ಬೆಳಗಾವಿ: ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೯ ಶನಿವಾರದಂದು ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಜೋಕಿಗೊಂದು ಜೋಕು ಎಂಬವಿನೂತನ ಕಾರ‍್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಅಧ್ಯಕ್ಷತೆಯನ್ನು ಹಿರಿಯ ಪತ್ರರ್ತ ಎಲ್. ಎಸ್. ಶಾಸ್ತ್ರಿಯವರು ಸ್ವರಚಿತ ಹಾಸ್ಯ ಚುಟುಕುಗಳ ವಾಚನ ಮಾಡಿದರು. ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯರಾದ ಪ್ರೊ. ವ್ಹಿ. ಎನ್. ಜೋಶಿ ನಗೆಪ್ರಸಂಗವೊಂದನ್ನು ಹಂಚಿಕೊಂಡರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಹಾಸ್ಯಕೂಟ ಸಂಚಾಲಕ, ಪತ್ರಕರ್ತ ಗುಂಡೇನಟ್ಟಿ ಮಧುಕರ ಮಾತನಾಡುತ್ತ ಸಂಘಟನೆಯೊಂದಿಗಿನ ದಾರಿ ತುಂಬ ಕಷ್ಟದ ದಾರಿ ಆದರೆ ಸಂಘಟನೆಯನ್ನು ಪ್ರಾಮಾಣಿಕ ಬೆಳೆಸುವ ಉಳಿಸುವ ಪ್ರಯತ್ನ ಮಾಡಿದಾಗ ಸಂಘಟನೆಯೊಂದಿಗೆ ನಾವು ಬೆಳೆಯುತ್ತೇವೆ ಎಂದು ಹೇಳಿದರು.
ಹಾಸ್ಯಕೂಟ ಬೆಳೆಯುವಲ್ಲಿ ಪ್ರೊ. ಜಿ. ಕೆ. ಕುಲಕರ್ಣಿ, ಎಂ. ಬಿ. ಹೊಸಳ್ಳಿ, ಜಿ. ಎಸ್. ಸೋನಾರ, ತಾನಾಜಿಯವರದ್ದು ಮಹತ್ವದ ಪಾತ್ರವಿದೆ ಹಾಸ್ಯಕೂಟ ಸಂಘಟನೆಯೊಂದಿಗೆ ಜನರು ನಮ್ಮನ್ನು ಪರಿಚಯಿಸುತ್ತಿದ್ದಾರೆ ಎಂದು ಗುಂಡೇನಟ್ಟಿ ಹೇಳಿದರು.
ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದ ಕರ್ನಾಟಕ ವಿಕಾಸ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕರಾದ ಪಿ. ವಿ. ಪಾಟೀಲ, ಎಂ.ಬಿ. ಹೊಸಳ್ಳಿ, ಜಿ. ಎಸ್. ಸೋನಾರ, ಅರವಿಂದ ಹುನಗುಂದ, ಜೋಕಿಗೊಂದು ಜೋಕ್ ಹೇಳಿದರು. ತಾನಾಜಿ ನಿರೂಪಿಸಿದರು.