ನವದೆಹಲಿ, ನವೆಂಬರ್ 11: ದೆಹಲಿಯ ಕೆಂಪು ಕೋಟೆಬಳಿ ಸೋಮವಾರ ಸಂಜೆ ನಿಗೂಢ ಸ್ಫೋಟ ಸಂಭವಿಸಿತ್ತು. ಇದರ ಪರಿಣಾಮ 8 ಮಂದಿ ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಭಾರಿ ಸ್ಫೋಟ ಸಂಭವಿಸಿದೆ. ಗಾಯಗೊಂಡವರನ್ನು ಚಿಕಿತ್ಸೆಗೆಂದು ಲೋಕ ನಾಯಕ್ ಜೈಪ್ರಕಾಶ್ ಆಸ್ಪತ್ರೆಗೆ (ಎಲ್‌ಎನ್‌ಜೆಪಿ) ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಈ ಘಟನೆಯು ವ್ಯಾಪಕ ಭೀತಿಯನ್ನು ಉಂಟುಮಾಡಿದೆ.
ದೆಹಲಿ ಸ್ಫೋಟದಲ್ಲಿ ಇದುವರೆಗೆ ಎಂಟು ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ದೆಹಲಿ ನಿವಾಸಿ ಮೊಹಮ್ಮದ್ ಸೈಫುಲ್ಲಾ ಅವರ ಪುತ್ರಿ ಶೈನಾ ಪರ್ವೀನ್, ಉತ್ತರಾಖಂಡ ನಿವಾಸಿ ಸಂಜೀವ್ ಸೇಥಿ ಅವರ ಪುತ್ರ ಹರ್ಷುಲ್, ಉತ್ತರ ಪ್ರದೇಶದ ಡಿಯೋರಿಯಾ ನಿವಾಸಿ ಶಿವ ಜೈಸ್ವಾಲ್, ದೆಹಲಿಯ ಮಾಂಡವಾಲಿಯ ಅಪರಿಚಿತ ವ್ಯಕ್ತಿಯ ಮಗ ಸಮೀರ್, ದೆಹಲಿ ನಿವಾಸಿ ಜೋಗಿಂದರ್, ದೆಹಲಿಯ ಸಂಗಮ್ ವಿಹಾರ್ ನಿವಾಸಿ ಭವಾನಿ ಶಂಕರ್ ಶರ್ಮಾ ಸೇರಿದಂತೆ ಇತರರ ಹೆಸರುಗಳಿವೆ.


