ಅಶ್ವಿನಿ ಪುನೀತ್ ರಾಜಕುಮಾರ್  ಬಿಡುಗಡೆ ಮಾಡಿದ ದೇಸಾಯಿ ಹಾಡು

Ravi Talawar
ಅಶ್ವಿನಿ ಪುನೀತ್ ರಾಜಕುಮಾರ್  ಬಿಡುಗಡೆ ಮಾಡಿದ ದೇಸಾಯಿ ಹಾಡು
WhatsApp Group Join Now
Telegram Group Join Now
     ಶ್ರೀವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳದಗುಡ್ಡ ಕಥೆ ಬರೆದು ನಿರ್ಮಿಸಿರುವ, ನಾಗಿರೆಡ್ಡಿ ಭಡ ನಿರ್ದೇಶನದ ಹಾಗೂ ಲವ್ 360 ಚಿತ್ರದ ಖ್ಯಾತಿಯ ಪ್ರವೀಣ್ ಕುಮಾರ್ ನಾಯಕನಾಗಿ ನಟಿಸಿರುವ ‘ದೇಸಾಯಿ’ ಚಿತ್ರದ  ಒಲವು ಮೂಡುವ ಕಾಲವು ಹಾಡನ್ನು ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.
     “ಚಿತ್ರದ  ಟೀಸರ್ ಹಾಗೂ ಹಾಡು ತುಂಬಾ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ” ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್ ಈ ಹಾಡನ್ನು ಹಾಡಿದ್ದಾರೆ .
     ನಿರ್ಮಾಪಕ ಮಹಾಂತೇಶ್ ವಿ ಚೋಳಚಗುಡ್ಡ ಅವರು ಈ ಸಂದರ್ಭದಲ್ಲಿ  “ಪುನೀತ್ ರಾಜಕುಮಾರ್ ಅವರನ್ನು ಈ ಚಿತ್ರದ ನಾಯಕರಾಗಿ ಮಾಡಬೇಕೆಂದು ನನಗೆ ಆಸೆಯಿತ್ತು” ಎಂಬ ವಿಷಯವನ್ನು ತಿಳಿಸಿದರು. ಚಿತ್ರದ ನಾಯಕ ಪ್ರವೀಣ್ ಕುಮಾರ್, ನಾಯಕಿ ರಾಧ್ಯ, ನಿರ್ದೇಶಕ ನಾಗಿರೆಡ್ಡಿ ಭಡ ಹಾಗೂ ಶೋಭಾ  ಉಪಸ್ಥಿತರಿದ್ದರು.
     ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
WhatsApp Group Join Now
Telegram Group Join Now
Share This Article