ಶನಿವಾರ ಬೆಳ್ಳಂ ಬೆಳಗ್ಗೆ ನೇಪಾಳದಲ್ಲಿ 4.8 ತೀವ್ರತೆಯ ಭೂಕಂಪ

Ravi Talawar
ಶನಿವಾರ ಬೆಳ್ಳಂ ಬೆಳಗ್ಗೆ ನೇಪಾಳದಲ್ಲಿ 4.8 ತೀವ್ರತೆಯ ಭೂಕಂಪ
WhatsApp Group Join Now
Telegram Group Join Now

ಕಠ್ಮಂಡು,ನೇಪಾಳ/ಪಿಥೋರಗಢ: ಶನಿವಾರ ಬೆಳ್ಳಂ ಬೆಳಗ್ಗೆ ನೇಪಾಳದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ.

ಭಾರತೀಯ ಕಾಲಮಾನ (IST) 3:59ಕ್ಕೆ ಈ ಭೂಕಂಪ ಸಂಭವಿಸಿದೆ ಎಂದು NCS ಹೇಳಿದೆ. ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಅಂದರೆ ಅಕ್ಷಾಂಶ 29.17 N ಮತ್ತು ರೇಖಾಂಶ 81.59ರಲ್ಲಿ ದಾಖಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಉತ್ತರಾಖಂಡದಲ್ಲೂ ಕಂಪಿಸಿದ ಭೂಮಿ: ಉತ್ತರಾಖಂಡದಲ್ಲೂ ಭೂಕಂಪನದ ಅನುಭವವಾಗಿದೆ. ಉತ್ತರಾಖಂಡದ ಗಡಿನಾಡಿನ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಭೂಮಿ ಕಂಪಿಸಿದೆ. ಇದು ಜನರಲ್ಲಿ ಭೀತಿ ಮೂಡಿಸಿದ್ದು, ಚಳಿಯ ನಡುವೆಯೇ ಜನರು ಮನೆಯಿಂದ ಹೊರಬಂದು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಭೂಕಂಪದಿಂದ ಎಲ್ಲಿಯೂ ಹಾನಿಯಾಗಿರುವ ಬಗ್ಗೆ ಯಾವುದೇ ಸುದ್ದಿ ಬಂದಿಲ್ಲ.

ನೇಪಾಳ ಭೂಕಂಪದ ಕೇಂದ್ರ ಬಿಂದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಭೂಪೇಂದ್ರ ಮಹಾರ್ ತಿಳಿಸಿದ್ದಾರೆ. ಇದರ ತೀವ್ರತೆ 4.8 ರಿಕ್ಟರ್ ಆಗಿತ್ತು. ಜಿಲ್ಲೆಯಲ್ಲಿ ಎಲ್ಲಿಯೂ ನಷ್ಟವಾಗಿಲ್ಲ. ಚಂಪಾವತ್ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Share This Article