ಕಬ್ಬಿನ ದರ ಇಳುವರಿಗೆ ರೂ.3400/- ನ್ಯಾಯಸಮತವಲ್ಲ: ಕುರೂಬುರ ಶಾಂತಕುಮಾರ 

Ravi Talawar
ಕಬ್ಬಿನ ದರ ಇಳುವರಿಗೆ ರೂ.3400/- ನ್ಯಾಯಸಮತವಲ್ಲ: ಕುರೂಬುರ ಶಾಂತಕುಮಾರ 
WhatsApp Group Join Now
Telegram Group Join Now
ಬೆಳಗಾವಿ.ಪ್ರಸಕ್ತ ಸಾಲಿನ ಕಬ್ಬಿನ ಎಫ್ ಆರ್ ಪಿ ದರ 10.25 ಇಳುವರಿಗೆ 3400 ನ್ಯಾಯ ಸಮ್ಮತವಲ್ಲ. ಕಬ್ಬಿನ ಬಾಕಿ ಬಡ್ಡಿ ಸಮೇತ ರೈತರಿಗೆ ಪಾವತಿಸಲಿ, ಬರಗಾಲದಿಂದ ತತ್ತರಿಸಿ ಬಾವಿಗಳಲ್ಲಿ ನೀರು ಕುಸಿತವಾಗಿ ಕಬ್ಬಿನ ಇಳುವರಿ ಶೇಕಡ 30ರಷ್ಟು ಕಡಿಮೆಯಾಗಿರುವಾಗಲೇ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿ ಕಬ್ಬಿನ ಎಪ್ಆರ್‌ಪಿ ಬೆಲೆ ನಿಗದಿ ಮಾಡಿರುವುದು ನ್ಯಾಯ ಸಮ್ಮತವಲ್ಲ. ಸಕ್ಕರೆ ಕಾರ್ಖಾನೆಗಳು ಇಳುವರಿ ಕಡಿಮೆ ತೋರಿಸುವ ಕಾರಣ ಹೆಚ್ಚಿನ ಬೆಲೆ ಸಿಗಲು ಸಾಧ್ಯವಾಗುತ್ತಿಲ್ಲ ಕೇಂದ್ರ ಸರ್ಕಾರ ಕಬ್ಬುಭೆಳೆಗಾರ ರೈತರ ಗಾಯದ ಮೇಲೆ ತುಪ್ಪ ಸವರಿ ಬರೆ ಎಳೆದಿದೆ.
ರಾಜ್ಯ ಸರ್ಕಾರ ರೈತರಿಗೆ ನೀಡುವ ಸವಲತ್ತುಗಳನ್ನು ಆಪ್ ಗಳ ಮೂಲಕ ವಿತರಿಸುತ್ತಿದೆ. ಆದರೆ 25000 ಕೋಟಿ ಹಣಕಾಸಿನ ವೈವಾಟು ನಡೆಸುವ ಸಕ್ಕರೆ ಕಾರ್ಖಾನೆಗಳ.ವ್ಯವಹಾರ ಆಪ್ ಮೂಲಕ ಯಾಕೆ ಮಾಡುತ್ತಿಲ್ಲ.
 ಕಬ್ಬು ಬೆಳೆಗಾರರ  ದ್ವಿಪಕ್ಷೀಯ ಒಪ್ಪಂದ. ಕಬ್ಬಿನ ತೂಕ ಸಂದೇಶ. ಕಬ್ಬಿನ ಹಣ ಪಾವತಿ ಸಂದೇಶ
. ಸಕ್ಕರೆ ಇಳುವರಿ ಸಂದೇಶ ನೀಡುವ ಆಪನ್ನು ಸಿದ್ದಗೊಳಿಸ ಲಾಗಿದ್ದರೂ.  ರಾಜ್ಯ ಸರ್ಕಾರ ಯಾಕೆ ಜಾರಿ ಮಾಡಿಲ್ಲ. ಸಕ್ಕರೆ ಕಾರ್ಖಾನೆಗಳ ಒತ್ತಡಕ್ಕೆ ಮಣಿದು ರೈತರಿಗೆ ವ್ಯವಸ್ಥಿತ ವಂಚನೆ ನಡೆಸಲು ಸಹಕಾರ ನೀಡುತ್ತಿದೆಯ ಎಂಬುದು ಅನುಮಾನ ಮೂಡಿಸುತ್ತಿದೆ
ಕಳೆದ ಎಂಟು ತಿಂಗಳಿಂದ ಸಕ್ಕರೆ ಕಾರ್ಖಾನೆಗಳು ಸುಮಾರು 700 ಕೋಟಿ ರೂ ಕಬ್ಬಿನ ಹಣ ರೈತರಿಗೆ ಪಾವತಿಸಿಲ್ಲ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಇಂಥ ಕಾರ್ಖಾನೆಗಳನ್ನು ಸರ್ಕಾರ ಮುಟ್ಟುಗೂಲು ಹಾಕಿಕೊಳ್ಳಲಿ ಇಂತಹ ಮಾಲೀಕರ ವಿರುದ್ಧ ಕ್ರಿಮಿನಲ್ ಮುಖದಮ್ಮೆ ದಾಖಲಿಸಲಿ.
