ಬೆಳಗಾವಿ: ಪ್ರಪಂಚದಾದ್ಯಂತ ಜನರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಭಾರತದ ಯೋಗಕ್ಕೆ ಮೊರೆ ಹೋಗುತ್ತಿರುವದು ಭಾರತೀಯ ಸನಾತನ ಸಂಸ್ಕೃತಿಯ ಹೆಮ್ಮೆ ಎಂದು ಆರ್ ಎಸ್ ಎಸ್ ಹಿರಿಯರಾದ ದೀಲಿಪ್ ವರ್ಣೆಕರ ಅಭಿಪ್ರಾಯಪಟ್ಟರು.
ಗ್ರಾಮಾಂತರ ಜಿಲ್ಲಾ ಬಿಜೆಪಿ ಘಟಕದಿಂದ ನಗರದ ಸುವರ್ಣಗಾಡನ್ ದಲ್ಲಿ ಆಯೋಜಿಸಿದ್ದ ವಿಶ್ವ ಯೋಗದಿನಾಚರಣೆಯಲ್ಲಿ ಮಾತನಾಡಿ, ಪ್ರಪಂಚಕ್ಕೆ ಯೋಗವನ್ನು ನೀಡಿರುವ ನಮ್ಮ ದೇಶದ ಪ್ರಾಚೀನ ಋಷಿಮುನಿಗಳ ಕೊಡುಗೆಯನ್ನು ಪ್ರಪಂಚವೆ ಕೊಂಡಾಡುತ್ತಿದೆ. ಭಾರತದಲ್ಲಿ ಸುಮಾರು 5000 ವರ್ಷಗಳ ಹಿಂದೆ ಭಾರತದಲ್ಲಿ ಯೋಗ ಪದ್ಧತಿ ರೂಢಿಯಲ್ಲಿತ್ತು. ಯೋಗವನ್ನು ಇಂದು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಜನರು ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಅಭ್ಯಾಸ ಮಾಡುತ್ತಿದ್ದಾರೆ. ಯೋಗದ ಮಹತ್ವವನ್ನು ಜಗತ್ತಿಗೆ ಸಾರುವ ಉದ್ದೇಶದಿಂದ ಪ್ರತಿವರ್ಷ ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ.
ʼನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗʼ ಎನ್ನುವುದು ಈ ವರ್ಷ ಥೀಮ್ ಆಗಿದೆ. ಯೋಗವು ವೈಯಕ್ತಿಕ ಆರೋಗ್ಯ ಮಾತ್ರವಲ್ಲದೇ, ಸಾಮಾಜಿಕ ಯೋಗಕ್ಷೇಮಕ್ಕೂ ಕೊಡುಗೆ ನೀಡುತ್ತದೆ. ಇದು ವೈಯಕ್ತಿಕ ಮತ್ತು ಸಾಮೂಹಿಕ ಆರೋಗ್ಯದ ಪರಸ್ಪರ ಸಂಬಂಧವನ್ನು ಒತ್ತಿಹೇಳುತ್ತದೆ. ಯೋಗವು ವ್ಯಕ್ತಿಯೊಬ್ಬನ ಒಳಗಿನ ಶಕ್ತಿಯನ್ನು ಅನಾವರಣ ಮಾಡುವ ಶಕ್ತಿಯಿದ್ದು ಆರೋಗ್ಯ ವೃದ್ಧಿಪಡಿಸಲು ಇರುವ ಒಂದು ವಿಧಾನವಾಗಿದೆ. ಯೋಗವು ವೈಯಕ್ತಿಕ ಆತ್ಮವನ್ನು ಭಗವಂತನ ವಿಶ್ವಾತ್ಮದೊಂದಿಗೆ ಸಂಧಿಯಾಗುವಂತೆ ಮಾಡುವುದು ಎಂದು ಪತಂಜಲಿ ಮಹಾಋಷಿಗಳೆ ಹೆಳಿದ್ದಾರೆ, ಯೋಗ ಎನ್ನುವುದು ಮನಸ್ಸಿನ ಮಾರ್ಪಾಡನ್ನು ಹತ್ತಿಕ್ಕಿ ಒಂದೆ ಮಾರ್ಗದಲ್ಲಿ ಕೊಂಡೊಯ್ಯುವ ಕ್ರಿಯೆಯಾಗಿದೆ ಎಂದರು.
ವಿವಿಧ ಯೋಗಗಳು ಹಾಗೂ ಮುದ್ರೆಗಳನ್ನು ಹೇಳಿಕೊಡುವ ಮೂಲಕ ಅವುಗಳ ಮಹತ್ವ ತಿಳಿಸಿ, ಉತ್ತಮ ಆರೊಗ್ಯಕ್ಕಾಗಿ ದಿನನಿತ್ಯ ಯೋಗ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನೂತನ ಸಂಸದರಾದ ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಪಾಟೀಲ, ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ಬಿಜೆಪಿ ರಾಜ್ಯ ಸಾಮಾಜಿಕ ಜಾಲತಾಣದ ತಂಡದ ನೀತಿನ ಚೌಗಲೆ, ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ಕೆ.ವಿ.ಪಾಟೀಲ, ಧನಶ್ರೀ ದೇಸಾಯಿ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಸಂತೋಷ ದೇಶನೂರ, ಸಹ ಸಂಚಾಲಕ ಸಿದ್ದು ಪಾಟೀಲ, ಸುಭಾಷ ಸಣ್ಣವೀರಪ್ಪನವರ, ಜಿಲ್ಲಾ ಪ್ರಕೊಷ್ಟಾ ಸಂಚಾಲಕ ಮಹೇಶ ಮೊಹಿತೆ, ಜಿಲ್ಲಾ ಯುವ ಮೊರ್ಚಾ ಅಧ್ಯಕ್ಷ ಮಹಾಂತೇಶ ಚಿನ್ನಪ್ಪಗೌಡರ, ಓಬಿಸಿ ಮೊರ್ಚಾ ಅಧ್ಯಕ್ಷ ಉಮೇಶ ಪುರಿ, ಎಸ್ಸಿ ಮೊರ್ಚಾ ಅಧ್ಯಕ್ಷ ಯಲ್ಲೇಶ ಕೊಲಕಾರ, ಜಿಲ್ಲಾ ವೈದ್ಯಕೀಯ ಪ್ರಕೊಷ್ಟಾ ಸಂಚಾಲಕ ಡಾ.ಗುರು ಕೋತಿನ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ವಿಠಲ ಸಾಯಣ್ಣವರ, ವೀರಭದ್ರ ಪೂಜಾರಿ ಸೇರಿದಂತೆ ಜಿಲ್ಲಾ ಮತ್ತು ರಾಜ್ಯ ಪದಾಧಿಕಾರಿಗಳು ಇದ್ದರು.