ತಡರಾತ್ರಿ ತಲೆಕೆಳಗಾಗಿ ಕಾಲುವೆಗೆ ಬಿದ್ದ ಕಾರ್

Ravi Talawar
ತಡರಾತ್ರಿ ತಲೆಕೆಳಗಾಗಿ ಕಾಲುವೆಗೆ ಬಿದ್ದ ಕಾರ್
WhatsApp Group Join Now
Telegram Group Join Now

ಹೊಸಪೇಟೆ 13: ನಗರದ ಮದ್ಯ ಭಾಗದಲ್ಲಿ ರುವ ಬಸವಣ್ಣ ಕಾಲುವೆಯಲ್ಲಿ ತಡ. ರಾತ್ರಿ    1.30 ಗಂ ಸುಮಾರಿಗೆ  ಕೆಎ..03 ಏ ಎಲ್. 0007, ನೊಂದಣಿ ಇರುವ ಕಾರ್ ತಲೆಕೆಳಗಾಗಿ ಕಾಲುವೆ ಗೆ  ಬಿದ್ದಿದೆ.  ಚಾಲಕನ ನಿಯಂತ್ರಣಕ್ಕೆ ಬಾರದೆ ಕಾರ್ ಕಾಲುವೆಗೆ, ಹಾಕಿದ ಕಬ್ಬಿಣದ ಬ್ಯಾರಿಕೇಡ್ ಗಳನ್ನು ದಾಟಿ ಕಾಲುವೆಗೆ ಎಗರಿದೆ.

ಕಾರ್ ನಲ್ಲಿ ಇಬ್ಬರು ವ್ಯಕ್ತಿಗಳು ಇದ್ದು ಯಾವುದೇ ಅಪಾಯಗಳಾಗದೆ ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ.ಕಾರ್ ಸ್ಥಳಿಯ ವ್ಯಾಪಾರಿ ಗಳಾದ ಮನೋಜ್ ಕುಮಾರ್ ಜೈನ್ ಅವರದ್ದಾಗಿದ್ದು ,ಬೆಳಿಗ್ಗೆ 8ಗಂ.ಸುಮಾರಿಗೆ ವಾಹನ ಮಾಲಿಕರೇ ಕ್ರೇನ್ ಸಹಾಯದಿಂದ ಕಾರ್ ನ ಕಾಲುವೆ ಯಿಂದ ಮೆಲಕ್ಕೆತ್ತಿದ್ದಾರೆ.ಕಾಲುವೆ ಪಕ್ಜದ ರಸ್ತೆಯಲ್ಲಿ ಹೆಚ್ಚು ನಾಯಿಗಳು ಇದ್ದು, ಕಾರ್ ಚಾಲನೆ ಮಾಡುವ ಸಮಯದಲ್ಲಿ ಅಡ್ಡ ಬಂದ ಪರಿಣಾಮ ನಾಯಿಗಳನ್ನು ರಕ್ಷಿಸಲು ಹೋಗಿ ,ನಿಯಂತ್ರಣ ಕಳೆದು ಕೊಂಡು  ಘಟನೆ ಜರುಗಿದೆ ಎಂದು ತಿಳಿದು ಬಂದಿದೆ.ಈ ಸಂಭಂದ ಯಾವುದೇ ಪ್ರಕರಣ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Share This Article