ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ವತಿಯಿಂದ ಜಿಲ್ಲಾಮಟ್ಟದ ಮಹಿಳಾ ಸಮಾವೇಶ

Ravi Talawar
ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ವತಿಯಿಂದ ಜಿಲ್ಲಾಮಟ್ಟದ ಮಹಿಳಾ ಸಮಾವೇಶ
WhatsApp Group Join Now
Telegram Group Join Now

ಸಂಕೇಶ್ವರ : ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ವತಿಯಿಂದ ಜಿಲ್ಲಾಮಟ್ಟದ ಮಹಿಳಾ ಸಮಾವೇಶವು ಬರುವ ರವಿವಾರಂದು ಮುಂಜಾನೆ 10:30ಕ್ಕೆ ಹುಕ್ಕೇರಿ ಪಟ್ಟಣದ ಎಸ್.ಎಸ್ ಕನ್ವೇಷನಲ್ ಹಾಲ್ ನಲ್ಲಿ ಜರುಗಲಿದೆ ಎಂದು ಹುಕ್ಕೇರಿ ತಾಲೂಕಾ ಕೋಳಿ ಬೆಸ್ತ ಸಮಾಜದ ಅಧ್ಯಕ್ಷ ಕಿಶೋರ ಶಿರಗೆ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ಜಿಲ್ಲಾ ಅಧ್ಯಕ್ಷ  ದಿಲೀಪ್ ಕುರಂದವಾಡೆ ಇವರ ನೇತೃತ್ವದಲ್ಲಿ ಜರುಗಲಿರುವ ಸಮಾವೇಶದಲ್ಲಿ ನೂತನವಾಗಿ ಆಯ್ಕೆಯಾಗಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ರವರಿಗೆ ಅಭಿನಂದನೆ ಸಲ್ಲಿಸಲಾಗುವುದು ಆದ ಕಾರಣ ಹುಕ್ಕೇರಿ ತಾಲೂಕಿನ ಕೋಳಿ ಬೆಸ್ತ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೋಳಿ ಬೆಸ್ತ ಸಮಾಜದ ಜಿಲ್ಲಾ ಸಂಘದ ಸದಸ್ಯರಾದ ಬಸವರಾಜ್ ಕುರಂದವಾಡೆ ಹಾಗೂ ಸಹ ಕಾರ್ಯದರ್ಶಿಯಾದ ಭರಮಣ್ಣ ಅಮ್ಮನಭಾವಿ,ಮಹಾದೇವ್ ಗೋಣಿ, ರಂಗನಾಥ್ ಭಾರಕೆರ್, ಶಿವರಾಜ್ ಕೋಳಿ ಹಾಜರಿದ್ದರು.

WhatsApp Group Join Now
Telegram Group Join Now
Share This Article