ಹಾರೂಗೇರಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ: ಪ್ರಿಯಾಂಕಾ  ಜಾರಕಿಹೊಳಿ ಗೆಲ್ಲಿಸಲು ಮನವಿ

Ravi Talawar
ಹಾರೂಗೇರಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ: ಪ್ರಿಯಾಂಕಾ  ಜಾರಕಿಹೊಳಿ ಗೆಲ್ಲಿಸಲು ಮನವಿ
WhatsApp Group Join Now
Telegram Group Join Now
ಕುಡಚಿ , ಏಪ್ರಿಲ್​ 12:  ದಿನಾಂಕ 11-04-2024 ರಂದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿಗಳಾದ ಕು ಪ್ರಿಯಾಂಕಾ  ಜಾರಕಿಹೊಳಿಯವರು ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ ಕುಡಚಿ ವಿಧಾನಸಭಾ ಕ್ಷೇತ್ರದ ಹಾರೂಗೇರಿ ಪಟ್ಟಣದಲ್ಲಿ ಕುಡಚಿ ಮತಕ್ಷೇತ್ರದ ಶಾಸಕರಾದ ಶ್ರೀ‌‌ಮಹೇಂದ್ರ ತಮ್ಮಣ್ಣವರ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮತಯಾಚಿಸಿದರು.
ಶ್ರಮಿಕರು, ಮಹಿಳೆಯರು ಸದಾ ಕಾಂಗ್ರೆಸ್‌ ಪರ ನಿಲ್ಲುತ್ತಾರೆ ಎಂಬ ಭರವಸೆ ಇದೆ. ಯುವ ಜನತೆಯ ಪರವಾಗಿ ನಾನು ಸದಾ ನಿಲ್ಲಲಿದ್ದು, ಮಹಿಳೆಯರಿಗೆ ಎಲ್ಲಾ ರೀತಿಯಲ್ಲೂ ನಾನು ಈ ಹಿಂದಿನಂತೆ ಸಹಾಯ ಮಾಡಿ ಮಹಿಳಾ ಸಬಲೀಕರಣಕ್ಕೆ ಇನ್ನಷ್ಟು ಶಕ್ತಿ ತುಂಬಲು ನನ್ನನ್ನು ಲೋಕಸಭೆಗೆ  ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಈ‌ ಸಂದರ್ಭದಲ್ಲಿ ಸಚಿವರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರು ಯುವ ನಾಯಕರಾದ ರಾಹುಲ ಅಣ್ಣಾ ಜಾರಕಿಹೊಳಿಯವರು ಶಾಸಕರುಗಳಾದ ಶ್ರೀ ಲಕ್ಷ್ಮಣ ಸವದಿ ಸರ್, ಶ್ರೀ ವಿಶ್ವಾಸ ಅಣ್ಣಾ ವೈದ್ಯರು ಮಾಜಿ ಶಾಸಕರಾದ ಎಸ್.ಬಿ. ಘಾಟಗೆ, ಮಾಜಿ ಸಚಿವ ವೀರಕುಮಾರ ಪಾಟೀಲ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ಲಕ್ಷ್ಮಣರಾವ್ ಚಿಂಗಳೆ ಹಾಗೂ ಕುಡಚಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article