ಬಳ್ಳಾರಿ :01. ಒಳ ಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ 150 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ನಿವೃತ್ತಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕ ಸದಸ್ಯ ಆಯೋಗವನ್ನು ರಚಿಸಿತು, ನಾಗಮೋಹನ್ ದಾಸ್ ಅಲೆಮಾರಿ ಜನಾಂಗಕ್ಕೆ ಶೇಕಡ ಒಂದು ಮೀಸಲಾತಿಯನ್ನು ನೀಡುವಂತೆ ಸರ್ಕಾರಕ್ಕೆ ವೈಜ್ಞಾನಿಕ ವರದಿಯನ್ನು ಸಹ ಸಲ್ಲಿಸಿದರು. ಆದರೆ ಸರ್ಕಾರ ಆಗಸ್ಟ್ 19ರಂದು ಸಭೆಯನ್ನು ನಡೆಸಿ ಅಲೆಮಾರಿ ಸಮುದಾಯವನ್ನು ಎ ಗ್ರೂಪ್ ನಿಂದ ಹೊರಗಿಡಲು ತೀರ್ಮಾನಿಸಿದ್ದಾರೆ ಇದರಿಂದ ಸಮಾಜದಲ್ಲಿ ಅತ್ಯಂತ ನಿಕೃಷ್ಟ ಪರಿಸ್ಥಿತಿಯಲ್ಲಿರುವ ಅಲೆಮಾರಿ ಜನಾಂಗಕ್ಕೆ ಅನ್ಯಾಯ ಮಾಡಿದರು, ಸರ್ಕಾರದ ಈ ಕ್ರಮವನ್ನು ಖಂಡಿಸಿ ಸೆಪ್ಟೆಂಬರ್ 3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸುಮಾರು 20 ಸಾವಿರ ಅಲೆಮಾರಿ ಜನರೊಂದಿಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾವಕ್ಕೂಟದ ಮುಖಂಡ ಹಾಗೂ ಅಲೆಮಾರಿ ಅರೆ ಅಲೆಮಾರಿ ಸಂಘಟನೆಗಳ ಅಧ್ಯಕ್ಷ ವೈ ಶಿವಕುಮಾರ್ ತಿಳಿಸಿದರು.
ಅವರು ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳೇ ನೀವು ಅಹಿಂದಪರ ದಲಿತರ ಪರ ಎಂದು ಎಲ್ಲಾ ಸಭೆಗಳನ್ನು ಹೇಳುತ್ತೀರಿ ಸಮಾಜದ ಅತ್ಯಂತ ಕಟ್ಟಕಡೆಯ ಜಾತಿಯಾದ ಅಲಮಾರಿ ಸಮುದಾಯಕ್ಕೆ ಅನ್ಯಾಯವನ್ನು ಮಾಡಿದ್ದೀರಿ ಕೂಡಲೇ ನಮಗೆ ಶೇಕಡ ಒಂದು ಮೀಸಲಾತಿಯನ್ನು ನೀಡಿ ಇಲ್ಲವೇ ನಮ್ಮ ಜನಾಂಗಕ್ಕೆ ಬಿಕ್ಷಾಟನೆಗೆ ಅನುಮತಿ ನೀಡಿ, ನಮ್ಮ ಸಮುದಾಯದ ಮತ ಬೇಕು ನಮ್ಮ ಹಿತ ಬೇಡವೇ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಅಲೆಮಾರಿ ಜನಾಂಗವನ್ನು ಗ್ರೂಪ್ ಸಿ ನಿಂದ ಹೊರಗಿಟ್ಟು ಎ ಗ್ರೂಪ್ ನಲ್ಲಿ ಸೇರಿಸಿ, ನಮಗೆ ಭೋವಿ ಲಂಬಾಣಿ ಜನಾಂಗದ ಜೊತೆ ಹೋರಾಡಲು ಆಗುವುದಿಲ್ಲ ನಮ್ಮನ್ನು ಈ ಗ್ರೂಪ್ನಲ್ಲಿ ಸೇರಿಸಿ ಜಗಳ ಒಂದನ್ನು ಮೀಸಲಾತಿ ನೀಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರಜಾ ಪರಿವರ್ತನಾ ವೇದಿಕೆಯ ಅನಂದ್ ಕುಮಾರ್ ಸಿ ಮಾತನಾಡಿ, ಸರಿಯಾದ ಸೂರು ಆಹಾರವಿಲ್ಲದೆ ಅಲೆಮಾರಿಗಳು ಊರೂರು ತಿರುಗಿ ತಮ್ಮ ಜೀವನವನ್ನು ಕಂಡುಕೊಳ್ಳುತ್ತಿದ್ದಾರೆ, ಇವರಿಗೆ ಒಳ ಮೀಸಲಾತಿಯಲ್ಲಿ ಶೇಕಡ ಒಂದರಷ್ಟು ಮೀಸಲಾತಿಯನ್ನು ನೀಡಲೇಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.
ಫ್ರೀಡಂ ಪಾರ್ಕ್ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯಿಂದ 3000 ಜನ ಭಾಗಿಯಾಗುವ ನಿರೀಕ್ಷೆ ಇದೆ ಸೆಪ್ಟೆಂಬರ್ 4ರಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಅಲೆಮಾರಿ ಸಮುದಾಯಗಳ ಮೀಸಲಾತಿ ಕುರಿತು ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.