ಗೋಕುಲ್ ರಸ್ತೆಯ ಇನಾರ್ಬಿಟ್ ಮಾಲ್‌ನಲ್ಲಿ ಪ್ರಮುಖ ಫ್ಯಾಷನ್ ತಾಣ
ಹುಬ್ಬಳ್ಳಿ, ಜನವರಿ 2026: ಭಾರತದಲ್ಲಿ ಪ್ರಮುಖ ಫ್ಯಾಷನ್, ಸೌಂದರ್ಯ ಮತ್ತು ಉಡುಗೊರೆಗಳ ಮಾರಾಟ ತಾಣವಾದ ಶಾಪರ್ಸ್ ಸ್ಟಾಪ್, ಹುಬ್ಬಳ್ಳಿಯ ಗೋಕುಲ್ ರಸ್ತೆಯ ಇನಾರ್ಬಿಟ್ ಮಾಲ್‌ನಲ್ಲಿ ತನ್ನ ಹೊಸ ಮಳಿಗೆ ಪ್ರಾರಂಭಿಸವುದರೊ0ದಿಗೆ ಕರ್ನಾಟಕದಲ್ಲಿ ಬ್ರಾಂಡ್‌ನ ಹಾಜರಿಯನ್ನು ವಿಸ್ತರಿಸಲಿದೆ. ಪ್ರಮುಖ ಶೈಲಿ ಪೂರೈಸುವ ಆಧುನಿಕ ರೀಟೇಲ್ ಸ್ಥಳವಾಗಿ ವಿನ್ಯಾಸಗೊಳಿಸಲಾದ ಈ ಹೊಸ ತಾಣವು ವಿಸ್ತಾರವಾದ ಪ್ರಮುಖ ಬ್ರಾಂಡ್‌ಗಳ ವ್ಯಾಪಕ ಆಯ್ಕೆಯೊಂದಿಗೆ ಉನ್ನತ ಮಟ್ಟದ ಶಾಪಿಂಗ್ ಅನುಭವ ಸಾದರಪಡಿಸುತ್ತದೆ. ಮಹಿಳೆಯರ, ಪುರುಷರ ಅಲ್ಲದೇ ಮಕ್ಕಳ ಉಡುಪುಗಳು, ಪಾದರಕ್ಷೆಗಳು, ಪರಿಕರಗಳು, ಕೈಚೀಲಗಳು, ಸೌಂದರ್ಯ ಮತ್ತು ಪ್ರಯಾಣದ ಅಗತ್ಯ ವಸ್ತುಗಳನ್ನು ಒಳಗೊಂಡ 500ಕ್ಕೂ ಹೆಚ್ಚಿನ ಪ್ರಮುಖ ಬ್ರಾಂಡ್‌ಗಳನ್ನು ಈ ಮಾರಾಟದಲ್ಲಿ ಸೇರಿಸಲಾಗಿದೆ.
ಸಂಸ್ಥೆಯ ಗ್ರಾಹಕ ಸೇವಾ ಸಹಯೋಗಿ, ವ್ಯವಸ್ಥಾಪಕ ನಿರ್ದೇಶಕ ಮತ್ತು ಶಾಪರ್ಸ್ ಸ್ಟಾಪ್ ಲಿಮಿಟೆಡ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕವೀಂದ್ರ ಮಿಶ್ರಾ ಅವರು ಹೊಸ ಮಳಿಗೆ ಉದ್ಘಾಟನೆ ಮತ್ತು ಮಾರಾಟ ಕುರಿತು ಪ್ರತಿಕ್ರಿಯಿಸಿ, “ನಾವು ಮಾಡುವ ಎಲ್ಲ ಕಾರ್ಯಗಳು ಗ್ರಾಹಕ ಕೇಂದ್ರೀಕೃತವಾಗಿವೆ. ಅವರ ನಂಬಿಕೆಯೇ ಮಾರುಕಟ್ಟೆಗಳಲ್ಲಿ ನಮ್ಮ ಬೆಳವಣಿಗೆಗೆ ಮಾರ್ಗದರ್ಶನ ನೀಡಿದೆ. ಹುಬ್ಬಳ್ಳಿಯಲ್ಲಿ ನಮ್ಮ ಹೊಸ ಅಂಗಡಿಯ ಉದ್ಘಾಟನೆಯು ಹೊಸ ಅಧ್ಯಾಯಕ್ಕೆ ನಾ0ದಿಯಾಗಿದೆ. ಪ್ರಮುಖ ಬ್ರಾಂಡ್‌ಗಳ ವಿಸ್ತೃತ ಶ್ರೇಣಿ ಅಲ್ಲದೇ ಹೆಚ್ಚು ತಲ್ಲೀನಗೊಳಿಸುವ ಶಾಪಿಂಗ್ ಅನುಭವವನ್ನು ಇದು ನಗರಕ್ಕೆ ತರುತ್ತದೆ. ಹುಬ್ಬಳ್ಳಿ ಜೊತೆಗಿನ ನಮ್ಮ ಸಂಪರ್ಕ ದೃಢಪಡಿಸಿಕೊಳ್ಳುವುದನ್ನು ನಾವು ಎದುರು ನೋಡುತ್ತಿದ್ದೇವೆ” ಎಂದರು.
