ಅಮೇರಿಕ ಮತ್ತು ಭಾರತ ಮಧ್ಯೆ ಅಭಿವೃದ್ಧಿ ಬಲಪಡಿಸಲು ದೃಢ ಹೆಜ್ಜೆ

Ravi Talawar
ಅಮೇರಿಕ ಮತ್ತು ಭಾರತ ಮಧ್ಯೆ ಅಭಿವೃದ್ಧಿ ಬಲಪಡಿಸಲು ದೃಢ ಹೆಜ್ಜೆ
WhatsApp Group Join Now
Telegram Group Join Now

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನರೇಂದ್ರ ಮೋದಿ ಇಂದು ಶುಕ್ರವಾರ ಶ್ವೇತಭವನದಲ್ಲಿ ಭೇಟಿಯಾಗಿದ್ದಾರೆ. ಅಮೆರಿಕ ಮತ್ತು ಭಾರತ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಇಬ್ಬರೂ ಮಾತುಕತೆ ನಡೆಸಿದ್ದಾರೆ.

ಸಾಕಷ್ಟು ಫಲಪ್ರದವೂ ಆಗಿದೆ. ಎರಡು ದೇಶಗಳ ಮಧ್ಯೆ ಕೆಲ ಮಹತ್ವದ ಒಪ್ಪಂದಗಳು ಆಗಿವೆ. ಎರಡೂ ಕಡೆಯಿಂದ ಕೊಡು ಕೊಳ್ಳುವಿಕೆಗಳು ಆಗಿವೆ. ಎಲ್ಲದರ ಮಧ್ಯೆ ಈ ಇಬ್ಬರು ಮುಖಂಡರ ವೈಯಕ್ತಿಕ ಸ್ನೇಹ ತುಸು ಹೆಚ್ಚೇ ಎದ್ದುಕಂಡಿದ್ದು ವಿಶೇಷ. ಮೋದಿ ಅವರನ್ನು ತನಗಿಂತಲೂ ಕಠಿಣವಾದ ಸಂಧಾನಕಾರ ಎಂದು ಟ್ರಂಪ್ ಮೆಚ್ಚಿಕೊಂಡಿದ್ದಾರೆ. ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ತಯಾವುರ್ ರಾಣಾ ಅವರನ್ನು ಹಸ್ತಾಂತರಿಸಲು ಅಮೆರಿಕ ನಿರ್ಧರಿಸಿದೆ. ಇದು ಟ್ರಂಪ್ ಮೋದಿಗೆ ಕೊಟ್ಟಿರುವ ಸ್ಪೆಷಲ್ ಗಿಫ್ಟ್ ಎನಿಸಬಹುದು.

ಡೊನಾಲ್ಡ್ ಟ್ರಂಪ್ ಅವರ ಮುಳ್ಳಿಗೆ ಮುಳ್ಳಿ ಎನ್ನುವ ನೀತಿ ಅನುಸಾರ ಟ್ಯಾರಿಫ್ (ಆಮದು ಸುಂಕ) ನೀತಿ ಅನುಸರಿಸಲು ನಿರ್ಧರಿಸಿದ್ದಾರೆ. ಯಾವ ದೇಶ ಎಷ್ಟು ಟ್ಯಾರಿಫ್ ವಿಧಿಸುತ್ತದೋ ಅಷ್ಟೇ ಟ್ಯಾರಿಫ್ ಆ ದೇಶಕ್ಕೂ ಹಾಕುತ್ತೇವೆ ಎನ್ನುವುದು ಇದರ ಮುಖ್ಯಾಂಶ. ಚೀನಾವನ್ನು ದೃಷ್ಟಿಯಲ್ಲಿಟ್ಟುಕೊಂಡು ಟ್ರಂಪ್ ಈ ಟ್ಯಾರಿಫ್ ನೀತಿ ಪ್ರಕಟಿಸಿದ್ದಾರೆ. ಭಾರತದಂತಹ ಕೆಲ ದೇಶಗಳಿಗೆ ವಿನಾಯಿತಿ ಕೊಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅದೇನೇ ಇದ್ದರೂ ಮೋದಿ ಭೇಟಿಗೆ ಮುನ್ನವೇ ಅಮೆರಿಕವು ಹೊಸ ಟ್ಯಾರಿಫ್ ನೀತಿಗೆ ಸಹಿ ಹಾಕಿತು.

ಮೋದಿ ಜೊತೆಯಲ್ಲಿ ಪತ್ರಿಕಾಗೋಷ್ಠಿ ನಡೆಸುವಾಗಲೂ ಡೊನಾಲ್ಡ್ ಟ್ರಂಪ್ ತಮ್ಮ ಹೊಸ ಟ್ಯಾರಿಫ್ ನೀತಿಯನ್ನು ಖಚಿತಪಡಿಸಿದ್ದಾರೆ. ಭಾರತವೂ ಒಳಗೊಂಡಂತೆ ಎಲ್ಲಾ ದೇಶಗಳಿಗೂ ಪ್ರತಿಸುಂಕ (reciprocal tax) ಹಾಕುವುದಾಗಿ ಹೇಳಿದ್ದಾರೆ.

WhatsApp Group Join Now
Telegram Group Join Now
Share This Article