ಬುದ್ಧ, ಬಸವ, ಅಂಬೇಡ್ಕರರ ಮೂಲ ತತ್ವ ಒಂದೇ : ಪ್ರೊ.ಬಿ.ಎ.ಪಾಟೀಲ

Ravi Talawar
ಬುದ್ಧ, ಬಸವ, ಅಂಬೇಡ್ಕರರ ಮೂಲ ತತ್ವ ಒಂದೇ : ಪ್ರೊ.ಬಿ.ಎ.ಪಾಟೀಲ
WhatsApp Group Join Now
Telegram Group Join Now
ಕಾಗವಾಡ :ಭಾರತೀಯ ಐತಿಹಾಸಿಕ ಪರಂಪರೆಯಲ್ಲಿ ಗೌತಮ ಬುದ್ಧನ ತಾತ್ವಿಕ ಅನುಸಂಧಾನವು ಜನರ ನಡುವಿನ ಅಸಮಾನತೆ ನಿವಾರಿಸಿ ಸಮ ಸಮಾಜದ ನಿರ್ಮಾಣ ಮಾಡುವಲ್ಲಿ ಹಿರಿದಾದ ಪಾತ್ರ ಸಾಕ್ಷೀಕರಿಸಿದಂತಿದೆ ಎಂದ ಆಯುಷ್ಮಾನ ಸುಭಾಷ ಧಾಲೆ ರಾಜ್ಯ ಮುಖ್ಯ ಕಾರ್ಯದರ್ಶಿ ಭಾರತೀಯ ಬುದ್ಧ ಮಹಾಸಭಾ ಇವರು ಸ್ಥಳೀಯ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ ಪ್ರಾಯೋಜಿತ ಸಮಾಜ ವಿಜ್ಞಾನಗಳ ಸಂಘ ಹಾಗೂ ವಿಜ್ಞಾನ ವಿಭಾಗಗ ಸಂಯುಕ್ತಾಶ್ರಯದಲ್ಲಿ ಜರುಗಿದ “ಬುದ್ಧ ಪೌರ್ಣಿಮೆ”ಯ ನಿಮಿತ್ಯ ಆಯೋಜಿಸಿಲಾಗಿದ್ದ “ಭಾರತೀಯ ಸಂಸ್ಕೃತಿ ಮತ್ತು ಸಮಾಜದ ಮೇಲೆ ಬೌದ್ಧ ಧರ್ಮದ ಪ್ರಭಾವ” ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಪ್ರೊ.ಬಿ.ಎ.ಪಾಟೀಲ ಇವರು ಬುದ್ಧ, ಬಸವ, ಅಂಬೇಡ್ಕರರ ಮೂಲ ತತ್ವ ಒಂದೇ ಆಗಿರುತ್ತದೆ. ಈ ಎಲ್ಲ ಮಹಾನ ಚೇತನರು ಸಮಾಜದಲ್ಲಿ ಸತ್ಯವನ್ನು ಬಿತ್ತಿದರು. ಆಶಯೇ ದು:ಖಕ್ಕೆ ಮೂಲ ಎಂಬ ತತ್ವವನ್ನು ಜಗತ್ತಿಗೆ ಸಾರಿದರು ಎಂದು ಹೇಳಿದರು.
 ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಎಸ್.ಎ.ಕರ್ಕಿಯವರು ಭರತ ಖಂಡದಲ್ಲಿ ಜನಿಸಿದ ಬುದ್ಧ ಏಶಿಯಾದ ಬೆಳಕಾಗಿ ಅಷ್ಟಾಂಗ ಮಾರ್ಗಗಳ ಮೂಲಕ ಜಡ ಜಗತ್ತನ್ನು ಚೇತನಾ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಬುದ್ಧನ ಪಾತ್ರ ಮಹತ್ತರವಾಗಿದೆ ಎಂದರು.
 ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನಗಳ ಸಂಘದ ಕಾರ್ಯಾಧ್ಯಕ್ಷರಾದ ಡಾ.ಆರ್.ಎಸ್.ಕಲ್ಲೋಳಿಕರ ವಿಚಾರ ಸಂಕಿರಣ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸ್ವಾಗತಿಸಿದರು. ಕಾರ್ಯಕ್ರಮದ ಮಧ್ಯದಲ್ಲಿ ಬುದ್ಧ ವಂದನೆ ಸಲ್ಲಿಸಲಾಯಿತು. ಪ್ರೊ.ಎಸ್.ಎಂ.ಪರಗೌಡಾ ಹಾಗೂ ಪ್ರೊ.ಜಿ.ಎ.ಕೊರಬು ನಿರೂಪಿಸಿದರೆ, ಡಾ.ಚಂದ್ರಶೇಖರ. ವೈ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಂಘಟನೆಯ ಪದಾಧಿಕಾರಿಗಳು, ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಹಾಜರಿದ್ದರು.
WhatsApp Group Join Now
Telegram Group Join Now
Share This Article