ರಾಜ್ಯ, ಕೇಂದ್ರ ಸರಕಾರದ ವೈಫಲ್ಯವನ್ನು ಖಂಡಿಸಿ ಬೃಹತ್ ಪಂಜಿನ ಮರವಣಿಗೆ

Ravi Talawar
ರಾಜ್ಯ, ಕೇಂದ್ರ ಸರಕಾರದ ವೈಫಲ್ಯವನ್ನು ಖಂಡಿಸಿ ಬೃಹತ್ ಪಂಜಿನ ಮರವಣಿಗೆ
WhatsApp Group Join Now
Telegram Group Join Now

ವಿಜಯಪುರ -ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವಿಜಯಪುರ ದಿನಾಂಕ : ೨೪-೦೭-೨೦೨೪ರಂದು ಸಾಯಂಕಾಲ ೬-೩೦ಕ್ಕೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರದ ವೈಫಲ್ಯವನ್ನು ಖಂಡಿಸಿ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪಂಜಿನ ಮರವಣಿಗೆಯನ್ನು ಡಾ|| ಬಿ. ಆರ್. ಅಂಬೇಡ್ಕರ ಸರ್ಕಲ್‌ದಿಂದ ಗಾಂಧಿ ವೃತ್ತದ ಮಾರ್ಗವಾಗಿ ಮಾನ್ಯ್ಯ ಅಪಾರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆನ್ನೂರ್ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಹೆಣ್ಣೂರ ಶ್ರೀನಿವಾಸ ಮಾತನಾಡಿ ಡಾ|| ಬಿ.ಆರ್. ಅಂಬೇಡ್ಕರ ಆಸೆಯಂತೆ ದುರ್ಬಲರನ್ನು ರಕ್ಷಿಸಿ ಅವರಿಗೆಗಾಗಿ ವಿಶೇಷ ಯೋಜನೆಗಳನ್ನು ಜಾರಿಗೊಳಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರಿಗೆ ಮತ್ತು ಇತರ ಜನರ ನಡುವೆ ಇರುವ ಭಾರಿ ಅಂತರವನ್ನು ಕಡಿಮೆ  ಮಾಡಲು ನಿರ್ಧಿಷ್ಟಕ್ರಮಗಳನ್ನು ಕೈಗೊಳ್ಳಿ ಎಂದೆಲ್ಲಾ ನಮ್ಮ ಸಂವಿಧಾನ ಆಸೆಯ, ಆಡಳಿತ ನಡೆಸುವ ಸರ್ಕಾರಗಳಿಗೆ ಕಿವಿ ಮಾತು ಹೇಳಿದೆ. ದುರ್ಬಲರ ಮತ್ತು ಪ.ಜಾತಿ/ಪಂಗಡದವರ ಪರವಾಗಿರುವ ಎಲ್ಲಾ ಆಯೋಗಗಳು ಮತ್ತು ಇವರ ಸ್ಥಿತಿಗತಿ ಕುರಿತು ಬಂದಿರುವ ಬಹುತೇಕ ಕೋರ್ಟ ತೀರ್ಪುಗಳು ಕೂಡಾ ಈ ಅಂಶವನ್ನು ಒತ್ತಿ ಹೇಳಿವೆ.

