ಕುವೈತ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ: ಭಾರತೀಯರ ಪಾರ್ಥಿವ ಶರೀರಗಳನ್ನು ಹೊತ್ತ ಐಎಎಫ್

Ravi Talawar
ಕುವೈತ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತ:  ಭಾರತೀಯರ ಪಾರ್ಥಿವ ಶರೀರಗಳನ್ನು ಹೊತ್ತ ಐಎಎಫ್
WhatsApp Group Join Now
Telegram Group Join Now

ಕೊಚ್ಚಿ (ಕೇರಳ): ಎರಡು ದಿನಗಳ ಹಿಂದೆ ಕುವೈತ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟ ಭಾರತೀಯರ ಪಾರ್ಥಿವ ಶರೀರಗಳನ್ನು ಹೊತ್ತ ಭಾರತೀಯ ವಾಯುಪಡೆಯ (ಐಎಎಫ್) ವಿಮಾನವು ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

IAF C30J ವಿಮಾನವು ಭಾರತೀಯರ ಮೃತದೇಹಗಳನ್ನು ಹೊತ್ತು ತಂದಿದೆ. 31 ಜನರ ಮೃತದೇಹಗಳನ್ನು ಕೊಚ್ಚಿನ್​ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು. 31 ಮೃತದೇಹಗಳಲ್ಲಿ ಕೇರಳದ- 23 ಜನರ ಮೃತದೇಹಗಳು, ತಮಿಳುನಾಡಿನ – 7 ಜನರ ಮೃತದೇಹಗಳು ಮತ್ತು ಕರ್ನಾಟಕದ ಮೂಲಕ ಒಬ್ಬರ ಮೃತದೇಹವೂ ಇದರಲ್ಲಿ ಸೇರಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಮೃತದೇಹಗಳನ್ನು ಪಡೆಯಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಆರೋಗ್ಯ ಸಚಿವೆ ವೀಣಾ ಜಾರ್ಜ್, ಕೈಗಾರಿಕೆ ಸಚಿವ ಪಿ. ರಾಜೀವ್, ಕಂದಾಯ ಸಚಿವ ಕೆ. ರಾಜನ್ ಮತ್ತು ಇತರ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

ಜೂನ್ 12ರಂದು ಕುವೈತ್​ನ ಅಲ್-ಮಂಗಾಫ್ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 49 ಜನರು ಸಾವನ್ನಪ್ಪಿದ್ದಾರೆ. ಮತ್ತು ಅವರಲ್ಲಿ ಹೆಚ್ಚಿನವರು ಭಾರತೀಯರು ಎಂದು ಅಧಿಕಾರಿಗಳು ಹೇಳಿದ್ದಾರೆ. ಉಳಿದವರು ಪಾಕಿಸ್ತಾನಿ, ಫಿಲಿಪಿನೋ, ಈಜಿಪ್ಟ್ ಮತ್ತು ನೇಪಾಳಿ ಪ್ರಜೆಗಳು. ದಕ್ಷಿಣ ಕುವೈತ್‌ನ ಮಂಗಾಫ್ ಪ್ರದೇಶದಲ್ಲಿ ಸುಮಾರು 195 ವಲಸೆ ಕಾರ್ಮಿಕರು ನೆಲೆಸಿದ್ದಾರೆ.

WhatsApp Group Join Now
Telegram Group Join Now
Share This Article