ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿ0ದ ರೂ.1ಕೋಟಿ ನೆರವಿನ ಹಸ್ತ

Sandeep Malannavar
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿ0ದ ರೂ.1ಕೋಟಿ ನೆರವಿನ ಹಸ್ತ
WhatsApp Group Join Now
Telegram Group Join Now

ಬಳ್ಳಾರಿ22..: ಜೆಸ್ಕಾಂ ನಲ್ಲಿ ಲೈನ್ ಮನ್ ಆಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮೃತ ಪಟ್ಟಿದ್ದ ದಿವಂಗತ ಹಳ್ಳಿ ನಾಗರಾಜು ಅವರ ಕುಟುಂಬದವರಿಗೆ ಕಾರ್ಪೊರೇಟ್ ಸಂಬಳ ಪ್ಯಾಕೇಜ್ ಅಡಿಯಲ್ಲಿ ರೂ.೧ ಕೋಟಿ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೆರವಿನ ರೂಪದಲ್ಲಿ ನೀಡಿದೆ.

ಬುಡಾ ಮಾಜಿ ಅಧ್ಯಕ್ಷ  ನಾರಾ ಪ್ರತಾಪ ರೆಡ್ಡಿ,  ಜೆಸ್ಕಾಮ್  ಸಿಇಇ ಮೌನೇಶ್ ಎಸ್ ಪತ್ತಾರ್, ಎಸ್ ಇಇ ಮೊಹಮ್ಮದ್ ಷರೀಫ್, ಇಇಇ ಹುಸೇನ್ ಸಾಬ್, ಎಓ ಜಗದೀಶ್ ವಿ, ಕೆ ಎಂ., ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ರೀಜನಲ್ ಮ್ಯಾನೇಜರ್ ಬಿ, ಡೆಪ್ಯೂಟಿ ಮ್ಯಾನೇಜರ್  ರಾಮಕೃಷ್ಣ ದೇವರ, ಏರಿಯಾ ಮ್ಯಾನೇಜರ್ ದಿವಾಕರ್ ರೆಡ್ಡಿ ಇನ್ನಿತರರು ಮೃತ ನಾಗರಾಜು ಅವರ ಪತ್ನಿ  ಕಲ್ಪಾಡಿ ಲಕ್ಷ್ಮಿ ಅವರಿಗೆ  ರೂ. ೧ ಕೋಟಿ ರೂ.ಗಳ ಚೆಕ್ ಅನ್ನು ಹಸ್ತಾಂತರಿಸಿ ಸಾಂತ್ವನ ನೀಡಿದರು.
ಇದು ಮೃತ ನಾಗರಾಜು ಅವರ ಕುಟುಂಬದ ಕಷ್ಟದ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದ ಗಮನಾರ್ಹ ಬೆಂಬಲವಾಗಲಿದೆ.

WhatsApp Group Join Now
Telegram Group Join Now
Share This Article