ ಖಾದ್ರಿ ಪ್ರಧಾನ ಕಾರ್ಯದರ್ಶಿ, ಮತ್ತು ಮಿಂಚೇರಿ ಗ್ರಾಮ ಘಟಕದ ಅಧ್ಯಕ್ಷ ಬಿ ಮೌಲಾಸಾಬ್ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಹುಸೇನ್ ಬಾಷಾ ಸೇರಿದಂತೆ ಇತರರು ಇದ್ದರು.
WhatsApp Group Join Now
Telegram Group Join Now
Share This Article