ಬಳ್ಳಾರಿ.ಜೂ.13: ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಸ್ಥಾನಕ್ಕೆ ಜೂ.21ರಂದು ಚುನಾವಣೆ ಜರುಗಲಿದೆ.ಎಂದು ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ನಡೆಯಬೇಕಿದ್ದ ಮೇಯರ್ ಚುನಾವಣೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು.
ಈ ಸಂದರ್ಭದಲ್ಲಿ ಪಕ್ಷದ ಘಟಾನುಘಟಿಗಳು ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದರೆ, ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮಿಸಲಾಗಿದ್ದರಿಂದ ಈ ಭಾರಿ ಅಕಾಡದಲ್ಲಿ ಬಹಳಷ್ಟು ಮೇಯರ್ ಸ್ಥಾನಕ್ಕೆ ಪ್ರಭಲ ಅಕಾಂಕ್ಷಿಗಳಾಗಿದ್ದಾರೆ. ಇದರಿಂದ ಚುನಾವಣೆಯಲ್ಲಿ ಭಾರಿ ಪೈಪೋಟಿ ನಡೆಯುವ ಸಾಧ್ಯತೆಯಿದೆ. ಆದರೆ, ಈ ಭಾರಿ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತು ಪಕ್ಷದ ಅಧೀಕೃತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿರುತ್ತಾರೆ. ಇದರಿಂದ ಈ ಭಾರಿಯ ಮೇಯರ್ ಚುನಾವಣೆಯಲ್ಲಿ ಅಲ್ಪಸಂಖ್ಯಾತರಾದ ಆಸೀಫ್ ಗೆ ಮೇಯರ್ ಸ್ಥಾನವನ್ನು ನೀಡಬೇಕೆಂಬುದು ಅವರ ಒತ್ತಾಸೆಯಾಗಿದೆ.
ನಗರದ 31ನೇ ವಾರ್ಡಿನ ಆಸೀಪ್ ಇದರಲ್ಲಿ ಅತ್ಯಂತ ಪ್ರಭಲ ಅಕಾಂಕ್ಷಿಗಳಾಗಿದ್ದಾರೆ.ಆಸೀಫ್ ಕೌಲ್ ಬಜಾರ್ ಗ್ರಾಮಾಂತರ ಪ್ರದೇಶದ ವಾರ್ಡಿನ ಸದಸ್ಯರಾಗಿದ್ದು ಕಳೆದ ಮೇಯರ್ ಚುನಾವಣೆಯಲ್ಲಿ ಸಾಮಾನ್ಯ ವರ್ಗದ ಮಹಿಳೆಗೆ ಮೇಯರ್ ಸ್ಥಾನವನ್ನು ನೀಡಲಾಗಿತ್ತು. ನಂತರದಲ್ಲಿ ತ್ರಿವೇಣಿ ಸೂರಿ ಬಿ ಶ್ವೇತಾ ಅವರನ್ನು ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಅವರಿಗೆ ಮೇಯರ್ ಸ್ಥಾನವನ್ನು ನೀಡಲಾಗಿತ್ತು.
ಆಸೀಫ್ ರವರು ಅಲ್ಪ ಸಂಖ್ಯಾತರ ಯುವ ನಾಯಕರಾಗಿದ್ದು ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿದ್ದಾರೆ. ಆದ್ದರಿಂದ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೌಲ್ ಬಜಾರ್ ನ ಮತದಾರರು ಈ ಭಾರಿಯ ಮೇಯರ್ ಸ್ಥಾನವನ್ನು ಈ ಪ್ರದೇಶದ 31ನೇ ವಾರ್ಡಿನ ಪಾಲಿಕೆ ಸದಸ್ಯರಾದ ಆಸೀಫ್ ರವರಿಗೆ ಮೇಯರ್ ಸ್ಥಾನವನ್ನು ನೀಡಲೇಬೇಕೆಂದು ಒತ್ತಾಯಿಸಿದ್ದಾರೆ. ಈ ಭಾರಿಯ ಮೇಯರ್ ಚುನಾವಣೆಯಲ್ಲಿ ಪಾಲಿಕೆಯ ಗದ್ದುಗೆ ಯಾರಿಗೆ ಒಲಿಯಲಿದೆ ಎಂಬುದು ಕಾದು ನೋಡೋಣ ಎಂಬ ಅಭಿಪ್ರಾಯ ಮತದಾರರಾಗಿದೆ.