ಬೆಳಗಾವಿ. ಪ್ರಸಕ್ತ ರಾಜ್ಯಾದ್ಯಂತ ಮಳೆ ಕೊರತೆ, ಅಸಮರ್ಪಕ ಬೆಳೆ ಪರಿಹಾರ, ಪರಿಹಾರದ ಹಣ ಸಾಲದ ಮೊತ್ತಕ್ಕೆ ಜಮಾ, ಸೇರಿ ನಾನ ಕಾರಣದಿಂದ ಬಸವಳಿದಿರುವ ರೈತರಿಗೆ ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಕೆಲ ಬಿತ್ತನೆ ಬೀಜಗಳ ದರಗಳನ್ನು, ಏಕಾಏಕಿ ಹೆಚ್ಚಿಸಿರುವುದು ರೈತರ ಗಾಯಕ್ಕೆ ಉಪ್ಪು ಸವರಿದ ಅನುಭವ ನೀಡತೊಡಗಿದೆ.
ಅಲ್ಲದೆ ಸರ್ಕಾರದ ಅನಿರೀಕ್ಷಿತ ಕ್ರಮದಿಂದ ಮುಂಗಾರು ಬಿತ್ತನೆಗೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಬೀಜ ಖರೀದಿಗೆ ರೈತ ಸಂಪರ್ಕ ಕೇಂದ್ರಕ್ಕೆ ದೌಡಾಯಿಸುತ್ತಿರುವ ರೈತರು ಬದಲಾದ ದರ ಕೇಳಿ ಕಂಗಾಲಾಗಿದ್ದಾರೆ, ಕೆಲವರು ಗೊಂದಲಕ್ಕೀಡಾಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳ ಜತೆ ವಾಗ್ವಾದಕ್ಕೆ ಮುಂದಾಗುತ್ತಿದ್ದಾರೆ.
ರಾಜ್ಯದ ಬಹುತೇಕ ತಾಲೂಕುಗಳನ್ನು, ಸರ್ಕಾರವೇ ಬರ ಪೀಡಿತವೆಂದು ಘೋಷಿಸಿದೆ. ಹೀಗಿದ್ದರೂ ವಾಸ್ತವ ಅರಿಯದೆ ಬಿತ್ತನೆ ಬೀಜದ ದರ ಏರಿಕೆ ಮಾಡಿದ್ದರಿಂದ ಬೀಜ ಖರೀದಿಗೂ ರೈತರು ಸಾಲ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಗಾರಿನಲ್ಲಿ ಬಿತ್ತನೆಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರ ಬಿತ್ತನೆ ಬೀಜದ ದರ ನಿಗದಿಪಡಿಸಬೇಕು.
ವಿವಿಧ ರೀತಿಯಿಂದ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಬಿತ್ತನೆ ಬೀಜದ ಬೆಲೆಯನ್ನು ಕಡಿಮೆ ಮಾಡಿ ಅನುಕೂಲಮಾಡಿಕೊಡಬೇಕಿದ್ದು, ರಾಜ್ಯ ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ನಷ್ಟವಾಗಲಿದೆ. ಹತ್ತಾರು ಎಕರೆ ಬಿತ್ತನೆ ಭೂಮಿಮಾಡಬೇಕಾಗಿರುವ ರೈತರಿಗೆ ಸಾವಿರ ರೂ. ಹೊರೆ ಬೀಳುತ್ತದೆ.
ಬಯಲು ಸೀಮೆ ಅದರಲ್ಲೂ ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾದ ತೊಗರಿ, ಹೆಸರು ಮತ್ತು ಜೋಳ ಬಿತ್ತನೆ ಬೀಜಗಳ ದರ ಹೆಚ್ಚಳವಾಗಿದೆ. ಹೆಸರು (5ಕೆಜಿ) ಕಳೆದ ವರ್ಷ 501 ಈ ಬಾರಿ 785 ತೋಗರಿ 5ಕೆಜಿ) ಕಳೆದ ವರ್ಷ 525 ಈ ಬಾರಿ 770
ಜೋಳ 5ಕೆಜಿ) ಕಳೆದ ವರ್ಷ 202ಈ ಬಾರಿ 285 ಸೋಯಾಬಿನ್ ಈ ರೀತಿಯಾಗಿ ಬಿತ್ತನೆ ಬೀಜದ ಬೆಲೆಯನ್ನು ಹೆಚ್ಚಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸಂಪನ್ಮೂಲ ಕ್ರೋಢಿಕರಿಸಲು ರಾಜ್ಯ ಸರ್ಕಾರ ರೈತರ ಮೇಲೆ ನಾನ ವಿಧದ ಹೊರೆಯನ್ನು ಹೇರಿದೆ.
ಬರ ಪರಿಹಾರ ವಿತರಣೆಯಲ್ಲಿ ರಾಜ್ಯ ಸರ್ಕಾರ ರೈತರಿಗೆ ಸಮರ್ಪಕ ರೀತಿಯಲ್ಲಿ ಬೆಳೆ ಪರಿಹಾರ ನಿಡಿಲ್ಲ, ಕೇವಲ ಶೇಕಡಾ 40% ರೈತರಿಗೆ ದೊರಕಿದ್ದು, ಬಾಕಿ ಉಳಿದಿರುವ ಶೇಕಡಾ 60% ರೈತರಿಗೆ ಸೂಕ್ತ ರೀತಿಯಲ್ಲಿ ಪರಿಹಾರ ಮಾಡಬೇಕೆಂದು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಬೆಳಗಾವಿ ವತಿಯಿಂದ ಆಗ್ರಹಿಸುತ್ತವೆ.
ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯಿಂದ ಕರ್ನಾಟಕ ರಾಜ್ಯದ ರೈತರಿಗೆ ನ್ಯಾಯಕೊಡಿಸಬೇಕೆಂದು ಬೆಳಗಾವಿ ಜಿಲ್ಲಾ ಬಿಜೆಪಿ ರೈತ ಮೋರ್ಚಾವತಿಯಿಂದ ಬೆಳಗಾವಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಮುಕಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಾ.ಜ.ಪಾ ಬೆಳಗಾವಿ ಗ್ರಾಮಂತರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಜಗದೀಶ್.ಬೂದಿಹಾಳ, ಮಹಾನಗರ ಅಧ್ಯಕ್ಷ ಕಲ್ಲಪ್ಪ.ಶಹಪೂರಕರ, ಚಂದ್ರಶೇಖರಯ್ಯ ಹಿರೇಮಠ, ಸುನಿಲ್ ವೀರೇಶನವರ, ಜಿಲ್ಲಾ ಮಾಧ್ಯಮ ವಕ್ತಾರ ಸಚಿನ್ ಕಡಿ, ಜಿಲ್ಲಾ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಹಡಪದ, ಜಿಲ್ಲಾ ಎಸ್.ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮರಶೆಟ್ಟಿ, ಬಸವರಾಜ ಅರಳಿಕಟ್ಟಿ, ಅಜಿತ್ ಪಾಟೀಲ್, ಕೊನೇರಿ ಬಾಳೆಕುಂದ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು..