ಕೊಪ್ಪಳ : ಬಲ್ದೋಟ ಕಾರ್ಖಾನೆ ಸ್ಥಾಪಿಸಿ ಇಲ್ಲವೇ ಸರ್ಕಾರಿ ನೌಕರಿ ನೀಡಿ ಎಂದು ಆಗ್ರಹಿಸಿ ಮಾರ್ಚ್ 17ರಂದು ಮಂಗಳವಾರ ನಗರದ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಕಳೆದುಕೊಂಡ ರೈತ ಮುಖಂಡ ಹನುಮಂತಪ್ಪ ಕೌದಿ ಹೇಳಿದರು
ಅವರು ಭಾನುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿದ್ದೇಶಿಸಿ ಮಾತನಾಡಿ ಭೂಮಿ ಕಳೆದುಕೊಂಡ ನಿರಾಶ್ರಿತ ರೈತರು ಧರಣಿಯೂ 100 ದಿನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ 2006-07ರಲ್ಲಿ ಕರ್ನಾಟಕ ಸರ್ಕಾರ ಕೆಐಎಡಿಬಿ ಮುಖಾಂತರ 1035 ಎಕರೆ ಜಮೀನನ್ನು ತೆಗೆದುಕೊಂಡಿದೆ. 20 ವರ್ಷ ಕಳೆದವು ಕಂಪನಿ ಪ್ರಾರಂಭವಾಗಿಲ್ಲ ಸುಪ್ರೀಂ ಕೋರ್ಟ್ ಆದೇಶವಿದ್ದರೂ ರೈತರಿಗೆ ಕೆಲಸ ಸಿಕ್ಕಿಲ್ಲ ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ ಕಾರ್ಖಾನೆ ಸ್ಥಾಪನೆ ಆಗಲೇಬೇಕು ಎಂಬ ಹೋರಾಟ ಮಾಡುತ್ತಿದ್ದು ಸರ್ಕಾರ ನಮ್ಮ ಕಡೆ ಗಮನ ಹರಿಸುತ್ತಿಲ್ಲ ಪರಿಸರ ಮಾಲಿನ್ಯ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ ಕೊಪ್ಪಳಕ್ಕೆ ಭೇಟಿ ನೀಡಿದಾಗ ಮನವಿ ಸಲ್ಲಿಸಿ ಕೂಡಲೇ ಬಲ್ದೊಟಾ ಕಾರ್ಖಾನೆ ಸ್ಥಾಪಿಸಲು ಮನವಿ ಸಲ್ಲಿಸಿದ್ದು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಅವರು ತಿಳಿಸಿದ್ದು ನಮಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ,ನಮಗೆ ಇಂದು ಭೂಮಿ ಇಲ್ಲ ನೌಕರಿಯು ಸಹ ಇಲ್ಲದೆ ಜೀವನ ಸಾಗಿಸುವುದು ಕಷ್ಟಕರವಾಗಿದೆ, ಸರಕಾರ ಕೂಡಲೆ ನಮ್ಮ ಕಡೆನೊ ಗಮನಹರಿಸಿ, ಬಲ್ದೋಟ ಕಾರ್ಖಾನೆ ಸ್ಥಾಪಿಸಿ ಇಲ್ಲವೇ ಸರಕಾರಿ ನೌಕರಿ ಕೊಡಿ ಎಂದು ಆಗ್ರಹಿಸಿ ಸುಮಾರು 700 ರೈತರಿಂದ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಭೂಮಿ ಕಳೆದುಕೊಂಡ ರೈತರಾದ ಕೆಂಚಪ್ಪ ಹಾಲವರ್ತಿ, ಹನುಮೇಶ್ ಹಾಲವರ್ತಿ, ಗೋಣಿಬಸಪ್ಪ ಬಡಿಗೇರ್, ಮನೋಜ್ ಹಾಲವರ್ತಿ ಉಪಸ್ಥಿತರಿದ್ದರು.


