ಗಡಿಹಿಂಗ್ಲಜ್ ರಸ್ತೆಯಲ್ಲಿನ ಗ್ಯಾರೇಜ್ ನಲ್ಲಿ ಭಾರಿ ಅಗ್ನಿ ಅವಘಡ

Ravi Talawar
ಗಡಿಹಿಂಗ್ಲಜ್ ರಸ್ತೆಯಲ್ಲಿನ ಗ್ಯಾರೇಜ್ ನಲ್ಲಿ ಭಾರಿ ಅಗ್ನಿ ಅವಘಡ
oplus_0
WhatsApp Group Join Now
Telegram Group Join Now

ಸಂಕೇಶ್ವರ,21 : ಪಟ್ಟಣದಲ್ಲಿನ ಸಂಕೇಶ್ವರ – ಗಡಿಹಿಂಗ್ಲಜ್ ರಸ್ತೆಯಲ್ಲಿನ ಗ್ಯಾರೇಜ್ ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ವಸ್ತುಗಳು ಸೇರಿದಂತೆ ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿರುವ ಘಟನೆ ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ನಡೆದಿದೆ.

ದ್ವಿಚಕ್ರ ವಾಹನದ ಗ್ಯಾರೇಜ್ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಗ್ಯಾರೇಜ್ ಪಕ್ಕದಲ್ಲಿರುವ ಮತ್ತೊಂದು ಅಟೋಮೋಬೈಲ್ ಶಾಪ್ ಗೆ
ಬೆಂಕಿಯ ಜ್ವಾಲೆ ವ್ಯಾಪಿಸಿ ಅದು ಕೂಡ ಬೆಂಕಿಗೆ ಆಹುತಿಯಾಗಿದೆ.

ರಾತ್ರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತು ಕೊಂಡಿದೆ ಎನ್ನಲಾಗಿದೆ.ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಹೋಗಿದ್ದು, ಸುಮಾರು ಎರಡು ಅಂಗಡಿಗಳು ಸೇರಿ 15 ಲಕ್ಷ ರೂ.  ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಅಂಗಡಿ ಮಾಲಿಕರು ಹೇಳಿದ್ದಾರೆ.

ಅಂಗಡಿಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟ ಭಸ್ಮವಾಗಿದ್ದು ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿನಂದಿಸಿದಾರೆ.

WhatsApp Group Join Now
Telegram Group Join Now
Share This Article