ಜೈಪುರ, ರಾಜಸ್ಥಾನ: ದೌಸಾದಲ್ಲಿ 150 ಅಡಿ ಬೋರ್‌ವೆಲ್‌ನಲ್ಲಿ ಸಿಲುಕಿದ್ದ 5 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 3 ದಿನಗಳ ಕಾಲ ನಡೆದ ವ್ಯಾಪಕ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಡಿಸೆಂಬರ್ 9 ರಂದು ಆಟವಾಡುತ್ತಿದ್ದಾಗ ಬಾಲಕ ಆರ್ಯನ್ 150 ಅಡಿ ಆಳದ ಬೋರ್‌ವೆಲ್‌ನಲ್ಲಿ ಬಿದ್ದಿದ್ದ.
ವಿಷಯ ತಿಳಿದು ಕೇವಲ ಒಂದು ಗಂಟೆಯಲ್ಲೇ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಪ್ರಾರಂಭ ಮಾಡಿತ್ತು. ಬುಧವಾರ ರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಬೋರ್‌ವೆಲ್‌ನಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಬಾಲಕ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು.
ಮಗುವನ್ನು ಬದುಕುಳಿಯುವಂತೆ ಮಾಡಲು ವೈದ್ಯರು ಎಲ್ಲ ಪ್ರಯತ್ನಗಳನ್ನು ಮಾಡಿದರು. ಆದರೆ ಎಲ್ಲವೂ ವ್ಯರ್ಥವಾಯಿತು ಎಂದು ದೌಸಾದಲ್ಲಿನ ಮುಖ್ಯ ವೈದ್ಯಕೀಯ ಅಧಿಕಾರಿ ಮಗುವಿನ ಸಾವಿನ ಬಗ್ಗೆ ಮಾಹಿತಿ ನೀಡಿದರು. ಬೋರ್‌ವೆಲ್‌ನಿಂದ ಮೇಲೆ ತೆಗೆದುಕೊಂಡು ಬಂದ ತಕ್ಷಣ ಬಾಲಕನನ್ನು ಕರೆತರಲಾಗಿತ್ತು. ತಕ್ಷಣ ಬಾಲಕನನ್ನು ಉಳಿಸಿಕೊಳ್ಳಲು ಎಲ್ಲ ಅಗತ್ಯ ಚಿಕಿತ್ಸೆ ನೀಡಿ, ಬದುಕಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಲಾಯಿತು. ನಾವು ಎರಡು ಬಾರಿ ಇಸಿಜಿ ಮಾಡಿದೆವು ಆದರೆ ಮಗು ಬದುಕುಳಿಯಲಿಲ್ಲ ಎಂದು ದೌಸಾ ಸಿಎಂಒ ಹೇಳಿದರು.