ಈದ್ಗ ಮೈದಾನಕ್ಕೆ ಸಸಿ ನೀಡುವಂತೆ ವಖ್ಫ್ ಬೋರ್ಡ್ ಅಧ್ಯಕ್ಷರಿಂದ ಅರಣ್ಯ ಅಧಿಕಾರಿಗಳಿಗೆ ಮನವಿ

Ravi Talawar
ಈದ್ಗ ಮೈದಾನಕ್ಕೆ ಸಸಿ ನೀಡುವಂತೆ ವಖ್ಫ್ ಬೋರ್ಡ್ ಅಧ್ಯಕ್ಷರಿಂದ ಅರಣ್ಯ ಅಧಿಕಾರಿಗಳಿಗೆ ಮನವಿ
WhatsApp Group Join Now
Telegram Group Join Now
ಬಳ್ಳಾರಿ ಜೂ 12 . ನಗರದ ಕೌಲ್ ಬಜಾ‌ರ್ ಪ್ರದೇಶದಲ್ಲಿರುವ ಈದ್ಗಾ ಮೈದಾನದಲ್ಲಿ ಗಿಡ ಮರಗಳಿಲ್ಲದೆ ಬಿಕೋ ಎನ್ನುತ್ತಿದ್ದು . ಬಿಸಿಲು ಕಾಲದಲ್ಲಿ ಮಕ್ಕಳು ಕ್ರಿಕೇಟ್ ಆಟ ಆಡುತ್ತಾರೆ, ಮತ್ತು ಹಿರಿಯ ನಾಗರೀಕರು ಈದ್ದಾ ಮೈದಾನದಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳಲು ಬರುತ್ತಾರೆ  ಅದರಿಂದ ಗಿಡ ಮರಗಳು ನೀಡುವಂತೆ ಅರಣ್ಯ ಅಧಿಕಾರಿಗಳಿಗೆ ವಖ್ಫ್ ಬೋರ್ಡ್ ಅಧ್ಯಕ್ಷರಾದ ಹುಮಾಯೂನ್ ಖಾನ್, ಹಾಗೂ ಮಹಾನಗರ ಪಾಲಿಕೆಯ ನಾಮ ನಿರ್ದೇಶನ ಸದಸ್ಯರ ನೇತೃತ್ವದಲ್ಲಿ  ಮನವಿ ಪತ್ರ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ  ಬೋರ್ಡ ಅಧ್ಯಕ್ಷ ಹುಮಾಯುನ್ ಖಾನ್ ಮಧ್ಯಮ ಜೊತೆ ಮಾತನಾಡಿ   ವೃದ್ಧರು ಮತ್ತು ವಾಯುವಿಹಾರಕ್ಕೆ   ಈದ್ಗ ಮೈದಾನಕ್ಕೆ ಬಂದು ಹೋಗುತ್ತಾರೆ. ಇವರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಮತ್ತು ನೆರಳಿರುವುದಿಲ್ಲ. ಅಲ್ಪ ಸ್ವಲ್ಪ ಮರಗಳಿದ್ದು ಇವು ಸಾಲುತ್ತಿಲ್ಲ. ಮತ್ತು ಈದ್ಗ ಮೈದಾನದಲ್ಲಿ  ಮರ ಗಿಡಗಳನ್ನು ನೆಡಲು ಸಾಕಷ್ಟು ಸ್ಥಳಾವಕಾಶ ಇರುತ್ತದೆ.
ಈಗ ಮಳೆಗಾಲವಾದ್ದರಿಂದ ಸಸಿಗಳನ್ನು ನೆಟ್ಟಿದರೆ ಅದು ಗಿಡವಾಗಿ ಮರವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು . ಕಾರಣ ಈದ್ದಾ ಮೈದಾನದಲ್ಲಿ ಸಸಿ ನೆಡಲು ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ನಾಮ ನಿರ್ದೇಶನ ಸದಸ್ಯರಾದ ಆರ್ಷದ್, ಸಮೀರ್ ಮುಖಂಡರುಗಳಾದ, ರಫೀಕ್ ಸಬ್, ಧರ್ಮಗುರು ಮುಜಮಿಲ್,ಅನ್ವರ್, (ಅನ್ನು ) ಬಾಬಾಲಿ, ಸೇರಿದಂತೆ ಅನೇಕ ಜನರಿದ್ದರು
WhatsApp Group Join Now
Telegram Group Join Now
Share This Article