ನೇಸರಗಿ. ಚನ್ನಮ್ಮನ ಕಿತ್ತೂರ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಶಿಕ್ಷಣ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡಲಾಗುವದೆಂದು ಚನ್ನಮ್ಮನ ಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ಮಂಗಳವಾರದಂದು ಇಲ್ಲಿನ ಕುವೆಂಪು ಮಾದರಿ ಪ್ರಾಥಮಿಕ ಶಾಲೆಯಲ್ಲಿ 4059 ಲೋಕೋಪಯೋಗಿ ಇಲಾಖೆಯ ಕಟ್ಟಡ ನಿರ್ಮಾಣ ಅನುದಾನದಲ್ಲಿ ರೂ 36 ಲಕ್ಷ ಅನುದಾನದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಶಾಲೆಯೂ ಒಂದು ದೇವಸ್ಥಾನ ಇದ್ದ ಹಾಗೆ ಅವುಗಳ ಅಭಿವೃದ್ಧಿಗೆ ನನ್ನ ಪ್ರಥಮ ಆದ್ಯತೆ ಇದ್ದು, ಈ ಭಾಗದ ಶಾಲೆಗಳ ಅಭಿವೃದ್ಧಿ ಹಂತ ಹಂತವಾಗಿ ಮಾಡಲಾಗುವದು ಮತ್ತು ಮೂಲಭೂತ ಸೌಕರ್ಯಗಳ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವದೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಸಚಿನ್ ಪಾಟೀಲ, ನೇಸರಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನಿಂಗಪ್ಪ ಅರಿಕೇರಿ, ಆಡಿವಪ್ಪ ಮಾಳಣ್ಣವರ,ಮಲ್ಲಿಕಾರ್ಜುನ ಕಲ್ಲೋಳಿ, ಮಾಜಿ ಎಪಿಎಂಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ, ಬಾಳಪ್ಪ ಮಾಳಗಿ,ನಿಂಗಪ್ಪ ತಳವಾರ,ಮಂಜುನಾಥ ಹುಲಮನಿ, ಎ ಇ ಇ ಬಿ ಕೆ. ಹಲಗಿ, ಸುರೇಶ ಅಗಸಿಮನಿ, ಕಾಶಿಮ ಜಮಾದರ ,ಚನಗೌಡ ಪಾಟೀಲ,ಬಸವರಾಜ ಚಿಕ್ಕನಗೌಡರ, ಬಸವರಾಜ ಕಾರಜೋಳ,ನಜೀರ ತಹಶೀಲ್ದಾರ,ಸುರೇಶ ಖಂಡ್ರಿ,ಸುಜಾತ ಪಾಟೀಲ, ಶಾಲಾ ಮುಕ್ಯೋಪಾಧ್ಯಾಯ ಸುರೇಶ ಬೆಳಗಾವಿ,ಬಸವರಾಜ ಹುದ್ದಾರ, ಬಾಬು ಭಗವಾನ, ಮುಖಬುಲ್ಲ ಭಾಗವಾನ, ಬಾಳಪ್ಪ ಕುಂಟಗಿ,ಶಿವನಪ್ಪ ಮದೇನ್ನವರ,ಗುತ್ತಿಗೆದಾರ ಸಿದ್ದಯ್ಯ ಹಿರೇಮಠ ಸೇರಿದಂತೆ ನೇಸರಗಿ ಸುತ್ತಮುತ್ತಲಿನ ಗ್ರಾಮಸ್ಥರು, ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.