ಬೆಳಗಾವಿ,30: ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು ತಿಂಗಳ ಕಾರ್ಯಕ್ರಮ -೧೧ ದಿ.ಎಸ್.ಜಿ.ಬಾಳೆಕುಂದ್ರಿ ಅವರ ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮ ಬೆಳಗಾವಿ-೩೦- ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ, ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳಾದ, ದಿ.ಎಸ್.ಜಿ.ಬಾಳೆಕುಂದ್ರಿ ಅವರ ಕುರಿತು ತಿಂಗಳ ಉಪನ್ಯಾಸ ಕಾರ್ಯಕ್ರಮವನ್ನು ರವಿವಾರ: ದಿ:೦೫/೦೫/೨೦೨೪ ರಂದು, ಸಮಯ ಸಂಜೆ:೦೪:೦೦ ಕ್ಕೆ, ಸ್ಥಳ: ಕನ್ನಡ ಭವನ ನೆಹರು ನಗರ, ರಾಮದೇವ ಹೊಟೇಲ್ ಹಿಂದೆ
ಬೆಳಗಾವಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಬೆಳಗಾವಿ ಜಿಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ವಹಿಸಲಿದ್ದಾರೆ. ಬೆಳಗಾವಿಯ ನಿವೃತ್ತ ನ್ಯಾಯಾಧೀಶರು ಶ್ರೀ.ಉಲ್ಲಾಸ
ಬಾಳೆಕುಂದ್ರಿ ಅವರು ದಿ.ಎಸ್.ಜಿ.ಬಾಳೆಕುಂದ್ರಿ ಅವರ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ.
ಬೆಳಗಾವಿಯ ನಿವೃತ್ತ ಅಭಿಯಂತರರು ಶ್ರೀ.ಬಸವರಾಜ ಚೆಟ್ಟರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಹುಕ್ಕೇರಿಯ ಸಾಹಿತಿಗಳಾದ ಶ್ರೀಮತಿ,ಲೀಲಾವತಿ ರಜಪೂತ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಶ್ರೀ ಎಮ್ ವೈ ಮೆಣಸಿನಕಾಯಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಶ್ರೀ ವೀರಭದ್ರಪ್ಪಾ ಮ ಅಂಗಡಿ ಅತಿಥಿ ಉಪನ್ಯಾಸಕರ ಪರಿಚಯ ಮಾಡಲಿದ್ದಾರೆ. ಶ್ರೀಮತಿ.ಸುಧಾ ಪಾಟೀಲ ಸ್ವಾಗತವನ್ನು ಮಾಡಲಿದ್ದಾರೆ. ಕೆ.ಎಲ್.ಇ.ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ನಾಡಗೀತೆಯನ್ನು ಪ್ರಸ್ತುತ ಪಡಿಸಲಿದ್ದಾರೆ.ಶ್ರೀ.ಮಲ್ಲಿಕಾರ್ಜುನ ಕೋಳಿ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ. ಶ್ರೀ.ಸುನೀಲ ಹಲವಾಯಿ ಅವರು ವಂದನಾರ್ಪಣೆ ಮಾಡಲಿದ್ದಾರೆ.
ಕ.ಸಾ.ಪ. ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾಅಧ್ಯಕ್ಷರುಗಳು, ಹಾಗೂ ಜಿಲ್ಲಾ ಕ.ಸಾ.ಪ. ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಕ.ಸಾ.ಪ. ಸರ್ವ ಸದಸ್ಯರು, ಹಾಗೂ ಸಾಹಿತಿಗಳು,
ಕಲಾವಿದರು ಮತ್ತು ಕನ್ನಡಪರ ಸಂಘಟನೆಗಳು, ಸಮಸ್ತ ಕನ್ನಡ ಮನಸ್ಸುಗಳು ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರು ಎಲ್ಲರೂ ಈ
ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆತರಬೇಕೆಂದು, ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ವಿನಂತಿಸಿಕೊಂಡಿದ್ದಾರೆ.