ದೇಶದಲ್ಲಿ ಸರ್ವಾಧಿಕಾರ ಎಲ್ಲ ಮಿತಿಗಳನ್ನು ಮೀರಿದೆ: ಇಡಿ ವಿರುದ್ಧ ಸುನಿತಾ ಕೇಜ್ರಿವಾಲ್ ಆಕ್ರೋಶ

Ravi Talawar
ದೇಶದಲ್ಲಿ ಸರ್ವಾಧಿಕಾರ ಎಲ್ಲ ಮಿತಿಗಳನ್ನು ಮೀರಿದೆ: ಇಡಿ ವಿರುದ್ಧ ಸುನಿತಾ ಕೇಜ್ರಿವಾಲ್ ಆಕ್ರೋಶ
WhatsApp Group Join Now
Telegram Group Join Now

ನವದೆಹಲಿ: “ಅರವಿಂದ್ ಕೇಜ್ರಿವಾಲ್  ಅವರ ಜಾಮೀನು ಆದೇಶವನ್ನು ಅಪ್‌ಲೋಡ್ ಮಾಡುವ ಮೊದಲೇ ಇಡಿ (ED) ಹೈಕೋರ್ಟ್‌ಗೆ ತಲುಪಿದೆ. ಅವರು ಭಯೋತ್ಪಾದಕನಂತೆ ವರ್ತಿಸುತ್ತಿದ್ದಾರೆ. ದೇಶದಲ್ಲಿ ಸರ್ವಾಧಿಕಾರ ಎಲ್ಲ ಮಿತಿಗಳನ್ನು ಮೀರಿದೆ. ಕೇಂದ್ರ ಸರ್ಕಾರ ಸರ್ವಾಧಿಕಾರದಿಂದ ವರ್ತಿಸುತ್ತಿದೆ” ಎಂದು ಸುನೀತಾ ಕೇಜ್ರಿವಾಲ್ ಆರೋಪಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ವಿಚಾರಣಾ ನ್ಯಾಯಾಲಯ ಗುರುವಾರ ಜಾಮೀನು ನೀಡಿತ್ತು. ಆದರೆ, ಆ ಆದೇಶಕ್ಕೆ ತಡೆ ಕೋರಿ ಇಡಿ ಇಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅದರಂತೆ ದೆಹಲಿ ಹೈಕೋರ್ಟ್ ಕೇಜ್ರಿವಾಲ್ ಜಾಮೀನಿಗೆ ತಾತ್ಕಾಲಿಕ ತಡೆ ನೀಡಿತ್ತು.

ಕೋರ್ಟ್ ಜಾಮೀನು ಆದೇಶವನ್ನು ಅಧಿಕೃತವಾಗಿ ಅಪ್‌ಲೋಡ್ ಮಾಡುವ ಮುನ್ನವೇ ಜಾರಿ ನಿರ್ದೇಶನಾಲಯ (ಇಡಿ) ಹೈಕೋರ್ಟ್‌ನ ಮೊರೆ ಹೋಗಿರುವುದಕ್ಕೆ ಸುನಿತಾ ಕೇಜ್ರಿವಾಲ್ ಇಡಿ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಈಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಪತಿಗೆ ನೀಡಲಾದ ಜಾಮೀನನ್ನು ಪ್ರಶ್ನಿಸುವ ಜಾರಿ ನಿರ್ದೇಶನಾಲಯದ (ಇಡಿ) ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ದಕ್ಷಿಣ ದೆಹಲಿಯ ಭೋಗಲ್‌ನಲ್ಲಿ ದೆಹಲಿ ಜಲ ಸಚಿವೆ ಅತಿಶಿ ಅವರು ಹರಿಯಾಣದಿಂದ ಹೆಚ್ಚಿನ ನೀರು ಪಡೆಯಲು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ ಸುನಿತಾ ಕೇಜ್ರಿವಾಲ್, ದೇಶದಲ್ಲಿ ಸರ್ವಾಧಿಕಾರವು ಎಲ್ಲಾ ಮಿತಿಗಳನ್ನು ಮೀರಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು “ಮೋಸ್ಟ್ ವಾಂಟೆಡ್ ಭಯೋತ್ಪಾದಕ” ಎಂದು ಪರಿಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
WhatsApp Group Join Now
Telegram Group Join Now
Share This Article