ಭಾರತೀಯ ಸೇನೆ ತಲುಪಿದ ನಾಗಾಸ್ತ್ರ : ಪ್ರಬಲ ಡ್ರೋನ್ ಅಸ್ತ್ರ

Ravi Talawar
ಭಾರತೀಯ ಸೇನೆ ತಲುಪಿದ ನಾಗಾಸ್ತ್ರ : ಪ್ರಬಲ ಡ್ರೋನ್ ಅಸ್ತ್ರ
WhatsApp Group Join Now
Telegram Group Join Now

ನವದೆಹಲಿ, ಜೂನ್ 14: ಸಂಪೂರ್ಣ ದೇಶೀಯವಾಗಿ ತಯಾರಿಸಲಾಗಿರುವ ನಾಗಾಸ್ತ್ರ (Nagastra-1) ಎಂಬ ಪ್ರಬಲ ಮಿಲಿಟರಿ ಡ್ರೋನ್​ಗಳು ಭಾರತೀಯ ಸೇನೆಗೆ ಸರಬರಾಜಾಗಿವೆ.

ನಾನಾಸ್ತ್ರ-1 ನ ಮೊದಲ ಬ್ಯಾಚ್ ಡ್ರೋನ್​ಗಳು ಸೇನೆಗೆ ಸಿಕ್ಕಿವೆ. ಯಾವುದೇ ರಿಸ್ಕ್ ಇಲ್ಲದೇ ಉಗ್ರರ ನೆಲೆಗಳು, ಸ್ಥಳಗಳ, ವ್ಯಕ್ತಿಗಳ ಮೇಲೆ ಕ್ಷಿಪ್ರವಾಗಿ ಮತ್ತು ನಿಖರವಾಗಿ ದಾಳಿ ಮಾಡಲು ಈ ಡ್ರೋನ್​ಗಳು ಹೇಳಿ ಮಾಡಿಸಿವೆ.

ಈ ಶ್ರೇಣಿಯ ಮತ್ತು ಸಾಮರ್ಥ್ಯದ ಡ್ರೋನ್ ಅನ್ನು ಭಾರತದಲ್ಲಿ ತಯಾರಿಸಲಾಗಿರುವುದು ಇದೇ ಮೊದಲು. ಮಹಾರಾಷ್ಟ್ರದ ನಾಗಪುರದಲ್ಲಿರುವ ಸೋಲಾರ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ಎಕನಾಮಿಕ್ ಎಕ್ಸ್​ಪ್ಲೋಸಿವ್ಸ್ ಲಿ  ಈ ಹೈಟೆಕ್ ಡ್ರೋನ್ ಅನ್ನು ತಯಾರಿಸಿದೆ.

ನಾಲ್ಕು ವರ್ಷಗಳ ಹಿಂದೆಯೇ ಈಲ್ ಸಂಸ್ಥೆ ತನ್ನ ಈ ಡ್ರೋನ್​ಗಳ ಡೆಮೋವನ್ನು ಸೇನೆಗೆ ತೋರಿಸಿತ್ತು. 480 ಡ್ರೋನ್​ಗಳಿಗೆ ಆರ್ಡರ್ ಸಿಕ್ಕಿತ್ತು. ಈಗ ಮೊದಲ ಬ್ಯಾಚ್​ನಲ್ಲಿ 120 ಡ್ರೋನ್​ಗಳು ತಯಾರಾಗಿ ಸೇನೆಗೆ ಕಳುಹಿಸಲಾಗಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಈ ಡ್ರೋನ್​ಗಳು ಮುಕ್ಕಾಲು ಪಾಲು ದೇಶೀಯವಾಗಿ ನಿರ್ಮಾಣವಾಗಿವೆ. ಕೆಲ ಬಿಡಿಭಾಗಗಳನ್ನಷ್ಟೇ ಹೊರಗಡೆಯಿಂದ ತರಿಸಲಾಗಿದೆ. ಶೇ. 74ರಷ್ಟು ಭಾಗವನ್ನು ದೇಶೀಯವಾಗಿ ನಿರ್ಮಿಸಲಾಗಿದೆ.

WhatsApp Group Join Now
Telegram Group Join Now
Share This Article