ವೇಗದ ಜೀವನಕ್ಕೆ ಯೋಗವೇ ವರದಾನ: ಕೆ. ಬಿ. ಕುಂಬಾಳಿ

Ravi Talawar
ವೇಗದ ಜೀವನಕ್ಕೆ ಯೋಗವೇ ವರದಾನ: ಕೆ. ಬಿ. ಕುಂಬಾಳಿ
WhatsApp Group Join Now
Telegram Group Join Now

ರನ್ನ ಬೆಳಗಲಿ: ಜೂ.೨೦., ಮುಧೋಳ ತಾಲೂಕಿನ ರನ್ನಬೆಳಗಲಿಯ ಶ್ರೀ ಗುರು ಮಹಾಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆಗಳ ಆಶ್ರಯದಲ್ಲಿ ಶ್ರೀ ಗುರು ಮಹಾಲಿಂಗೇಶ್ವರ ಕಲ್ಯಾಣ
ಮಂಟಪದಲ್ಲಿ &quoಣ;ಯೋಗಾ ಸಪ್ತಹ ಕಾರ್ಯಕ್ರಮವು&quoಣ; ನಡೆಯುತ್ತಿದೆ.

ಈ ಕಾರ್ಯಕ್ರಮದ ಆಯೋಜಕರಾದ ಕೆ.ಬಿ. ಕುಂಬಾಳಿ ದೈಹಿಕ ಶಿಕ್ಷಕರು ವೇಗದ ಜೀವನಕ್ಕೆ ಯೋಗವೇ ವರದನವಾಗಿದೆ ನಮ್ಮ ಶಾಲೆಯ ವಿದ್ಯಾರ್ಥಿಯಾದ ರಾಘವೇಂದ್ರ ನೀಲಣ್ಣವರ ಪ್ರಸ್ತುತ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರಿನ ಯೋಗ ವಿಭಾಗದ ಎಮ್.ಎಸ್.ಸಿ ವಿದ್ಯಾರ್ಥಿಯಾಗಿ ಕಲಿಕೆಯ ಜೊತೆಗೆ ನಿರಂತರ ಉಚಿತ ಯೋಗ ತರಬೇತಿ ನೀಡುತ್ತಿರುವುದು ಸ್ವಾಗತರವಾಗಿದೆ.ಅವರು ಹೇಳಿಕೊಡುವ ಆಸನ, ಪ್ರಾಣಾಯಾಮ, ಧ್ಯಾನವನ್ನು ಮೈಗೂಡಿಸಿಕೊಂಡರೆ ವಿದ್ಯಾರ್ಥಿ ಜೀವನ ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಯೋಗ ತರಬೇತಿದಾರರಾದ ರಾಘವೇಂದ್ರ ನೀಲಣ್ಣವರ ಅವರು ಯೋಗವು ಆಳವಾದ ಅಧ್ಯಯನವಾಗಿದೆ. ಅದರಲ್ಲಿ ಬರುವ ರಾಜಯೋಗದ ಅಷ್ಟಾಂಗ ಮಾರ್ಗವನ್ನು ಅರಿಯೋದು ಪ್ರತಿ ಯೋಗ ಕಲಿಕಾರ್ಥಿಯ ಮೊದಲ ಕರ್ತವ್ಯವಾಗಿದೆ ಅವುಗಳೇ ಯಮ (ಸಮಾಜ ಜೊತೆಗೆ ಇರುವ
ಸಂಬಂಧಗಳು), ನಿಯಮ (ವೈಯಕ್ತಿಕ ಜೀವನ ಮೌಲ್ಯಗಳು), ಆಸನ(ಯೋಗ ಸ್ಥಾನಗಳು/ಯೋಗದ ಭಂಗಿಗಳು), ಪ್ರಾಣಾಯಾಮ (ಉಸಿರಾಟದ ಮೇಲೆ ಹಿಡಿತ ಸಾಧಿಸುವ ಕ್ರಮಗಳು), ಪ್ರತ್ಯಾಹಾರ (ಇಂದ್ರೀಗಳ ಹಿಂತೆ ತೆಗೆದುಕೊಳ್ಳುವಿಕೆ/ಇಂದ್ರಿಗಳ ನಿಗ್ರಹ), ಧಾರಣ
(ವಸ್ತುವಿನ ಮೇಲೆ ಏಕಾಗರ ಭಾವ/ನಿಶ್ಚಲತೆ ಹೊಂದುವದು), ಧ್ಯಾನ (ಅಂತರ್ಮುಖ ನೋಟ), ಸಮಾಧಿ (ಪರಮೋಚ್ಚ ಗುರಿ ಮೋಕ್ಷ) ಈ ವಿಚಾರಗಳನ್ನು ಪ್ರತಿ ವಿದ್ಯಾರ್ಥಿಗಳು ಅರಿಯಬೇಕಾಗಿದೆ.

ತಾವು ಕಲಿತ ಯೋಗ ಜ್ಞಾನವನ್ನು ನಿರಂತರವಾಗಿ ಮುಂದು ವರಸಿಕೊಂಡು ಬಂದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಯಾವ ನ್ಯೂನ್ಯತೆಗಳಿಲ್ಲದೆ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಶಿಕ್ಷಕರಾದ ಎ.ಎಮ್.ಕಂಬಾರ, ಎಸ್.ಬಿ.ರಡರಟ್ಟಿ, ಎಸ್.ಎಚ್. ಪುರಾಣಿಕ, ಕೆ.. ಧಡೂತಿ ಹಾಗೂ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article