ರಾಯಬಾಗ,11: ನೀಟ್ ಪರೀಕ್ಷೆಯಲ್ಲಿ ಗ್ರಾಮದ ಐದು ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, ಉನ್ನತಮಟ್ಟಕ್ಕೆ ಹೋಗಿ ಗ್ರಾಮಕ್ಕೆ ಹಾಗೂ ತಾಲೂಕಿಗೆ ಕೀರ್ತಿ ತರಬೇಕು ಎಂದು ಯುವಮುಖಂಡ ಚೇತನ ಕಾಟೆ ಹೇಳಿದರು.
ಗ್ರಾಮದಲ್ಲಿ ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕಲ್ಲಪ್ಪಣ್ಣ ಕಾಟೆ ಸಹಕಾರಿ ಸಂಘ ಹಾಗೂ ಅಷ್ಟು ವಿನಾಯಕ ಪಿಕೆಪಿಎಸ್ ವತಿಯಿಂದ ಸತ್ಕಾರ ನೆರವೇರಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆ ಮಾಡಿರುವುದು ಸಂತಸ. ಈಗಾಗಲೆ ವಿವಿಧ ಕ್ಷೇತ್ರದಲ್ಲಿ ಗ್ರಾಮದ ಯುವಕರು ಸಾಧನೆ ಮಾಡುತ್ತಿದ್ದಾರೆ ಹಾಗೂ ಮಾಡಿದ್ದಾರೆ. ಅವರಂತೆ ತಾವು ಹಿರಿಯರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಸಾಧನೆ ಮಾಡಿ ಎಂದು ಸಲಹೆ ನೀಡಿದರು.
ಸಮೇದ ಟಿಕ್ಕೆ(664), ಆದರ್ಶ ಹಂಜೆ(643), ಆದರ್ಶ ಕಾಮಗೌಡ(640), ಆಯುಷ್ ಮಗದುಮ್( 590) ಹಾಗೂ ಓಂಕಾರ ಕಾಂಬಳೆ(536), ಸಾಧನೆ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಕಾಟೆ, ಅನಿಲ ಹಂಜೆ, ಆದಿರಾಜ ಪಾಟೀಲ, ಅರುಣ ಶಿಂಧೆ, ಭರತ ಲೊಟೆ, ಬಾಹುಬಲಿ ಜನಾಜ, ಗಣಪತಿ ಕಾಟೆ, ಅನ್ನಪ್ಪ ಖೋತ, ಸುಭಾಷ ಮಂಗಸುಳೆ, ಸುಭಾಷ ಹಂಜೆ, ಸುರೇಶ ಕಾಟೆ ವಸಂತ ಜಾದವ, ಜೈಸಿಂಗರಾವ ದೇಸಾಯಿ ಬಾಹುಬಲಿ ಜನಾಜ,ಸಂಜು ಯಾಮಾಜೆ ಸಂಘದ ನಿರ್ದೇಶಕರು ಸದಸ್ಯರು ಉಪಸ್ಥಿತರಿದ್ದರು.