ರಾಯಬಾಗ :ಜೈನ ಸಮಾಜದವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸುವ ಚತುರ್ಮಾಸ ಆಚರಣೆಯ ಅಂಗವಾಗಿ ನಸಲಾಪುರ ಗ್ರಾಮದಲ್ಲಿ ನಾಲ್ಕು ತಿಂಗಳುಗಳ ಕಾಲ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಈ ಬಾರಿ ತಾಲೂಕಿನ ನಸಲಾಪುರ ಗ್ರಾಮದಲ್ಲಿ ಜುಲೈ 13 ರಿಂದ ಚತುರ್ಮಾಸ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು ಡಾ. ಬಾಲಾಚಾರ್ಯ ಸಿದ್ಧ ಸೇನಾ ಮಹಾರಾಜರನ್ನು ಗ್ರಾಮಸ್ಥರು ಪ್ರತಿ ಮನೆಗಳ ಮುಂದೆ ರಂಗೋಲಿ ಬಿಡಿಸಿ, ದಾರಿಯುವುದಕ್ಕೂ ಹಾಸಿ ಸಕಲ ವಾದ್ಯ ಮೇಳಗಳೊಂದಿಗೆ ಜೈನ ಶ್ರಾವಕ ಶ್ರಾವಕೀಯರು ವಿಜೃಂಭಿಯಿಂದ ಮಹಾರಾಜರನ್ನು ಬರಮಾಡಿಕೊಂಡರು. ನಂತರ ಗ್ರಾಮದ ಪ್ರಮುಖ ಬೀದಿಗಳಿಂದ ಪೂಜ್ಯರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ನೂರಾರು ಜೈನ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.