ಮಹಿಳೆಯರ ಸಬಲೀಕರಣಕ್ಕೆ ಯೋಗವೇ ಪುಷ್ಟೀಕರಣ: ಡಾ. ಪಿ. ಎಮ್. ಜಹಗೀರದಾರ

Ravi Talawar
ಮಹಿಳೆಯರ ಸಬಲೀಕರಣಕ್ಕೆ ಯೋಗವೇ ಪುಷ್ಟೀಕರಣ: ಡಾ. ಪಿ. ಎಮ್. ಜಹಗೀರದಾರ
WhatsApp Group Join Now
Telegram Group Join Now

ಮುಧೋಳ: ಜೂ.19: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕದ ಕವಿ ರನ್ನ ಸರಕಾರಿ ವಸತಿ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಬಾಗಲಕೋಟೆ. ತಾಲೂಕ ಆಯುಷ್, ಸಮಾಜ ಕಲ್ಯಾಣ ಇಲಾಖೆ ಮುಧೋಳ ಹಾಗೂ ವಿವಿಧ ಇಲಾಖೆಯ ಸಂಯೋಗದಲ್ಲಿ ೧೦ನೇ
ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಪೂರ್ವಭಾವಿಯಾಗಿ ಯೋಗೋತ್ಸವ-೨೦೨೪ ಜೂನ್ ೧೦ ರಿಂದ ಜೂನ್ ೨೦ ರವರೆಗೆ ಸರಕಾರಿ ವಿವಿಧ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ಹಾಗೂ ಆಯುಷ್ ಪರಿಚಯ ಕಾರ್ಯಕ್ರಮವು ಜರುಗಿತು.

ಸರಕಾರಿ ಆಯುರ್ವೇದ ಚಿಕಿತ್ಸಾಲಯ ವಜ್ರಮಟ್ಟಿಯ ಹಿರಿಯ ವೈದ್ಯಾಧಿಕಾರಿಗಳಾದ ಡಾ|| ಪಿ.ಎಮ್ . ಜಹಗೀರದಾರ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರ ಸಬಲೀಕರಣಕ್ಕೆ ಯೋಗವೇ ಪುಷ್ಟೀಕರಣ. ಪ್ರಸ್ತುತ ದಿನಗಳ ವೇಗದ ಜೀವನದ ಬದುಕಿನಲ್ಲಿ ಮಹಿಳೆ ಅನೇಕ ದೈಹಿಕ ಮಾನಸಿಕ ತೊಂದರೆಗಳಿಗೆ ತುತ್ತಾಗುತ್ತಿದ್ದಾಳೆ. ಅವಳ ಸದೃಢತೆಗಾಗಿ ಇಂದು ಯೋಗವನ್ನ ಮೈಗೂಡಿಸಿಕೊಳ್ಳಬೇಕಾಗಿದೆ ಆದರಿಂದಲೇ ೨೦೨೪ರ ಯೋಗದ ದೇಹ ವಾಕ್ಯವು ಮಹಿಳೆಯರ ಸಬಲೀಕರಣಕ್ಕಾಗಿ ಯೋಗವಾಗಿದೆ. ಅಂದರೆ ಕುಟುಂಬ ಮತ್ತು ಸಮಾಜದ ಕಣ್ಣು ಮಹಿಳೆಯಾಗಿದ್ದಾಳೆ. ಮಹಿಳೆ ಸದೃಢವಾದ ಆರೋಗ್ಯವನ್ನು ಹೊಂದಿದ್ದರೆ ಸದೃಢವಾಗಿ ಸಮಾಜವನ್ನು ಮುನ್ನಡೆಸುವ ಒಳ್ಳೆಯ ಗ್ರಹಣಿಯಾಗಲು ಸಾಧ್ಯ ಎಂದು ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರಿನ ಯೋಗ ವಿಭಾಗದ ಎಂ.ಎಸ್.ಸಿ ವಿದ್ಯಾರ್ಥಿಯಾದ ರಾಘವೇಂದ್ರ ನೀಲಣ್ಣವರ ಯೋಗ ತರಬೇತಿದಾರರು ರನ್ನ ಬೆಳಗಲಿ. ರವರು ವಿದ್ಯಾರ್ಥಿ ಸಮೂಹಕ್ಕೆ ಮುದ್ರೆಗಳ ಮಾಹಿತಿಯನ್ನು ನೀಡಿ ಅದರ ಪ್ರಯೋಜನ ಬಗ್ಗೆ ತಿಳಿಸಿದರು. ಪ್ರತಿನಿತ್ಯ ಪ್ರಾಣಾಯಾಮಗಳನ್ನು ಮಾಡುವುದರಿಂದ ನಮ್ಮ ಆಯುಷ್ಯ ವೃದ್ಧಿಯಾಗುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ಹೊಂದಲು ಸಾಧ್ಯವಾಗುತ್ತದೆ. ತೋರಿಕೆಗಾಗಿ ಯೋಗ ಮಾಡಬೇಡಿ ನಿಮಗಾಗಿ ನಿಮ್ಮ ವಯಕ್ತಿಕ ಅಭಿವೃದ್ಧಿಗಾಗಿ ಯೋಗವನ್ನು ಬಿಡದೆ ಮಾಡಿ, ಜೀವನದ ಉತ್ತಮ ಮೌಲ್ಯಗಳ ಜೊತೆಗೆ ಸದೃಢ ಶರೀರವನ್ನು ಹೊಂದಲು ಯೋಗವೇ ಸರಳ ಮಾರ್ಗ ಎಂದು ಹೇಳುವುದರ ಜೊತೆಗೆ ಆಸನ, ಪ್ರಾಣಾಯಾಮ,ಮುದ್ರೆಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಟ್ಟರು.

ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕುಳಲಿ ಗ್ರಾಮದ ವೈದ್ಯಾಧಿಕಾರಿಗಳಾದ ಡಾ|| ಆರ್.ಬಿ.ಅನಸಾರಿ ರವರು ವಿದ್ಯಾರ್ಥಿಗಳಿಗೆ ಆಡುಭಾಷೆಯಲ್ಲಿ ಆಯುಷ್ ಇಲಾಖೆಯ ಪರಿಚಯ ಮಾಡಿಕೊಳ್ಳುವುದರ ಜೊತೆಗೆ ಆಯುಷ್ ಎಂಬ ಪದವು ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ
ಹಾಗೂ ಹೋಮಿಯೋಪತಿಗಳನ್ನು ಒಳಗೊಂಡ ಇಲಾಖೆಯೇ ಆಯುಷ್ ಇಲಾಖೆ. ಭಾರತೀಯ ಅತ್ಯುತ್ತಮ ಜೀವನ ಶೈಲಿಯನ್ನು ಕಾಪಾಡಿಕೊಂಡು ಬರಲು ಇರುವ ಪುರಾತನ ಕಾಲದ ವೈದ್ಯಕೀಯ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಇಲಾಖೆಯೇ ಆಯುಷ್ ಇಲಾಖೆ. ವಿದ್ಯಾರ್ಥಿಗಳು
ತಮ್ಮ ಪಾಲಕರ ಜೊತೆಗೆ ನಮ್ಮ ಆಯುಷ್ ಕೇಂದ್ರಕ್ಕೆ ಬೇಟಿ ಕೊಟ್ಟರೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು .

ಡಾ|| ಕಮಲಾಕ್ಷಿ ತಿಳಿಗೂಳ ರವರು ವಿದ್ಯಾರ್ಥಿಗಳಿಗೆ ಸಾಮೂಹಿಕ ಪ್ರಾರ್ಥನೆ ಮಾಡಿಸುವ ಜೊತೆಗೆ ಧ್ಯಾನದ ಮಹತ್ವ ತಿಳಿಸಿ ಧ್ಯಾನದ ಕಲಿಕೆಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್.ಆರ್.ಡಬರಿ ಪ್ರಾಂಶುಪಾಲರು ವಯಿಸಿದರು. ಮುಧೋಳ ತಾಲೂಕ ಆಯುಷ್ ಘಟಕದ ವೈದ್ಯಾಧಿಕಾರಿಗಳಾದ ಡಾ|| ಶೋಭಾ ಭಿಕ್ಷಾವತಿಮಠ, ಶಿಕ್ಷಕ ವೃಂದದವರಾದ ದಾವಲ ತೇರದಾಳ, ಎಸ್.ಬಿ.ಬ್ರದರ, ಆರ್ .ಕೆ.ಹುಗ್ಗಿ, ಆರ್.ಎಚ್.ಬರಿಗಿ, ಡಿ.ಎಸ್. ಮ್ಯಾಗಿನಕೇರಿ, ಪಿ.ಎಸ್
ಹಿರೇಮಠ, ಎಸ್.ಜಿ.ಲಿಂಗದಳಿ, ದೈಹಿಕ ಶಿಕ್ಷಕಿಯಾದ ಎಸ್.ಎಸ್ ಬಡಿಗೇರ,ನಿಲಯ ಪಾಲಕರಾದ ಅಡಿವೇಪ್ಪ ಕೆಳಮನಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಎಸ್. ಎಮ್. ಪಾಟೀಲ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಶಿಕ್ಷಕರ ವೃಂದ ಮತ್ತು ವಿದ್ಯಾರ್ಥಿ,ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article