ವೀರರಾಣಿ ಚೆನ್ನಮ್ಮಳ ಆದರ್ಶ ಅಳವಡಿಸಿಕೊಳ್ಳಲು ಕರೆ

Ravi Talawar
ವೀರರಾಣಿ ಚೆನ್ನಮ್ಮಳ ಆದರ್ಶ ಅಳವಡಿಸಿಕೊಳ್ಳಲು ಕರೆ
WhatsApp Group Join Now
Telegram Group Join Now
ಹಸಿರು ಕ್ರಾಂತಿ ವರದಿ, ಜಮಖಂಡಿ: ಬ್ರಿಟಿಷರ ಪಾಲಿನ ಸಿಂಹಸ್ವಪ್ನ, ಕನ್ನಡದ ಕೆಚ್ಚೆದೆಯ ನಾರಿ,  ಕಿತ್ತೂರ ಚೆನ್ನಮ್ಮ ರಾಣಿಯ ಆದರ್ಶವನ್ನು ಅಳವಡಿಸಿಕೊಳ್ಳಿ ಎಂದು ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ಹೇಳಿದರು.
    ಅವರು ಕುಂಬಾರಹಳ್ಳ ಸರಕಾರಿ  ಪ್ರೌಢ ಶಾಲೆಯಲ್ಲಿ  ಜರುಗಿದ ರಾಣಿ ಚೆನ್ನಮ್ಮಾಜೀಯವರ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಪ್ರತಿಯೊಬ್ಬರಿಗೂ ಚೆನ್ನಮ್ಮಳ ದೇಶಭಕ್ತಿ ಆದರ್ಶವಾಗಬೇಕು ಎಂದರು.
     ಶಿಕ್ಷಕ ಸಂಗನಬಸವ ಉಟಗಿ ಮಾತನಾಡಿ ಚೆನ್ನಮ್ಮಳ ಧೈರ್ಯ, ಶೌರ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು, ಚೆನ್ನಮ್ಮ ಅಂದಿನ ಕಾಲದಲ್ಲಿಯೇ ನಮಗೆಲ್ಲ ಮಾದರಿ ರತ್ನವಾಗಿದ್ದರು ಎಂದರು.
     ಶಿಕ್ಷಕಿ ಸವಿತಾ ಬೆನಕಟ್ಟಿ ಮಾತನಾಡಿ ಚೆನ್ನಮ್ಮಾಜಿ ರಾಜಕೀಯ ಮುತ್ಸದ್ದಿಯಾಗಿದ್ದರು. ದತ್ತುಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯ ವಿರುದ್ಧ ರಣಕಹಳೆ ಮೊಳಗಿದರು ಎಂದು ಹೇಳಿದರು.
 ಶಿಕ್ಷಕರಾದ ಸಂಜೀವ ಝಂಬುರೆ, ಬಾಹುಬಲಿ ಮುತ್ತೂರ, ಚಂದ್ರಕಾಂ
WhatsApp Group Join Now
Telegram Group Join Now
Share This Article