ಕೃಷಿ ಪಂಪ್ ಸೆಟ್ಗಳಿಗೆ ಸಂಪರ್ಕ ಪಡೆಯಲು ಅಕ್ರಮ ಸಕ್ರಮ ಯೋಜನೆಯಲ್ಲಿ ದುಪ್ಪಟ್ಟು ದಂಡ ವಸೂಲಿ ಮಾಡುವ ವಿದ್ಯುತ್ ನಿಗಮಗಳು 2 ಲಕ್ಷ ರೂಪಾಯಿ ಖರ್ಚು ಮಾಡಿ ರೈತರೇ ಸ್ವಂತ ಟಿ ಸಿ ಖರೀದಿಸಬೇಕೆಂಬ ನಿಯಮ ಜಾರಿ ಮಾಡಿ ಅಘಾತ ಮಾಡಿದ್ದಾರೆ. ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಬರೆ ಹಾಕುವುದು ಬೇಡ ಕೂಡಲೇ ವಾಪಸ್ ಪಡೆಯಬೇಕು
ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರ್ ಶಾಂತಕುಮಾರ್ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದರು
ಕೇಂದ್ರ ಸರ್ಕಾರ. ಬರ. ಮಳೆಹಾನಿ. ಅತಿವೃಷ್ಟಿ ಹಾನಿ ಮಳೆ ವಿಪ್ಪತ್ತು ನಷ್ಟ ಪರಿಹಾರದ. ಎನ್ ಡಿಆರ್‌ಎಫ್ ಮಾನದಂಡ ತಿದ್ದುಪಡಿ ಮಾಡಿ ಬೆಳೆ ನಷ್ಟದ ಸಂಪೂರ್ಣ ಹಣ ನೀಡಬೇಕು ಇಲ್ಲದಿದ್ದರೆ ಬರ. ಅತಿವೃಷ್ಟಿ ಮಳೆ ಹಾನಿ. ಒಳಗಾದ ರೈತರ ಬೆಳೆ ಸಾಲ ಸಂಪೂರ್ಣ ಮನ್ನ ಮಾಡುವ ನೀತಿ ಜಾರಿಗೆ ತರಬೇಕು ಎಲ್ಲಾ ರೀತಿಯ ಬೆಳೆಗಳಿಗೂ ಅನ್ವಯವಾಗುವಂತ ಪರಿಹಾರ ನೀಡುವ ನೀತಿ ಜಾರಿಗೆ ತರಬೇಕು ಈ ಬಗ್ಗೆ ರಾಜ್ಯದ ನೂತನ ಸಂಸದರು ಒತ್ತಾಯಿಸಬೇಕು
ರಾಜ್ಯದಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ಹಾಲಿನ ಪ್ರೋತ್ಸಾಹ ಧನ ಲೀಟರಿಗೆ ಐದು ರೂಪಾಯಿ
ಎಂಟು ತಿಂಗಳಿಂದಲೂ ಬಿಡುಗಡೆಯಾಗಿಲ್ಲ ಸುಮಾರು 750 ಕೋಟಿ ಹಣ ಕೂಡಲೇ ಬಿಡುಗಡೆ ಮಾಡಿ ಹೈನುಗಾರಿಕೆ ರೈತರನ್ನು ರಕ್ಷಿಸಬೇಕು ಹಸುಗಳ ತಿಂಡಿ .ಆಹಾರ. ದುಬಾರಿಯಾಗಿದೆ ಇದರಿಂದ ರೈತರು ಸಂಕಷ್ಟ ಪಡುತ್ತಿದ್ದಾರೆ
ಕಳಪೆ ರಸಗೊಬ್ಬರ ಕೀಟನಾಶಕ ಬಿತ್ತಲೆ ಬೀಜ ಮಾರಾಟ ಮಾಡುವ ಮಾರಾಟಗಾರರಿಗೆ ಜಾಮೀನು ರಹಿತ ಬಂಧನ ಮಾಡುವ ಕಠಿಣ ಕಾನೂನು ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕು. ಇದರಿಂದ ರೈತರಿಗೆ ಮೋಸವಾಗುವುದು ತಪ್ಪುತ್ತದೆ.