ಆದರೆ ಇವೆಲ್ಲವೂ ಗೋರಗಲ್ಸ್ ಮೇಲೆ ಮಳೆಗರೆದಂತೆ ಆಗಿದೆ. ಮತ್ತು ವಿಜಯಪುರ ಜಿಲ್ಲೆಯ ದಲಿತರ . ಅನೇಕ ದೌರ್ಜನ್ಯ ಮತ್ತು ಅನ್ಯಾಯಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ಪದೆ ಪದೆ ತರಲಾಗಿದೆ. ವಿಜಯಪುರ ಜಿಲ್ಲೆಯ ಕೊಲ್ದಾರ ತಾಲೂಕಿನ ನಾಗರದಿನ್ನಿ ಗ್ರಾಮದ ರಿ.ಸ.ನಂ.೫೬ ಮತ್ತು ೭೫,೭೭ರಲ್ಲಿ ಹೆಚ್ಚುವರಿ ಜಮೀನನ್ನು ೧೯ ದಲಿತ ಕುಟುಂಗಳಿಗೆ ೭೪ ಏಕರೆ ೧೭ ಗುಂಟೆ ಜಮೀನನ್ನು ಭೂನ್ಯಾಯ ಮಂಡಳಿ ೧೯೮೧ರಲ್ಲಿ ಅಂದರೆ ೪೩ ವರ್ಷಗಳಿಂದ
ಪರಿಶಿಷ್ಟ ಜಾತಿ ಜನರು ನಿತಂರ ಜಮೀನಗಳನ್ನು ಸಾಗುವಳಿ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡಿದಾರೆ ಮತ್ತು ವಿಚಾರವನ್ನು ವಿವಿಧ ನ್ಯಾಯಾಲಯದಲ್ಲಿ ಸರ್ಕಾರಪರ ನ್ಯಾಯವಾದಿಗಳನ್ನು ನೇಮಿಸಿ ದಲಿತರಗಿ ಜಮೀನು ಉಳಿಕೊಡುವಲ್ಲಿ ವಿಫಲವಾಗಿದೆ. ಆದರೆ ಆ ೧೯ ಕುಟುಂಬಗಳ ಬಗ್ಗೆ ಪರ್ಯಾಯ ಭೂಮಿ ವ್ಯವಸ್ಥೆ ಬಗ್ಗೆ ಮತ್ತು ಆ ಕುಟುಂಬಗಳ ಬೀದಿಗೆ ಬಿಳೂವದನ್ನು ತಪ್ಪಿಸಲು ಸರ್ಕಾರ ತೀರ್ವಗತಿಯಲ್ಲಿನ್ಯಾಯವದಗಿಸುವಲ್ಲಿ ಮುರ್ತುವರ್ಜಿವಹಿಸಬೇಕು ಎಂದರು

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ರಮೇಶ್ ಆಸಂಗಿ ಜಿಲ್ಲಾ ಸಂಚಾಲಕರಾದ ಅಶೋಕ ಚಲವಾದಿ ಮಾತನಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆ ಬಳುಸವುದು. ವಿಪ್ಯಾಯಾಸ್ ಪರಿಶಿಷ್ಟ ಜಾತಿ ವಿಶೇಷ ಯೋಜನೆ (ಎಸ್.ಸಿ,ಎಸ್.ಪಿ) ಪರಿಶಿಷ್ಟ ಪಂಗಡಗಳ ವಿಶೇಷ ಯೋಜನೆಗಳ (ಟಿ.ಎಸ್.ಪಿ) ಮೀಸಲಿಟ್ಟ ಹಣದಲ್ಲಿ ಗ್ಯಾರಂಟಿಗೆ ೨೦೨೩-೨೪ ಸಾಲಿನಲ್ಲಿ ೧೧೦೦೦ ಕೋಟಿ ಬಳಸದೆ. ೨೦೨೪-೨೫ನೇ ಸಾಲಿನಲ್ಲಿ ೧೪೦೦೦ ಕೋಟಿ ಬಳಸುತ್ತದೆ. ಈ ಯೋಜನೆಗಳನ್ನು ನಾವೇ ಮಾಡಿದ್ದು ಎಂದು ಹೇಳಿಕೊಳುತ್ತಿರುವ ಸರ್ಕಾರ ಪರಿಶಿಷ್ಟರಿಗೆ ದ್ರೋಹ ಬಗೆಯುತ್ತದೆ, ದಲಿತರ ಬಗ್ಗೆ ನಿಜವಾದ ಸರ್ಕಾರಕ್ಕೆ ಕಾಳಜಿ ಇದ್ದರೆ ಗ್ಯಾರಂಟಿ ಯೋಜನೆಗಳಲ್ಲಿ ಬಳಸದ ಹಣವನ್ನು ವಾಪಸ್ ಇಟ್ಟು ಅದನ್ನು ಎಸ್.ಸಿ/ಎಸ್.ಟಿ  ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕು, ಸರ್ಕಾರ ಶೀಘ್ರಗತಿಯಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ ಬ್ಯಾಗ್‌ಲಾಕ್ ಹುದ್ದೆಗಳು ಭರ್ತಿ ಮಾಡಬೇಕು.

ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿದ ಪರಿಶಿಷ್ಟರ ಹಣವನ್ನು ಮರಳಿ ಪರಿಶಿಷ್ಟರ ಕಲ್ಯಾಣಕ್ಕೆ ಬಳಸಬೇಕು. ಎಸ್.ಸಿ./ಎಸ್.ಟಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹಧನ ಸ್ಥಗಿತ ಮಾಡಿರುವುದು. ಪುನರ ಚಾಲ್ತಿ ಮಾಡಬೇಕು ಮತ್ತು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳ ಸಹಾಯಧನವನ್ನು ಕತ್ತರಿ ಹಾಕಿರುವುದು. ಮರಳಿ ಪುನರ್ ಚಾಲ್ತಿ ಮಾಡಿ ವಿದ್ಯಾರ್ಥಿಗಳಲ್ಲಿ ಅನುಕೂಲಮಾಬೇಕು. ಎಸ್.ಸಿ/ಎಸ್.ಟಿ ನಿಗಮಗಳಿಗೆ ಭೂಮಿ ಹಂಚಲು ಪಲಾನುಭವಿಗಳನ್ನು ಹಣವು ವಿಳಂಭವಾಗುತ್ತಿರುವುದು. ಕೊಡಲೇ ಹಣ ಒದಗಿಸಬೇಕು.

ಶಾಲೆ ಮತ್ತು ಕಾಲೇಜು ಪ್ರಾರಂಭವಾದ ಕೂಡಲೇ ಹಾಸ್ಟೇಲ್ ಗಳನ್ನು ಪ್ರಾರಂಭಿಸಬೇಕು.ಕೊಲ್ದಾರ ತಾಲೂಕಿನ ನಾಗರದಿನ್ನಿ ಗ್ರಾಮದ ೧೯೮೧ರಲ್ಲಿದಲಿತರಿಗೆ ಕೊಟ್ಟ ಭೂಮಿ ಬಗ್ಗೆಸರ್ಕಾರ ಪರ ಸುಪ್ರೀಂ ಕೂರ್ಟನಲ್ಲಿ ನ್ಯಾಯವಾದಿಗಳನ್ನು ನೇಮಿಸಿಬೇಕು. ಮತ್ತು ಅಲ್ಲಿಯ ದಲಿತರಿಗೆ ಪರ್ಯಾಯಾ ಭೂಮಿ ಒದಗಿಸಬೇಕು ಕೊಡಬೇಕು. ಹಾಲಿಹಾಳ ಗ್ರಾಮದಲ್ಲಿ ದಲಿತರಿಗೆ ಮನೆಗೆ ಹಾದು ಹೋಗಲು ರಸ್ತೆಯನ್ನು ಒದಗಿಸಕೊಡಬೇಕು.:

ಬ.ಬಾಗೇವಾಡಿ ಶಿವಾನಂದ ಮೂರಮಾನ ತಾಲೂಕ ಸಂಚಾಲಕರು ಇಂಡಿ ಮಂಜುನಾಥ ಎಂಟಮಾನ ತಾಲೂಕ ಸಂಚಾಲಕರು ಸಿಂದಗಿ ರಾಜಕುಮಾರ ಸಿಂಧಗೇರಿ ತಾಲೂಕ ಸಂಚಾಲಕರು ದೇವರ ಹಿಪ್ಪರಗಿ ರವಿಚಂದ್ರ. ಚಲವಾದಿ ತಾಲೂಕ ಸಂಚಾಲಕರು ಕೊಲ್ದಾರ ಲಕ್ಷ್ಮಣ.ಹಾಲಿಹಾಳ ತಾಲೂಕ ಸಂಚಾಲಕರು ನಿಡಗುಂದಿ ಚಂದ್ರಶೇಖರ. ಕೆಳಗಿನಮನಿ ತಾಲೂಕ ಸಂಚಾಲಕರು ಆಲಮೇಲ ಸಂತೋಷ, ಟಕ್ಕೆ ತಾಲೂಕ ಸಂಚಾಲಕರು ವಿಜಯಪುರ ಸಿದ್ದು.
ಬಾರಿಗಿಡದ ತಾಲೂಕ ಸಂಚಾಲಕರು ತಾಳಿಕೋಟಿ ಸುಭದ್ರಾ. ಮೇಲಿನಮನಿ ಮಹಿಳಾ ತಾಲೂಕ ಸಂಚಾಲಕರು ಸಿಂದಗಿ ಚಂದ್ರಕಲಾ. ಮಸಳಿಕೇರಿ ಮಹಿಳಾ ತಾಲೂಕ ಸಂಚಾಲಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article