ಹು-ಧಾ ಕಮಿಷನರ್​ ಸೇರಿದಂತೆ 25 ಐಪಿಎಸ್​ ಅಧಿಕಾರಿಗಳ ವರ್ಗ

Ravi Talawar
ಹು-ಧಾ ಕಮಿಷನರ್​ ಸೇರಿದಂತೆ 25 ಐಪಿಎಸ್​ ಅಧಿಕಾರಿಗಳ ವರ್ಗ
WhatsApp Group Join Now
Telegram Group Join Now

ಬೆಂಗಳೂರು, ಜುಲೈ 03: ಹುಬ್ಬಳ್ಳಿಯಲ್ಲಿ ಕಳೆದ ಮೂರು ತಿಂಗಳಲ್ಲಿ 3 ಕೊಲೆಗಳಾದವು. ಇಬ್ಬರು ಯುವತಿಯರು ಮತ್ತು ಓರ್ವ ಯುವಕನ ಕೊಲೆಯಾಯಿತು. ಇದರಿಂದ ಭಯಗೊಂಡ ಹುಬ್ಬಳ್ಳಿ ಜನತೆ ಮಹಾನಗರದ ಕಾನೂನು ಸುವ್ಯವಸ್ಥೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಹುಬ್ಬಳ್ಳಿ-ಧಾರವಾಡ  ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ್ ಅವರನ್ನು ವರ್ಗಾವಣೆಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರು. ಇದೀಗ ಸರ್ಕಾರ ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತೆ ರೇಣುಕಾ ಸುಕುಮಾರ್​ ಸೇರಿದಂತೆ ರಾಜ್ಯದ 25 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಐಪಿಎಸ್​ ಅಧಿಕಾರಿ ರೇಣುಕಾ ಸುಕುಮಾರ್​ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಎಐಜಿಪಿಯಾಗಿ ಬೆಂಗಳೂರು ಡಿಜಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್​ ಆಯುಕ್ತರಾಗಿ ಐಪಿಎಸ್​ ಅಧಿಕಾರಿ ಎನ್. ಶಶಿಕುಮಾರ್​ ಅವರನ್ನು ನೇಮಿಸಲಾಗಿದೆ.

 

WhatsApp Group Join Now
Telegram Group Join Now
Share This Article