ರಾಜ್ಯದ 12 ನದಿಗಳಿಗೆ ವಿಷಪ್ರಾಶನ: ಕುಡಿಯಲು ನೀರು ಅಸುರಕ್ಷಿತವೆಂಬ ವರದಿ ಬಹಿರಂಗ

Ravi Talawar
ರಾಜ್ಯದ 12 ನದಿಗಳಿಗೆ ವಿಷಪ್ರಾಶನ: ಕುಡಿಯಲು ನೀರು ಅಸುರಕ್ಷಿತವೆಂಬ ವರದಿ ಬಹಿರಂಗ
WhatsApp Group Join Now
Telegram Group Join Now

ಬಾಗಲಕೋಟೆ, ಅಕ್ಟೋಬರ್ 25: ಜನರು ಕುಡಿಯಲು ಉಪಯೋಗಿಸುವ ಕರ್ನಾಟಕದ 12 ನದಿಗಳ ನೀರಿನ ಗುಣಮಟ್ಟದ ಕುರಿತು ಆಘಾತಕಾರಿ ವರದಿ ಹೊರಬಿದ್ದಿದೆ. ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ‌ಮಂಡಳಿ ನೀಡಿದ ವರದಿ ಬೆಚ್ಚಿ ಬೀಳಿಸುವಂತಿದೆ. ಜೀವನದಿ ಕಾವೇರಿ , ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿನೀರು ಸೇರಿದಂತೆ 12 ನದಿಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ತಿಳಿಸಿದೆ. ವರದಿಯಲ್ಲಿ ಕೃಷ್ಣಾ ನದಿ ಸಿ ದರ್ಜೆಯಲ್ಲಿ ಗುರುತಿಸಿಕೊಂಡಿರುವುದು ಉತ್ತರಕರ್ನಾಟಕ, ಹೈದರಾಬಾದ್ ಕರ್ನಾಟಕದ ಕೃಷ್ಣಾ ತೀರದ ಜನರಿಗೆ ಆತಂಕ ಮೂಡಿಸಿದೆ.

ಬಾಗಲಕೋಟೆ ಜಿಲ್ಲೆಯ 205 ಹಳ್ಳಿಹಳಿಗೆ ಕೃಷ್ಣಾ ನದಿ‌ನೀರು ಜೀವಜಲವಾಗಿದೆ‌. ಈ ಹಳ್ಳಿಗಳ ಜನರ ದಾಹ ನೀಗಿಸುವ ಕೃಷ್ಣಾ ನದಿ ಕಲ್ಮಶವಾಗುತ್ತಿದೆ‌. ನೋಡಲು ತಿಳಿಯಾಗಿ ಕಂಡರೂ ಅಗೋಚರವಾಗಿರುವ ಕಲ್ಮಶ ಜನರ ದೇಹ ಸೇರುತ್ತಿದೆ ಎಂಬ ಸಂಶಯ ಶುರುವಾಗಿದೆ.

WhatsApp Group Join Now
Telegram Group Join Now
Share This Article