ಅಥಣಿ: ಅಥಣಿ ವಕೀಲರ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಎ. ಎ ಹುದ್ದಾರ, ಉಪಾಧ್ಯಕ್ಷರಾಗಿ ಆರ್. ಪಿ ಹಗೇದ, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಸಿ. ಕೆ. ಬಾಗಿ, ಖಜಾಂಚಿಯಾಗಿ ಜಿ.ಡಿ.ಹಿರೇಮಠ, ಚುನಾವಣೆಯಲ್ಲಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಎನ್. ಪಿ. ಬಾಬರ ಮತ್ತು ಪ್ರಹಿಳಾ ಪ್ರತಿನಿಧಿಯಾಗಿ ನ್ಯಾಯವಾದಿ ಗೀತಾ ಕಾಂಬಳೆ ಅವಿರೋಧವಾಗಿ ಎಂದು ಚುನಾವಣಾಧಿಕಾರಿ ಎಸ್. ಬಿ ಅಂಬಿ ಘೋಷಣೆ ಮಾಡಿದರು.
ಅಥಣಿ ಪಟ್ಟಣದ ನ್ಯಾಯವಾಧಿಗಳ ಸಂಕಿರ್ಣದಲ್ಲಿ ನಡೆದ ಅಥಣಿ ತಾಲೂಕು ನ್ಯಾಯವಾಧಿಗಳ ಸಂಘದ ೨ ವರ್ಷದ ಅವಧಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಸಿದರು.
ಅಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಎ. ಎ ಹುದ್ದಾರ ಮಾತನಾಡಿ, ಈಗಾಗಲೇ ಮಂಜುರಾದ ೩೬ ಕೋಟಿ ರೂ. ಮೊತ್ತದ ನ್ಯಾಯಾಲಯ ಸಂಕೀರ್ಣ ಕಾಮಗಾರಿ ಪ್ರಾರಂಭಿಸುವ ನಿಟ್ಟಿನಲ್ಲಿ ನಾನು ಇಪ್ಪತ್ತನಾಲ್ಕು ಗಂಟೆ ಕಾರ್ಯನಿರ್ವಹಿಸಿ ಕಾಮಗಾರಿ ಪ್ರರಂಭಕ್ಕೆ ಪ್ರಾಮಾಣಿಕ ಪ್ರೇಯತ್ನ ಮಾಡುತ್ತೆನೆ. ನ್ಯಾಯವಾದಿ ಸಂಘದ ಹಿಂದಿನ ಅಧ್ಯಕ್ಷರುಗಳು ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ನಾನೂ ಕೂಡ ಅವರಂತೆಯೇ ಸಂಘದ ಬೆಳವಣಿಗೆಗಾಗಿ ಕಾರ್ಯನಿರ್ವಹಿಸುವೆ. ಚುನಾವಣೆಯಲ್ಲಿ ನನ್ನ ಗೆಲುವಿಗೆ ಸಹಕಾರ ನೀಡಿದ ಹಿರಿಯ, ಕಿರಿಯ ವಕೀಲ ಬಂಧುಗಳನ್ನು ಅಭಿನಂದಿಸಿದರು
ಉಪಾಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಆರ್.ಪಿ.ಹಗೇದ ಮಾತನಾಡಿ, ನನ್ನನ್ನು ಆಯ್ಕೆ ಮಾಡಿದ ನನ್ನ ಸಹೋದ್ಯೋಗಿಗಳಿಗೆ ಚಿರ ಋಣಿ ಎಂದ ಅವರು ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವೆ ಎಂದರು.
ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಹಿರಿಯ ನ್ಯಾಯವಾದಿ ಎಸ್. ಎ. ಪಾಟೀಲ(ಹುಲಗಬಾಳ) ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಕೆ. ಎ. ವಣಜೋಳ, ನಿಂಗಪ್ಪ ಖೋಕಲೆ, ಎಸ್. ಎ ಪಾಟೀಲ, ಬಸವರಾಜ ಢಂಗಿ, ಎಸ್. ಎಸ್ ಪಾಟೀಲ, ಸುನೀಲ ಸಂಕ, ಧರೆಪ್ಪ ಠಕ್ಕಣ್ಣವರ, ಬಸವರಾಜ ಅಂಬಿ, ಎಮ್. ಡಿ ಗುಂಜಿಗಾಂವಿ, ಎ. ಆರ್ ಮಾಳೋಜಿ, ಎಲ್. ಡಿ ಹಳಿಂಗಳಿ, ವಿನಯ ಪಾಟೀಲ, ಸೇರಿದಂತೆ ನೂರಾರು ವಕೀಲರು ಎ.ಎ.ಹುದ್ದಾರ ಗೆಲುವಿಗೆ ಸಂಭ್ರಮಿಸಿದರು.
ಬಾಕ್ಸ್:
ನಮ್ಮ ಪ್ಯಾನಲ್ ನ ಹುದ್ದಾರ ಅವರು ಅಧ್ಯಕ್ಷರಾಗಿ ಚುನಾವಣೆಯಲ್ಲಿ ಗೆದ್ದಿರುವದು ನಮಗೆ ಸಂತಸ ತಂದಿದೆ. ಸಂಘದ ಹಿರಿಯರಾಗಿದ್ದು ಅವರು ಸಂಘದ ಎಲ್ಲ ಚಟುವಟಿಕೆಗೆಳನ್ನು ಶೃದ್ದೆಯಿಂದ ನಿರ್ವಹಣೆ ಮಾಡಲಿದ್ದಾರೆ. ಚುನಾವಣೆಯಲ್ಲಿ ಬೇರೆ ಬೇರೆಯಾಗಿ ಸ್ಪರ್ದೇ ಮಾಡುವದು ಅನಿವಾರ್ಯ, ಆದರೆ ನಾಳೆಯಿಂದ ಸಂಘದ ಎಲ್ಲ ಸದಸ್ಯರು ಒಂದೆ ಎನ್ನುವ ಭಾವನೆಯಲ್ಲಿ ನಾವು ಸ್ನೇಹಮಯವಾಗಿ ವೃತ್ತಿ ಜೀವನ ನಡೆಸುತ್ತೇವೆ
“ಕಲ್ಲಪ್ಪ ವನಜೋಳ, ಹಿರಿಯ ನ್ಯಾಯವಾದಿಗಳು ಅಥಣಿ”