ಅನ್ನೋತ್ಸವ 2026 ಕ್ಕೆ ಅದ್ಧೂರಿ ಚಾಲನೆ!

Hasiru Kranti
ಅನ್ನೋತ್ಸವ 2026 ಕ್ಕೆ ಅದ್ಧೂರಿ ಚಾಲನೆ!
WhatsApp Group Join Now
Telegram Group Join Now
ಬೆಳಗಾವಿ: ಬೆಳಗಾವಿಯ ಅತ್ಯಂತ ಜನಪ್ರಿಯ ಆಹಾರ ಮೇಳವಾದ ‘ಅನ್ನೋತ್ಸವ 2026’ ಕ್ಕೆ ಶುಕ್ರವಾರ, ಜನವರಿ 9, 2026 ರಂದು ಸಂಜೆ 6 ಗಂಟೆಗೆ ಅಂಗಡಿ ಕಾಲೇಜು ಮೈದಾನದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಮುಖ್ಯ ಅತಿಥಿ ಜಿಲ್ಲಾ ಗವರ್ನರ್ ರೋ. ಅರುಣ ಭಂಡಾರೆ ಅವರು ರಿಬ್ಬನ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯ ಮೇಲೆ ಎಜಿ ರೋ| ರಾಜೇಶ್ ಕುಮಾರ್ ತಳೆಗಾಂವ್, ಶ್ರೀಮತಿ ದೀಪಾ ಸಿದ್ನಾಳ್, ರೋಟರಿ ಕ್ಲಬ್ ಅಧ್ಯಕ್ಷ ರೋ| ವಿನಾಯಕ್ ನಾಯಕ್, ಕಾರ್ಯದರ್ಶಿ ರೋ| ಡಾ. ಸಂತೋಷ್ ಬಿ. ಪಾಟೀಲ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ರೋ| ಮುಕುಂದ ಬಂಗ್ ಮತ್ತು ಅನ್ನೋತ್ಸವ ಅಧ್ಯಕ್ಷ ರೋ| ಮನೋಜ್ ಮೈಕೆಲ್ ಉಪಸ್ಥಿತರಿದ್ದರು.

ಈ ಮೇಳವು ಭಾರತದಾದ್ಯಂತದ ವಿವಿಧ ಆಹಾರ ಮಳಿಗೆಗಳನ್ನು ಹೊಂದಿದ್ದು, ಮೊಘಲಾಯಿ ಖಾದ್ಯಗಳು, ಕರಾವಳಿಯ ಸೀಫುಡ್ ಮತ್ತು  ದೇಶದ ವಿವಿಧ ಭಾಗಗಳಿಂದ ವೈವಿಧ್ಯಮಯ ಸಂಗ್ರಹ ಇಲ್ಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ರೋ| ಅರುಣ್ ಭಂಡಾರೆ, ಅನ್ನೋತ್ಸವದಿಂದ ಸಂಗ್ರಹವಾದ ಹಣವನ್ನು ಸಾರ್ವಜನಿಕ ಶೌಚಾಲಯಗಳು, ಸ್ಲೀಪಿಂಗ್ ಚಿಲ್ಡ್ರನ್ ಅರೌಂಡ್ ದಿ ವರ್ಲ್ಡ್ ಮತ್ತು ಸಮಾಜದ ಏಳಿಗೆಗಾಗಿ ಬಳಸುತ್ತಿರುವ ರೋಟರಿ ಕ್ಲಬ್‌ನ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಶ್ರೀಮತಿ ದೀಪಾ ಸಿದ್ನಾಳ್ ಮಾತನಾಡಿ, ಬೆಳಗಾವಿಯ ಜನರು ವರ್ಷವಿಡೀ ಕಾಯುವ ಈ ಆಹಾರ ಸಂಭ್ರಮದ ನಿರಂತರತೆಯನ್ನು ಅಭಿನಂದಿಸಿದರು.

ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರುಶಾಂತ್ ಅವರಿಂದ ‘ಸೂಫಿ ರೆಟ್ರೋ’ ಪ್ರದರ್ಶನ ಜರುಗಿತು. ಮುಂಬರುವ ದಿನಗಳಲ್ಲಿ ಬಾಲಿವುಡ್ ಮತ್ತು ಹಾಲಿವುಡ್ ಶೈಲಿಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಈ ಆಹಾರ ಮೇಳವು ಮುಂದಿನ ಹತ್ತು ದಿನಗಳ ಕಾಲ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅಧ್ಯಕ್ಷ ರೋ| ವಿನಾಯಕ್ ನಾಯಕ್ ಮತ್ತು ಅಧ್ಯಕ್ಷ ರೋ| ಮನೋಜ್ ಮೈಕೆಲ್ ಮನವಿ ಮಾಡಿದ್ದಾರೆ. ಟಿಕೆಟ್‌ಗಳು ಕ್ಯೂಆರ್ ಕೋಡ್ ಮೂಲಕ ಆನ್‌ಲೈನ್‌ನಲ್ಲಿ ಲಭ್ಯವಿವೆ.

WhatsApp Group Join Now
Telegram Group Join Now
Share This Article