ಬೆಳಗಾವಿ ಜಿಲ್ಲೆಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಹಣವನ್ನು ರೈತರಿಗೆ ಮೋಸ ಮಾಡಿ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಹಣ ಗುಳಂ ಮಾಡಿರುವ. ಅಧಿಕಾರಿಗಳ ವಿರುದ್ಧ  ರೈತ ಸಂಘಟನೆ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟ  ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇದು ಭ್ರಷ್ಟಾಚಾರ ಅಧಿಕಾರಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ
ಪತ್ರಿಕಾ ಗೋಷ್ಟಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಸುರೇಶ್ ಮಾ ಪಾಟೀಲ್. ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ ಕೋಟಗಿ. ರಾಜ್ಯ ಸಂಘಟನಾ ಕಾರ್ಯದರ್ಶಿ, ಹತ್ತಳ್ಳಿ ದೇವರಾಜ್. ಜಿಲ್ಲಾ ಕಾರ್ಯದರ್ಶಿ ಎಸ್ ಬಿ ಸಿದ್ದಾಳ್. ಧಾರವಾಡ ಜಿಲ್ಲೆ ಕಾರ್ಯದರ್ಶಿ ಪರಶುರಾಮ್ ಎತ್ತಿನಗುಡ್ಡ.  ರಮೇಶ್ ಹಿರೇಮಠ .ಶಾಸಪ್ಪ ನಾವಿ ಇದ್ದರು
ಕರ್ನಾಟಕದ ಸಂಸದರಾದ ಪ್ರಹ್ಲಾದ್ ಜೋಶಿ. ಎಚ್ ಡಿ ಕುಮಾರಸ್ವಾಮಿ. ಶೋಭಾ ಕರಂದ್ಲಾಜೆ. ಹಾಗೂ ವಿ ಸೋಮಣ್ಣನವರು ಕೇಂದ್ರ ಸಚಿವರಾಗಿರುವುದಕ್ಕೆ ಅಭಿನಂದನೆಗಳು
ಕರ್ನಾಟಕದ ನಾಲ್ಕು ಸಂಸದರು ಕೇಂದ್ರ ಸಚಿವರಾಗಿರುವುದರಿಂದ ಕರ್ನಾಟಕದ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ಭಾವಿಸುತ್ತೇನೆ. ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳೊಂದಿಗೆ ಸಮಸ್ಯೆಗಳು ಉಂಟಾದರೆ ಕೇಂದ್ರ ಸಚಿವರು ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿ. ಸಮಸ್ಯೆಗಳ ಬಗೆಹರಿಸಲು ಮುಂದಾಗಬೇಕು. ನೆಲ ಜಲ ಹಾಗೂ ಭಾಷೆ ವಿಚಾರದಲ್ಲಿ ನಮ್ಮ ರಾಜ್ಯದ ಜನರ ಹಾಗೂ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಜಿಎಸ್ಟಿಯಿಂದ ಕರ್ನಾಟಕಕ್ಕೆ ಬರಬೇಕಾದ ರಾಜ್ಯದ ಪಾಲಿನ ಹಣ ಹಾಗೂ ಫಸಲ್ ಭೀಮ ಸೇರಿದಂತೆ ವಿವಿಧ ರೈತ ಯೋಜನೆಗಳಿಂದ ರೈತರಿಗೆ ಬರಬೇಕಾಗಿರುವ ಬರ ಪರಿಹಾರದ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲು ಸಚಿವರುಗಳು ಕಾರ್ಯನಿರ್ವಹಿಸಬೇಕು. ರಾಜ್ಯದ ಮಹಾದಾಯಿ ನದಿ ನೀರಿನ ವಿವಾದ. ಕಾವೇರಿ ನೀರಿನ  ಸಮಸ್ಯೆಗೆ ಪರಿಹಾರ ಸೂಚಿಸಬೇಕು  ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಜಾರಿ ಬಗ್ಗೆ  ಕೇಂದ್ರ ಸಚಿವರು ರಾಜಕೀಯ ಮರೆತು ರಾಜ್ಯ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿ ರಾಜ್ಯದ ಏಳಿಗೆಗೆ ಶ್ರಮಿಸಬೇಕು ಆಲಮಟ್ಟಿ ಸೇರಿದಂತೆ ಕಾವೇರಿ ವಿಚಾರವಾಗಿ ರಾಜ್ಯದ ರೈತರಿಗೆ ಬಹಳ ವರ್ಷಗಳಿಂದ ಅನ್ಯಾಯವಾಗುತ್ತಿದೆ. ನಮ್ಮ ಪ್ರತಿನಿಧಿಯಾಗಿ ಸಂಸತ್ತಿನಲ್ಲಿ ಚರ್ಚಿಸಿ ನಮಗೆ ನ್ಯಾಯ ಒದಗಿಸಲು ಮುಂದಾಗಬೇಕು. ಜನರು ಕೊಟ್ಟ ತೀರ್ಪನ್ನು ರಾಜ್ಯ ಸರ್ಕಾರ ಸ್ವೀಕರಿಸಿ ಕೇಂದ್ರದೊಂದಿಗೆ ದ್ವೇಷ ಬೆಳೆಸದೆ ಕೇಂದ್ರ ಸಚಿವರೊಂದಿಗೆ ಮುಕ್ತವಾಗಿ ಚರ್ಚಿಸಿ ರಾಜ್ಯದ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕೆಂದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬುರ್ ಶಾಂತಕುಮಾರ್ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ
WhatsApp Group Join Now
Telegram Group Join Now
Share This Article