ಡಿಎಚ್‍ಓ, ಎಸಿ ಅವರಿಂದ ಮುಮ್ಮಿಗಟ್ಟಿ ಗ್ರಾಮ ಭೇಟಿ; ಡೆಂಗ್ಯೂ ಪ್ರಕರಣಗಳ ಪರಿಶೀಲ

Ravi Talawar
ಡಿಎಚ್‍ಓ, ಎಸಿ ಅವರಿಂದ ಮುಮ್ಮಿಗಟ್ಟಿ ಗ್ರಾಮ ಭೇಟಿ; ಡೆಂಗ್ಯೂ ಪ್ರಕರಣಗಳ ಪರಿಶೀಲ
WhatsApp Group Join Now
Telegram Group Join Now
ಧಾರವಾಡ ಜೂನ್.13: ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಡೆಂಗ್ಯೂ ಶಂಕಿತ ಬಾಲಕಿ ಸಾವು ಪ್ರಕರಣ ಹಾಗೂ ಡೆಂಗ್ಯೂ ಶಂಕಿತ 7 ಪ್ರಕರಣಗಳ ಪತ್ತೆಯಿಂದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ನಿರ್ದೇಶನದ ಮೇರೆಗೆ ಇಂದು ಬೆಳಿಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮತ್ತು ಉಪವಿಭಾಗಾಧಿಕಾರಿ ಶಾಲಂ ಹುಸೇನ ಅವರು ಮುಮ್ಮಿಗಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
  ಡಿಎಚ್‍ಓ ಡಾ. ಶಶಿ ಪಾಟೀಲ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಕೆ.ಎನ್.ತನುಜಾ ಅವರ ನೇತೃತ್ವದ ಆಶಾ ಕಾರ್ಯಕರ್ತೆಯರ ತಂಡ ಗ್ರಾಮದಲ್ಲಿ ಹೆಚ್ಚು ಜ್ವರ ಪೀಡತರ ಓಣಿಗಳಿಗೆ ಭೇಟಿ ನೀಡಿ, ಮನೆಯಲ್ಲಿನ ಕುಟುಂಬದವರ ಅಭಿಪ್ರಾಯ ಸಂಗ್ರಹಿಸಿತು.
  ಸುಮಾರು 21 ಜನ ಆಶಾ ಕಾರ್ಯಕರ್ತೆರು ಗ್ರಾಮದ ಪ್ರತಿ ಮನೆಗೆ ಹೋಗಿ ಆರೋಗ್ಯ ಸಮೀಕ್ಷೆ ಮಾಡಿ, ಡೆಂಗ್ಯೂ, ಚಿಕನ್‍ಗೂನ್ಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
 ಈ ಸಂದರ್ಭದಲ್ಲಿ ಮುಮ್ಮಿಗಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷೆ ಸುವರ್ಣಾ ಕೊಟ್ರಿ, ಉಪಾಧ್ಯಕ್ಷ ವಿಠ್ಠಲ ಬಟ್ಟಂಗಿ, ಗ್ರಾಮಪಂಚಾಯತ ಅಭಿವೃದ್ಧಿ ಅಧಿಕಾರಿ ಪರಶುರಾಮ ಕವಲೂರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article