ರಫಾ ಮೇಲೆ ಇಸ್ರೇಲ್​ ಬಾಂಬ್ ದಾಳಿ : ಇಸ್ರೇಲಿ ಒತ್ತೆಯಾಳುಗಳು ಸಾವು

Ravi Talawar
ರಫಾ ಮೇಲೆ ಇಸ್ರೇಲ್​ ಬಾಂಬ್ ದಾಳಿ : ಇಸ್ರೇಲಿ ಒತ್ತೆಯಾಳುಗಳು ಸಾವು
WhatsApp Group Join Now
Telegram Group Join Now

ಗಾಜಾ: ದಕ್ಷಿಣ ಗಾಜಾ ಪಟ್ಟಿಯ ರಫಾ ನಗರದ ಮೇಲೆ ಇಸ್ರೇಲ್​ ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಇಸ್ರೇಲ್​ನ ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್‌ ತಿಳಿಸಿದೆ. ಕೆಲವು ದಿನಗಳ ಹಿಂದೆ ನಡೆದ ಏರ್‌ ಸ್ಟ್ರೈಕ್‌ನಲ್ಲಿ ಇಬ್ಬರು ಒತ್ತೆಯಾಳುಗಳ ಹತ್ಯೆಯಾಗಿದೆ ಎಂಬುವುದಾಗಿ ಹಮಾಸ್​ನ ಸಶಸ್ತ್ರ ವಿಭಾಗ ಅಲ್-ಕಸ್ಸಾಮ್ ಬ್ರಿಗೇಡ್ಸ್ ಟೆಲಿಗ್ರಾಮ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.

ಜೂನ್ 8ರಂದು ಅಲ್-ಕಸ್ಸಾಮ್ ಬ್ರಿಗೇಡ್ಸ್ ಸೆಂಟ್ರಲ್​ ಗಾಜಾ ಪಟ್ಟಿಯಲ್ಲಿ ನಾಲ್ವರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಕಾರ್ಯಾಚರಣೆಯ ಸಮಯದಲ್ಲಿ ಇಸ್ರೇಲ್​ ಸೇನೆಯು ಹಲವಾರು ಒತ್ತೆಯಾಳುಗಳನ್ನು ಹತ್ಯೆ ಮಾಡಿದೆ ಎಂದು ಹಮಾಸ್‌ ಹೇಳಿದೆ. ಈ ಬಗ್ಗೆ ಇಸ್ರೇಲ್ ಸೇನೆಯು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 ಪ್ಯಾಲೇಸ್ಟೀನ್​-ಇಸ್ರೇಲ್​ ಯುದ್ಧದಲ್ಲಿ ಶುಕ್ರವಾರದ ಹೊತ್ತಿಗೆ ಪ್ಯಾಲೇಸ್ಟೀನಿಯನ್​ಗಳ ಒಟ್ಟು ಸಾವಿನ ಸಂಖ್ಯೆ 37,266ಕ್ಕೆ ಏರಿದೆ. ಅಂದಾಜು 85,102 ಜನರು ಗಾಯಗೊಂಡಿದ್ದಾರೆ ಎಂದು ಹಮಾಸ್​ನ ಆರೋಗ್ಯ ಅಧಿಕಾರಿಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮತ್ತೊಂದೆಡೆ, ಗಾಜಾ ಪಟ್ಟಿಯಾದ್ಯಂತ ತನ್ನ ಕಾರ್ಯಾಚರಣೆ ಮುಂದುವರೆದಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ಹೇಳಿಕೆ ಬಿಡುಗಡೆ ಮಾಡಿದೆ.

ರಫಾದಲ್ಲಿ ಗುಪ್ತಚರ ಮಾಹಿತಿ ಆಧಾರಿತ ಕಾರ್ಯಾಚರಣೆಗಳನ್ನು ಇಸ್ರೇಲ್​ ಪಡೆಗಳು ಮುಂದುವರೆಸುತ್ತಿವೆ. ಹಲವಾರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿದೆ. ಕಳೆದ ದಿನಗಳಿಂದ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಭೂಗತ ಸುರಂಗದ ಶಾಫ್ಟ್‌ಗಳನ್ನು ಪತ್ತೆ ಹಚ್ಚಲಾಗಿದೆ. ಸೆಂಟ್ರಲ್​ ಗಾಜಾ ಪಟ್ಟಿಯಲ್ಲೂ ಸೇನಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.

WhatsApp Group Join Now
Telegram Group Join Now
Share This Article