ಬಳ್ಳಾರಿ, ಜ.23.. ಸಂಸ್ಕಾರ ಪಡೆದ ವ್ಯಕ್ತಿ ದೇಶದ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಬಹುದೊಡ್ಡ ಕೊಡುಗೆ ನೀಡಬಲ್ಲ ಎಂದು ಗುತ್ತಿಗೆದಾರ ಮಸೀದಿಪುರ ಎಂ. ಚಂದ್ರಶೇಖರಗೌಡ ಅಭಿಪ್ರಾಯಪಟ್ಟಿದ್ದಾರೆ.
ಅವರು ಮೊನ್ನೆ ಸಂಜೆ ನಗರದ ಬ್ಯಾಂಕ್ ಕಾಲೋನಿಯ ಪಾರ್ಕ್ ನಲ್ಲಿ ಶ್ರೀಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಹಾಗೂ ಸಂಸ್ಕಾರ ಭಾರತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.
ನಮ್ಮ ಭಾರತದ ಸಂಸ್ಕೃತಿ, ಸಂಸ್ಕಾರ ವಿಶಿಷ್ಟವಾದುದು. ಜಗತ್ತಿನಿತರೇ ದೇಶಗಳಿಗೆ ಮಣ್ಣು ಒಂದು ವಸ್ತುವಾದರೆ, ಇಲ್ಲಿ ಪೂಜಿಸುವ ವಸ್ತುವಾಗಿದೆ ನಮ್ಮ ಪೂರ್ವಿಕರು ಅಂತಹ ಸಂಸ್ಕಾರ ನೀಡಿದ್ದಾರೆ. ದೇಶವನ್ನು ಭಾರತ ಮಾತೆ ಎಂದು ಪೂಜಿಸಲ್ಪಡುತ್ತಿದೆ. ಇಂತಹ ಸಂಸ್ಕಾರ ಇಂದಿನ ಮಕ್ಕಳಿಂದ ದೂರವಾಗುತ್ತಿದೆ. ಅದಕ್ಕಾಗಿ ನಾವು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಿದಾಗ ಮಾತ್ರ ವಿಕಸಿತ ಭಾರತ ನಿರ್ಮಿಸಲು ಸಾಧ್ಯ ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಟಿ.ಕೊಟ್ರಪ್ಪ ಮಾತನಾಡಿ ಸಂಸ್ಕಾರ ಎಂಬುದು ಹೇಳಿಕೊಟ್ಟರೆ ಬಾರದು ಅದನ್ನು ಹಿರಿಯರಿಂದ ಮೈಗೂಡಿಸಿಕೊಳ್ಳುವ ಕೆಲಸ ಮಕ್ಕಳಿಂದ ಆಗಬೇಕು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್. ವೀರಭದ್ರ ಗೌಡ ಮಾತನಾಡಿ. ನುಡಿ ನಡೆ ಒಂದಾಗಿದ್ದರೆ ಮಾತ್ರ ಪ್ರಾಮಾಣಿಕತೆಯಿಂದ ಸಮೃದ್ದ ಭಾರತದ ಕಲ್ಪನೆ ಸಾಧ್ಯ ಎಂದರು ಸಂಸ್ಕಾರ ಭಾರತಿ ಸಂಸ್ಥೆಯ ಗುರುರಾಜ್ ಸಸಿಹಿತ್ತು, ಅಮರೇಶ ಎಚ್.ಎಂ. ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ನ ಸುಬ್ಬಣ್ಣ, ಸಂಸ್ಕಾರ ಭಾರತಿ ಸಂಸ್ಥೆಯ ಅಧ್ಯಕ್ಷ ಹಾಗೂ ಜಾನಪದ ಕಲಾವಿದ ಯಲ್ಲನಗೌಡ ಶಂಕರಬಂಡೆ, ಕಲಾವಿದ ತಿಪ್ಪೇಸ್ವಾಮಿ ಮುದ್ದಟನೂರು ಇದ್ದರು
ಹುಲುಗಪ್ಪ ತಂಡದಿಂದ ಜಾನಪದಗೀತೆಗಳ ಗಾಯನ ಗಮನ ಸೆಳೆಯಿತು. ಹಂದಿಹಾಳು ಶ್ರೀ ಮಹಾದೇವತಾತ ಕಲಾ ಸಂಘದಿಂದ ದನ ಕಾಯೋರ ದೊಡ್ಡಾಟ ಹಾಸ್ಯ ನಾಟಕ ಪುರುಷೋತ್ತಮ ಹಂದ್ಯಾಳು ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡು ನೆರೆದ ನೂರಾರು ಜನರನ್ನು ನಗೆ ಗಡಲಲ್ಲಿ ತೇಲಿಸಿತು


