ಬಾಗಲಕೋಟೆ, 24 : ಮಹತ್ವದ ಸಾಧನೆಯೊಂದರಲ್ಲಿ, ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯಲ್ಲಿ ಹಿರಿಯ ತಜ್ಞ ಕಾರ್ಡಿಯೋಥೊರಾಸಿಕ್ ಮತ್ತು ಟ್ರಾನ್ಸ್‌ಪ್ಲಾಂಟ್ ಸರ್ಜನ್ ಡಾ. ಅಶ್ವಿನಿ ಕುಮಾರ್ ಪಸರದ್ ನೇತೃತ್ವದಲ್ಲಿ, ಬಾಗಲಕೋಟೆ ಜಿಲ್ಲೆಯ ಹುನಗುಂದದ 68 ವರ್ಷದ ವ್ಯಕ್ತಿ, ಮೂರನೇ ತಲೆಮಾರಿನ ಲೆಫ್ಟ್ ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸ್ (ಹಾರ್ಟ್ ಮೇಟ್ 3)ನ್ನು ಯಶಸ್ವಿಯಾಗಿ ಅಳವಡಿಸಿಕೊಂಡ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರೋಗಿ ಹೃದಯಾಘಾತಕ್ಕೆ ಒಳಪಟ್ಟಿದ್ದು, ಆಸ್ಪತ್ರೆಗೆ ಬಂದಾಗ ಆಂಜಿಯೋಪ್ಲಾಸ್ಟಿ ನಡೆಸಲಾಯಿತು. ಆದರೂ, ಹೃದಯಾಘಾತ ಹೃದಯಕ್ಕೆ ತೀವ್ರ ಹಾನಿ ಮಾಡಿದ್ದು, ದುರ್ಬಲ ಹೃದಯ ಬಡಿತಗಳನ್ನು ತೋರಿಸುತ್ತಿತ್ತು, ಕೇವಲ ಶೇ. 10 ರಷ್ಟು ರಕ್ತವನ್ನು ಪಂಪ್ ಮಾಡುತ್ತಿತ್ತು. ಕುಸಿಯುತ್ತಿದ್ದ ರಕ್ತದೊತ್ತಡ ಮತ್ತು ದ್ರವ ತುಂಬಿದ ಶ್ವಾಸಕೋಶಗಳೊಂದಿಗೆ ಉಸಿರಾಡಲು ಹೆಣಗಾಡುತ್ತಿದ್ದ ಅವರ ಯಕೃತ್ತು ಮತ್ತು ಮೂತ್ರಪಿಂಡಗಳು ಸಹ ವಿಫಲವಾಗುತ್ತಿದ್ದವು, ಇದರಿಂದ ಅವರು ಕೆಲವೇ ಗಂಟೆಗಳು, ಹೆಚ್ಚೆಂದರೆ ಬಹುಶಃ ಒಂದು ದಿನ ಮಾತ್ರ ಬದುಕುವ ಸಾಧ್ಯತೆ ಇತ್ತು. ಪರಿಸ್ಥಿತಿಯ ತೀವ್ರತೆ ಅರಿತು, ತಕ್ಷಣದ ಹೃದಯ ಕಸಿ ಆಯ್ಕೆ ಲಭ್ಯವಿಲ್ಲದ ಕಾರಣ, ರೋಗಿಗೆ ಆಧುನಿಕ ಲೆಫ್ಟ್ ವೆಂಟ್ರಿಕ್ಯುಲರ್ ಅಸಿಸ್ಟ್ ಡಿವೈಸ್ ನ್ನು ಅಳವಡಿಸಲಾಯಿತು. ಇದು ಲಿಥಿಯಂ ಬ್ಯಾಟರಿಗಳಿಂದ ಚಾಲಿತ ಕೃತಕ ಹೃದಯವಾಗಿ ಕಾರ್ಯನಿರ್ವಹಿಸುತ್ತದೆ. ಈ ಸಾಧನ ಅವರ ಹೃದಯ ವೈಫಲ್ಯತೆಯನ್ನು ಕಡಿಮೆ ಮಾಡಿದ್ದಲ್ಲದೆ, ಹೃದಯ ಕಸಿಗೆ ಪರ್ಯಾಯವಾಯಿತು. ಅಂತಿಮ ಹಂತದ ಹೃದಯ ವೈಫಲ್ಯಕ್ಕೆ ಕೊನೆಯ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸಿತು.
