ಹುಕ್ಕೇರಿ: ಹುಕ್ಕೇರಿ ತಾಲೂಕಿನ ನೇರ್ಲಿ, ಕಣಗಲಾ, ಕೋಟಬಾಗಿ, ಶಿರಗಾಂವ ಗ್ರಾಮಗಳಿಗೆ ಮಂಜೂರು ಮಾಡಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಆದೇಶ ಪ್ರತಿಗಳನ್ನು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಆಯಾ ಗ್ರಾಮದ ಮುಖಂಡರಿಗೆ ವಿತರಿಸಿದರು.
ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಹುಕ್ಕೇರಿ ತಾಲೂಕಿನ ನೇರ್ಲಿ, ಕಣಗಲಾ, ಕೋಟಬಾಗಿ, ಶಿರಗಾಂವ ಗ್ರಾಮಗಳಿಗೆ ಮಂಜೂರು ಮಾಡಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಆದೇಶ ಪ್ರತಿಗಳನ್ನು ವಿತರಿಸಿದ ಹಿನ್ನೆಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಆಯಾ ಗ್ರಾಮದ ಮುಖಂಡರು ಸತ್ಕರಿಸಿ, ಧನ್ಯವಾದ ತಿಳಿಸಿದರು.
ಇದೇ ವೇಳೆ ಮಾತನಾಡಿ ಕಾಮಗಾರಿಗಳ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿಯವರು,ಹುಕ್ಕೇರಿ ತಾಲೂಕಿನ ನೇರ್ಲಿ ಗ್ರಾಮದಲ್ಲಿ ಕುರುಬ ಸಮಾಜದ ಸಮುದಾಯ ಭವನಕ್ಕೆ 50 ಲಕ್ಷ ರೂ, ಕಣಗಲಾ ಗ್ರಾಮದಲ್ಲಿ ಕುಂಬಾರ ಸಮಾಜದ ಸಮುದಾಯ ಭವನಕ್ಕೆ 25 ಲಕ್ಷ ರೂ., ಕೋಟಬಾಗಿ ಗ್ರಾಮದಲ್ಲಿ ಹಣಬರ ಸಮಾಜಕ್ಕೆ 25 ಲಕ್ಷ, ಇನ್ನು ಇದೇ ಗ್ರಾಮದ ನಿಜಶರಣ ಅಂಬಿಗರ ಸಮಾಜಕ್ಕೆ 25 ಲಕ್ಷ ರೂ., ಶಿರಗಾಂವ ಗ್ರಾಮದ ಯಲ್ಲಮ್ಮಾ ದೇವಿ ದೇವಸ್ಥಾನ ಕಮಿಟಿ ವತಿಯಿಂದ ಸಮುದಾಯ ಭವನ ನಿರ್ಮಿಸಲು 25 ಲಕ್ಷ ರೂ. ಮಂಜೂರು ಮಾಡಿದ್ದಾಗಿ ತಿಳಿಸಿದರು.


