ಧರ್ಮಸ್ಥಳದ ವಿರುದ್ದ ಅಪಪ್ರಚಾರ ಮಾಡುವವರ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Pratibha Boi
ಧರ್ಮಸ್ಥಳದ ವಿರುದ್ದ ಅಪಪ್ರಚಾರ ಮಾಡುವವರ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now
ಕಾಗವಾಡ:ಧರ್ಮಸ್ಥಳ ವಿರುದ್ದ ಅಪಪ್ರಚಾರ ನಡೆಸುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕಾಗವಾಡ ಪಟ್ಟಣದಲ್ಲಿ ಧರ್ಮಸ್ಥಳ ಭಕ್ತಾಭಿಮಾನ ಬಳಗದಿಂದ ಬೃಹತ್ ಪಾದಯಾತ್ರೆ ಜರುಗಿತು.
 ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶೇಡಬಾಳ ಗ್ರಾಮದಲ್ಲಿ ಪ್ರಾರಂಭವಾದ ಪಾದಯಾತ್ರೆಯು ಕಾಗವಾಡ ಪಟ್ಟಣದ ವಿವಿಧ ಗಲ್ಲಿಗಳಲ್ಲಿ ಸಂಚರಿಸಿ ಮಲ್ಲಿಕಾರ್ಜುನ ಮೈದಾನದಲ್ಲಿ ಎಲ್ಲ ಭಕ್ತರು ಸಮೂಹ ಜಮಾವಣೆಗೊಂಡಿತು.
 ಪ್ರತಿಭಟನಾನಿರತನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಶೀತಲ್ ಪಾಟೀಲ್,ಅನೇಕ ವರ್ಷಗಳಿಂದ ಧರ್ಮಸ್ಥಳದಲ್ಲಿ ಪುಣ್ಯಕಾರ್ಯಗಳನ್ನು ಮಾಡುತ್ತಾ ದೇಶದ ತುಂಬೆಲ್ಲ ಬಡಜನರ ಕಷ್ಟಕ್ಕೆ ಸಹಾಯ ಮಾಡುತ್ತಾ,ಎಲ್ಲ ವರ್ಗಗಳ ಶ್ರೆಯೋಭಿವೃದ್ದಿಗಾಗಿ ದುಡಿಯುತ್ತಿರುವ ಡಾ.ವಿರೇಂದ್ರ ಹೆಗಡೆ ಅವರಿಗೆ ಹಾಗೂ ಧರ್ನಸ್ಥಳದ ಹೆಸರು ಹಾಳು ಮಾಡಲು ಪೀತೂರಿ ಮಾಡುತ್ತಿರುವವರ ಮೇಲೆ ಹಾಗೂ ಸಮೀರ್,ಮಹೇಶ್ ಶೆಟ್ಟಿ ತಿಮರೊಡಿ,ಗಿರೀಶ ಮಟ್ಟನ್ನವರ,ಸಂತೋಷ ಶೆಟ್ಟಿ,ಜಯಂತ್ ಟಿ ಹಾಗೂ ಇವರ ಸಹಚರರ ಮೇಲೆ ಸೂಕ್ತ ತನಿಖೆ ಕೈಗೊಳ್ಳಬೆಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ನಂತರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಸಂಜಯ ನಾಡಗೌಡಾ ಮಾತನಾಡಿ,ಅನೇಕ ಸಲ ಡಾ.ವಿರೇಂದ್ರ ಹೆಗ್ಗಡೆ ಮೇಲೆ ಇಂತಹ ಅಪವಾದಗಳು ಬಂದಿವೆ ಅಂತಹ ಎಲ್ಲ ಅಪವಾದದಿಂದ ಮುಕ್ತರಾಗಿದ್ದಾರೆ ಈ ಅಪವಾದಿಂದ ಕೂಡ ಮುಕ್ತರಾಗುತ್ತಾರೆ.ಶತ್ರುಗಳು ಮಾಡುತ್ತಿರುವ ಹುನ್ನಾರ ಫಲಿಸಲು ಸಾಧ್ಯವಿಲ್ಲ.ಸರ್ಕಾರವು ರಚಿಸಿದ ಎಸ್ಐಟಿಯಿಂದ ಸತ್ಯ ಹೊರಬರುತ್ತದೆ ಅವರು ಆರೋಪ ಮುಕ್ತರಾಗಿ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮರೇಶ್ವರ ಮಹಾರಾಜರು ಆಶೀರ್ವಚನ ನೀಡಿದರು.
ಇದೆ ವೇಳೆ ತಹಶಿಲ್ದಾರ ರವೀಂದ್ರ ಹಾದಿಮನಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ,ಸಂಜಯ ಕುಚನೂರೆ,ಅಭಯ ಅಕಿವಾಟೆ,ಅರುಣ ಫರಾಂಡೆ,ವಿನಾಯಕ ಬಾಗಡೆ,ವಿಜಯಾ ಗಾರಗೆ,ಬಾನು ನದಾಫ್,ಶೈಲಜಾ ಗೌಂಡಾಜೆ ಮಾತನಾಡಿದರು.
ಈ ವೇಳೆ ಅಣ್ಣಾಸಾಬ ಪಾಟೀಲ್,ಅರುಣ ಗಾಣಿಗೇರ,
ಸಂಜಯ ತಳವಲ್ಕರ್,ಕಾಕಾ ಪಾಟೀಲ್,ಅರುಣ ಗಣೇಶವಾಡಿ,ಶ್ರೀಪಾಲ ಮುನವಳಿಈಶ್ವರ ಕಾಂಬಳೆ,ವಿನಾಯಕ ಚೌಗಲಾ,ದಾದಾ ಪಾಟೀಲ್,ದೀಪಕ ಪಾಟೀಲ್,ಪ್ರಕಾಶ ಔಗಲಾ,ಸಚಿನ್ ಕವಟಗೆ,ಚಿದಾನಂದ ಮಾಳಿ,ಅಮೀನ ಶೇಖ,ವಜ್ರಕುಮಾರ ಮಗದುಮ್,ಪ್ರಮೋದ ಹಸೂರೆ,ಮಹಾವೀರ ದೇಸಾಯಿ,ಮೆಹ್ರಾಬಾನು ಮನಗೂಳಿ,ಟಿ.ಕೆ ಧೋತರೆ ಸೇರಿದಂತೆ ಸಾವಿರಾರು ಭಕ್ತ ಸಮೂಹ ಪಾಲ್ಗೊಂಡಿದ್ದರು.
ಇದೆ ವೇಳೆ ಡಾ ವೀರೆಂದ್ರ ಹೇಗಡೆ ಪೋಟೋ ಜೋತೆಗೆ ನಮ್ಮ ಪೂಜ್ಯರು ನಮ್ಮ ಹೆಮ್ಮೆ ಎಂದು ನಾಮಫಲಕಗಳನ್ನು ಪ್ರದರ್ಶನ ಮಾಡಿದರು.ಪಾದಯಾತ್ರೆ ಮೆರವಣಿಗೆಯಲ್ಲಿ ಮಹಿಳೆಯರೂ ಅಪಪ್ರಚಾರ ಮಾಡುವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
WhatsApp Group Join Now
Telegram Group Join Now
Share This Article