ಹೃದಯದ ವೈಫಲ್ಯ ಮುಂದುವರಿಕೆ ಹೆಚ್ಚಿದಂತೆ, ಹೃದಯಾಘಾತದ ನಂತರದ ಬದುಕುಳಿಯುವಿಕೆಯ ಪ್ರಮಾಣವನ್ನು ಹೆಚ್ಚಿಸುವಲ್ಲಿ ಹಾರ್ಟ್ ಮೇಟ್ 3 ಎಲ್.ವಿ.ಎ.ಡಿ ಯಂತಹ ನವೀನ ಚಿಕಿತ್ಸಾ ಆಯ್ಕೆಗಳು ಹೊಸ ಭರವಸೆ ಮೂಡಿಸುತ್ತವೆ. ಹೃದಯದ ಮೇಲ್ತುದಿಯಲ್ಲಿ ಅಳವಡಿಸಲಾಗುವ ಈ ಸಾಧನ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ. ದೇಹದಾದ್ಯಂತ ಆಮ್ಲಜನಕಯುಕ್ತ ರಕ್ತವನ್ನು ಪಂಪ್ ಮಾಡುತ್ತದೆ ಮತ್ತು ಇದರಿಂದ ಕನಿಷ್ಠ ಚಿಕಿತ್ಸೆಯ ಅವಲಂಬನೆಯೊಂದಿಗೆ ರೋಗಿಗಳು ಸಾಮಾನ್ಯ ಚಟುವಟಿಕೆಗಳನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆ.
ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ ಹಿರಿಯ ಸಲಹಾತಜ್ಞ, ಹೃದಯ ಶಸ್ತ್ರಚಿಕಿತ್ಸಕ ಡಾ. ಅಶ್ವಿನಿ ಕುಮಾರ್ ಪಸರದ್ ಅವರು ಯಶಸ್ವಿ ಶಸ್ತ್ರಚಿಕಿತ್ಸೆಯ ಕುರಿತು, “ಎಲ್.ವಿ.ಎ.ಡಿ ಅಳವಡಿಕೆಯಿಂದ ನಿಖರ ಶಸ್ತ್ರಚಿಕಿತ್ಸೆಯ ಪ್ರಾಮುಖ್ಯತೆಯನ್ನು ಮತ್ತು ಸುಧಾರಿತ ಹೃದಯ ವೈಫಲ್ಯದ ಚಿಕಿತ್ಸೆಯ ಸಂಕೀರ್ಣತೆಗಳನ್ನು ನ್ಯಾವಿಗೇಟ್ ಮಾಡುವಲ್ಲಿ ವೈಯಕ್ತಿಕ ಕೊಡಲು ಸಾಧ್ಯವಾಗುತ್ತದೆ. ಈ ಹೃದಯ ಪಂಪ್ ದೇಹದಿಂದ ನಿರ್ಗಮಿಸುವ ಮತ್ತು ನಿಯಂತ್ರಕದೊಂದಿಗೆ ಸಂಪರ್ಕ ಕಲ್ಪಿಸುವ ಬಳ್ಳಿಯೊಂದಿಗೆ ಸಂಪರ್ಕ ಹೊಂದಿದೆ. ನಿಯಂತ್ರಕವನ್ನು ಬೆಲ್ಟ್‌ಗೆ ಕಟ್ಟಲಾಗಿದೆ ಮತ್ತು ಇದು ಬ್ಯಾಗ್ ಅಥವಾ ಜಾಕೆಟ್‌ನಲ್ಲಿ ಸಾಗಿಸಬಹುದಾದ, ರಿಚಾರ್ಜ್ ಮಾಡಬಹುದಾದ ಬ್ಯಾಟರಿಗಳಿಂದ ಚಾಲಿತವಾಗಿದೆ. ನಿಮ್ಮ ಫೋನ್ ಅಥವಾ ಎಲೆಕ್ಟ್ರಿಕ್ ಕಾರ್‌ನಲ್ಲಿ ಮಾಡಬಹುದಾದಂತೆಯೇ ನೀವು ಪ್ರತಿದಿನ ಈ ಬ್ಯಾಟರಿಗಳನ್ನು ಚಾರ್ಜ್ ಮಾಡುತ್ತೀರಿ. ಇದು ನಮ್ಮ ವಿಧಾನವನ್ನು ಸ್ಥಿತ್ಯಂತರಗೊಳಿಸಲು ಒಂದು ಮಾದರಿಯಾಗಿ ಕಾರ್ಯನಿರ್ವಹಿಸುತ್ತದೆ, ನಿಖರ ಶಸ್ತ್ರಚಿಕಿತ್ಸಾ ಮಧ್ಯಸ್ಥಿಕೆಗಳ ಮೌಲ್ಯವನ್ನು ಒತ್ತಿಹೇಳುತ್ತದೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ತಾಂತ್ರಿಕ ಆವಿಷ್ಕಾರದೊಂದಿಗೆ ರೋಗಿಗಳ ಆರೈಕೆಯನ್ನು ವೈಯಕ್ತಿಕಗೊಳಿಸಿದೆ. ಈ ಸಾಧನೆ ಹೃದಯದ ಆರೋಗ್ಯ ರಕ್ಷಣೆಯಲ್ಲಾದ ಪ್ರಮುಖ ಪ್ರಗತಿಯನ್ನು ಸೂಚಿಸುತ್ತದೆ, ಭವಿಷ್ಯದ ಆವಿಷ್ಕಾರಗಳಿಗೆ ನೀಲನಕ್ಷೆ ಒದಗಿಸುತ್ತದೆ. ಈ ಸಂಕೀರ್ಣ ವೈದ್ಯಕೀಯ ಪರಿಣತಿ ಮತ್ತು ಸಹಾನುಭೂತಿಯ ಆರೈಕೆ, ಹೃದಯ ವೈಫಲ್ಯದ ಚಿಕಿತ್ಸೆಯ ನಿರ್ವಹಣೆಯಲ್ಲಿ ಹೊಸ ಅಧ್ಯಾಯವನ್ನು ತೆರೆದಿದೆ,” ಎಂದರು.
ಹೊಸ ಜೀವನ ಪಡೆದ ನಂತರ ತನ್ನ ಕೃತಜ್ಞತೆ ಅರ್ಪಿಸಿದ ರೋಗಿ, “ಸ್ಪರ್ಶ್ ಆಸ್ಪತ್ರೆಯಲ್ಲಿನ ಸಂಪೂರ್ಣ ಹೃದಯರಕ್ತನಾಳದ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸೆ ತಂಡಕ್ಕೆ ಅಸಾಮಾನ್ಯ ಸಹಯೋಗ ಮತ್ತು ಸಮರ್ಪಣಾ ಮನೋಭಾವಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಅವರ ಸಾಮೂಹಿಕ ಪ್ರಯತ್ನದಿಂದ ನಾನು ನನ್ನ ಸಾಮಾನ್ಯ ಜೀವನಕ್ಕೆ ಮರಳಲು ಸಾಧ್ಯವಾಯಿತು,” ಎಂದರು.
ರೋಗಿಯ ಚೇತರಿಕೆಯ ಪ್ರಯಾಣದಲ್ಲಿ ಹಾರ್ಟ್‌ಮೇಟ್ 3 ಎಲ್.ವಿ.ಎ.ಡಿ ಯ ಪರಿವರ್ತಕ ಶಕ್ತಿ ಅಡಗಿದೆ – ಆರೋಗ್ಯ ಮತ್ತು ಚೈತನ್ಯವನ್ನು ಪುನಃಸ್ಥಾಪಿಸಲು ವೈದ್ಯಕೀಯ ನಾವೀನ್ಯತೆಗಳ ಸಾಮರ್ಥ್ಯಕ್ಕೆ ಇದುವೇ ಸಾಕ್ಷಿ.