ರನ್ನ ಬೆಳಗಲಿ: ಗ್ರಾಮ ಪಂಚಾಯತಿಯ ಅವಧಿಯಲ್ಲಿ ವಾಟರ್ ಮ್ಯಾನ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಾ, ಪ್ರಸ್ತುತ ಪಟ್ಟಣವಾಗಿ ಮುಂದುವರೆದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿ ಪಟ್ಟಣ ಪಂಚಾಯತ ಕಾರ್ಯಾಲಯದಲ್ಲಿ ಪೌರ ಕಾರ್ಮಿಕನಾಗಿ ಸೇವೆ ಸಲ್ಲಿಸುತ್ತಿರುವ ಮಧ್ಯಮ ವರ್ಗದ ಶ್ರಮಿಕ ಸತ್ಯಪ್ಪ ರಾಮಪ್ಪ ಹಣಗಂಡಿ ಅವರು ತಮ್ಮ ದುಡಿಮೆಯ ಉಳಿತಾಯ ದಿಂದ ಪೌರಕಾರ್ಮಿಕ,ವಾಹನ ಚಾಲಕ,ಮತ್ತು ಸ್ವಚ್ಛತಾ ಸಿಬ್ಬಂದಿಗಳಿಗೆ ಸೇರಿ ೩೬ ಶ್ರಮಿಕರಿಗೆ ಒಂದು ಲಕ್ಷ ರೂಪಾಯಿ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಎರಡು ಜೊತೆ ಸಿದ್ಧಪಡಿಸಿದ ಸಮವಸ್ತ್ರ ನೀಡಿ, ಅವರೆಲ್ಲರ ಪ್ರೀತಿಯ ಅಣ್ಣನಾಗಿದ್ದಾರೆ. ಪಟ್ಟಣದಲ್ಲಿ ಜರುಗುವ ಅನೇಕ ಹಬ್ಬ, ಹರಿದಿನ, ಸಾಂಸ್ಕೃತಿಕ, ಶೈಕ್ಷಣಿಕ ಉತ್ಸವಗಳಲ್ಲಿ ಹೆಸರನ್ನ ಸೂಚಿಸಿದೆ ಕಾಣಿಕೆಯನ್ನು ನೀಡುತ್ತಾ ಸರಳತೆಯ ವ್ಯಕ್ತಿತ್ವವನ್ನು ಹೊಂದಿ, ಶ್ರಮಿಕರಲ್ಲಿ ಸಮೀಕರಾಗಿ ಶ್ರಮಿಸುತ್ತಿದ್ದಾರೆ.
ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಕೆಲಸ ಮಾಡುತ್ತೇವೆ.ಇತ್ತೀಚಿಗೆ ನನ್ನ ಜೇ? ಸುಪುತ್ರಿ ರತ್ನಾಳ ಮದುವೆ ಜರಗಿತು. ಆ ಒಂದು ಸಂತಸದ ಸಂಭ್ರಮವನ್ನು ನನ್ನ ಒಡನಾಡಿಗಳ ಜೊತೆಗೆ ಹಂಚಿಕೊಂಡಿದೆನೆ.ಇರುವ? ದಿನ ಎಲ್ಲರೊಂದಿಗೆ ಪ್ರೀತಿಯಿಂದ ಬದುಕುವ ಬಯಕೆ ನನ್ನದು ಎಂದು ಹೇಳಿದರು.
ಪಟ್ಟಣ ಪಂಚಾಯತ ಪ್ರಥಮ ದರ್ಜೆ ಸಹಾಯಕರಾದ ಪಿ ಡಿ ನಾಗನೂರು ಅವರು ಸತ್ಯಪ್ಪ ಹನಗಂಡಿ ಅವರೊಂದಿಗೆ ಎಲ್ಲ ಪೌರಕಾರ್ಮಿಕರಿಗೆ,ವಾಹನ ಚಾಲಕರಿಗೆ ಮತ್ತು ಸ್ವಚ್ಛತಾ ಸಿಬ್ಬಂದಿಗಳಿಗೆ ಸಿದ್ಧಪಡಿಸಿದ ಸಮವಸ್ತ್ರಗಳನ್ನು ವಿತರಿಸಿದರು.