ಈ ಉತ್ಸಾಹಪೂರ್ವಕ ಪ್ರಯಾಣದಲ್ಲಿ ಶಾಪರ್ಸ್ ಸ್ಟಾಪ್‌ಗೆ ಭೇಟಿ ನೀಡಲು ನಗರದ ನಿವಾಸಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅತ್ಯುತ್ತಮ ಬ್ರ‍್ಯಾಂಡ್‌ಗಳು ಮತ್ತು ಸೂಕ್ತವಾದ ಸೇವೆಗಳ ನಡುವೆ ಶಾಪಿಂಗ್‌ನ ಸಂತೋಷದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹುಬ್ಬಳ್ಳಿಯ ಫ್ಯಾಷನ್ ಪ್ರಿಯರನ್ನು ಆಹ್ವಾನಿಸಲಾಗಿದೆ. ಗ್ರಾಹಕರು ಶಾಪರ್ಸ್ ಸ್ಟಾಪ್ ಸ್ಟೋರ್‌ಗಳಿಗೆ ಸ್ವತಃ ಭೇಟಿ ನೀಡಬಹುದು ಅಥವಾ ಅದೇ ಕೊಡುಗೆಗಳನ್ನು
71 ಇನ್‌ಟ್ಯೂನ್ ಸ್ಟೋರ್‌ಗಳು ಮತ್ತು 20 ಏರ್‌ಪೋರ್ಟ್ ಡೋರ್‌ಗಳನ್ನು ಕೂಡ ನಿರ್ವಹಿಸುತ್ತದೆ, ಇದು ಭಾರತದ 70 ನಗರಗಳಲ್ಲಿ 4.5 ಮಿಲಿಯನ್ ಚದರ ಅಡಿ ವಿಸ್ತೀರ್ಣ ಹೊಂದಿದೆ. ಶಾಪರ್ಸ್ ಸ್ಟಾಪ್ ದೇಶದ ಅತ್ಯಂತ ದೀರ್ಘಾವಧಿಯ ಮತ್ತು ಅತ್ಯಂತ ಪ್ರತಿಷ್ಠಾತ್ಮಕ ಗ್ರಾಹಕ ನಿಷ್ಠೆ ಕಾರ್ಯಕ್ರಮಗಳಲ್ಲಿ ಒಂದಾದ ‘ಫಸ್ಟ್ ಸಿಟಿಜನ್’ ಸಾದರಪಡಿಸುತ್ತಿದೆ. ಕಂಪನಿಯ ವಿಶಿಷ್ಟ ಶಾಪಿಂಗ್ ಸಹಾಯ ಸೇವೆ, ಪರ್ಸನಲ್ ಶಾಪರ್, ಭಾರತೀಯರು ಶಾಪಿಂಗ್ ಮಾಡುವ ರೀತಿಯಲ್ಲಿ ಕ್ರಾಂತಿ ಉಂಟು ಮಾಡುತ್ತಿದೆ, ಪ್ರತಿ ಅನುಭವಕ್ಕೂ ಹೆಚ್ಚಿನ ಮೌಲ್ಯ, ಸೌಕರ್ಯ ಮತ್ತು ಅನುಕೂಲ ಸಾದರಪಡಿಸುತ್ತದೆ.


